ಸೌತ್‌ ಜೋಡಿ ಜ್ಯೋತಿಕಾ-ಸೂರ್ಯ ಅವರ ಪುತ್ರಿ ಯಾರು ಗೊತ್ತೇ? ಅಮ್ಮನನ್ನೇ ಮೀರಿಸುವ ಸೌಂದರ್ಯವತಿ ಹೇಗಿದ್ದಾರೆ ನೀವೇ ನೋಡಿ! ಪೋಟೋಸ್‌ ವೈರಲ್!!‌

Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
 

1 /9

ಸೂರ್ಯ ತಮಿಳು ಚಿತ್ರರಂಗದ ಪ್ರಮುಖ ನಟ. ದಿಗ್ಗಜ ನಟ ಶಿವಕುಮಾರ್ ಅವರ ಮಗನಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸೂರ್ಯ, ಸರಣಿ ಫ್ಲಾಪ್‌ಗಳಲ್ಲಿ ಕಾಣಿಸಿಕೊಂಡರೂ ಕಡಿಮೆ ಅವಧಿಯಲ್ಲಿ ನಾಯಕ ನಟರಾದರು.  

2 /9

ನಟ ಸೂರ್ಯ ನಟಿಸಿದ ಸಿನಿಮಾಗಳು ಮೊದಲಿಗೆ ಫ್ಲಾಪ್‌ ಆದರೂ ಬಳಿಕ ನಟಿಸಿದ ಚಿತ್ರಗಳೆಲ್ಲವೂ ಹಿಟ್‌ ಆದವು.. ಅಲ್ಲಿಂದ ಇಲ್ಲಿಯವರೆಗೂ ಹಿಂದಿರುಗಿ ನೋಡಿಲ್ಲ ನಟ ಸೂರ್ಯ..  

3 /9

ಕಾಖಾ ಕಾಖಾ ಸಿನಿಮಾದಲ್ಲಿ ಜ್ಯೋತಿಕಾ ಜೊತೆ ಸೂರ್ಯ ನಟಿಸಿದಾಗ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರ, 2006 ರಲ್ಲಿ ಇಬ್ಬರೂ ಪೋಷಕರ ಒಪ್ಪಿಗೆಯ ಮೇರೆಗೆ ವಿವಾಹವಾದರು.   

4 /9

ಈಗ ಅವರಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗನಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ತಮ್ಮ ಮಕ್ಕಳ ಮೇಲೆ ಕ್ಯಾಮೆರಾದ ನೆರಳು ಸಾಧ್ಯವಾದಷ್ಟು ತಪ್ಪಿಸುತ್ತಾರೆ, ಕುಟುಂಬ ಕಾರ್ಯಕ್ರಮಗಳ ಸಮಯದಲ್ಲಿ ತೆಗೆದ ಚಿತ್ರಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ...  

5 /9

ಜ್ಯೋತಿಕಾ-ಸೂರ್ಯ ದಂಪತಿಗಳು ಈ ವರ್ಷ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ದೀಪಾವಳಿ ಸಂಭ್ರಮಿಸಿದ್ದಾರೆ ಎನ್ನಲಾಗುತ್ತಿದ್ದು, ಸಾಮಾನ್ಯವಾಗಿ ಸೂರ್ಯ-ಜ್ಯೋತಿಕಾ ದಂಪತಿಗಳು ಸೂರ್ಯ ತಂದೆ ತಾಯಿಯೊಂದಿಗೆ ದೀಪಾವಳಿ ಮತ್ತು ಪೊಂಗಲ್‌ನಂತಹ ವಿಶೇಷ ಸಂದರ್ಭಗಳನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಮುಂಬೈನಲ್ಲಿ ಆಚರಿಸಲಾಗಿದೆ ಎನ್ನಲಾಗಿದ್ದು ಅಚ್ಚರಿಗೆ ಕಾರಣವಾಗಿದೆ.  

6 /9

ಕಳೆದ ವರ್ಷ ಸೂರ್ಯ-ಜ್ಯೋತಿಕಾ ತಮ್ಮ ಮಕ್ಕಳೊಂದಿಗೆ ಮುಂಬೈಗೆ ತೆರಳಿದ್ದರು. ಮುಂಬೈನಲ್ಲಿ ನೆಲೆಸಿದ ನಂತರ ಜ್ಯೋತಿಕಾ ಬಾಲಿವುಡ್ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಆ ಮೂಲಕ ಅವರು ನಟಿಸಿದ ಸೈತಾನ್ ಚಿತ್ರ ಈ ವರ್ಷ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.   

7 /9

ಅದೇ ರೀತಿ ಸೂರ್ಯ ಕೂಡ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲು ಕಮಿಟ್ ಆಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಸೂರ್ಯ ನಿರ್ಮಿಸಿದ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

8 /9

ಸೂರ್ಯ ಬಾಲಿವುಡ್ ಕಡೆಗೆ ಒಲವು ತೋರುತ್ತಿದ್ದರೂ ತಮಿಳು ಚಿತ್ರಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರ ಮುಂಬರುವ ಚಿತ್ರ ಕಂಗುವ ನವೆಂಬರ್ 14 ರಂದು ಬಿಡುಗಡೆಯಾಗಲಿದೆ.   

9 /9

ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿಯೂ ಸೂರ್ಯ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಘೋಷಣೆ ಮಾಡಿರುವುದು ಗಮನಾರ್ಹ.