ಸ್ಟ್ರಾಬೆರಿ ಕೃಷಿ ನಡೆಸಲು ಸಿಗುತ್ತದೆ ಸರ್ಕಾರದ ನೆರವು. ಸ್ಟ್ರಾಬೆರಿ ಕೃಷಿ ಆರಂಭಿಸಿ ಕೈ ತುಂಬ ಹಣ ಸಂಪಾದಿಸಬಹುದು .
ನವದೆಹಲಿ : ಕರೋನಾ (Coronavirus) ಅವಧಿಯಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರ ವೇತನವನ್ನು(Salary) ಕಡಿತಗೊಳಿಸಲಾಗಿದೆ. ಇದಾದ ನಂತರ ಅದೆಷ್ಟೋ ಜನ ಉಪ ಕಸುಬನ್ನು ಶುರುಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕೃಷಿಯತ್ತ ಮುಖ ಮಾಡಿದ್ದಾರೆ. ಇಲ್ಲಿ ನಾವು ಹೇಳಲು ಹೊರಟಿರುವುದು ಇಂಥದ್ದೇ ಒಂದು ಸುದ್ದಿಯನ್ನು. ಇಲ್ಲಿ ಯುವಕರು ಸ್ಟ್ರಾಬೆರಿ ಕೃಷಿಯತ್ತ (Strawberry Cultivation) ಮುಖ ಮಾಡಿದ್ದಾರೆ. ಅಲ್ಲದೆ ಇದರಲ್ಲಿ ಅಧಿಕ ಲಾಭ ಕೂಡಾ ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇತ್ತೀಚೆಗೆ, ಯುವಕರ ಗುಂಪೊಂದು ಕೆಲಸದಿಂದ ಹೊರ ಬಂದು ಸ್ಟ್ರಾಬೆರಿ ಕೃಷಿ (Strawberry Cultivation) ಮಾಡಲು ನಿರ್ಧರಿಸಿದೆ. ಅಲ್ಲದೆ ಈ ಕೃಷಿಯಲ್ಲಿ ಉತ್ತಮ ಇಳುವರಿ ಬಂದಿದ್ದು, ಲಕ್ಷಾಂತರ ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ.
ಸ್ಟ್ರಾಬೆರಿ ಕೃಷಿ ಮಾಡಲು ಹೆಚ್ಚು ಭೂಮಿಯ ಅಗತ್ಯವಿಲ್ಲ. ಕೇವಲ ಆದರಿಂದ ಎರಡು ಎಕರೆ ಪ್ರದೇಶದಲ್ಲಿ ಈ ಕೃಷಿಯನ್ನು ಸುಲಭವಾಗಿ ಆರಂಭಿಸಬಹುದು. ಒಂದು ಸ್ಟ್ರಾಬೆರಿ ಗಿಡವನ್ನು ನೆಡಲು ತಗಲುವ ವೆಚ್ಚ 300 ರೂಪಾಯಿಗಳಿಗಿಂತ ಕಡಿಮೆ. ಸಸಿಯನ್ನು ಹಾಕಿದ 3 ವರ್ಷಗಳಲ್ಲಿ ಉತ್ಪಾದನೆ ಪ್ರಾರಂಭಿಸುತ್ತದೆ.
ಸಸ್ಯವನ್ನು ನೆಟ್ಟ ನಂತರ, ಹಣ್ಣು ಬಿಡಲು 3 ವರ್ಷಗಳು ಬೇಕಾಗುತ್ತದೆ. ಒಂದು ಗಿಡದಲ್ಲಿ ಸುಮಾರು 60 ರಿಂದ 70 ಕೆಜಿ ಸ್ಟ್ರಾಬೆರಿ ಬೆಳೆಯುತ್ತದೆ. ಉತ್ತಮ ಬೆಳೆ ಬಂದರೆ ಒಂದು ಸಸಿಯಿಂದ ಸುಮಾರು 50 ಸಾವಿರ ಗಳಿಸಬಹುದು.
ಕಾಶ್ಮೀರ ಕಣಿವೆ, ಡೆಹ್ರಾಡೂನ್, ನೈನಿತಾಲ್, ಸಾಂಗ್ಲಿ, ಮಹಾಬಲೇಶ್ವರ ಮುಂತಾದ ತಂಪಾದ ಪ್ರದೇಶಗಳಲ್ಲಿ ಸ್ಟ್ರಾಬೆರಿ ಚೆನ್ನಾಗಿ ಬೆಳೆಯುತ್ತದೆ. ಸ್ಟ್ರಾಬೆರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಸ್ಟ್ರಾಬೆರಿಗೆ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ರೈತರು. ರೈತರು ತಮ್ಮ ಬೆಳೆಗಳನ್ನು ಗುತ್ತಿಗೆದಾರರ ಮೂಲಕ ವಿದೇಶಕ್ಕೆ ಕಳುಹಿಸುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಾರೆ.
ಕೇಂದ್ರ ಸರ್ಕಾರದ ಹೊರತಾಗಿ ರಾಜ್ಯ ಸರ್ಕಾರವು ಆಧುನಿಕ ಕೃಷಿಯತ್ತಲೂ ಗಮನ ಹರಿಸುತ್ತಿದೆ. ಸ್ಟ್ರಾಬೆರಿ ತೋಟಗಾರಿಕೆಗೆ ಸಹಾಯವನ್ನು ಸರ್ಕಾರಿ ಯೋಜನೆಗಳ ಮೂಲಕ ಪಡೆಯಬಹುದು. ಬೇಸಿಗೆ ಕಾಲದಲ್ಲಿ ಈ ಕೃಷಿಯನ್ನು ಪ್ರಾರಂಭಿಸಿದರೆ, ಸ್ಟ್ರಾಬೆರಿ ಕೃಷಿಯ ವಿಧಾನಗಳನ್ನು ಕಲಿಯಲು ಸಾಧ್ಯವಾಗುತ್ತದೆ. 3 ವರ್ಷಗಳ ಉತ್ತಮ ಬೆಳೆ ಬರುತ್ತದೆ.