ಮೇಷ ರಾಶಿಯಲ್ಲಿ ಒಂದು ತಿಂಗಳವರೆಗೆ ಸೂರ್ಯ ಇರುವಾಗ 4 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ. ಹಾಗಿದ್ದರೆ ಸೂರ್ಯದೇವ ದಯೆ ತೋರುವ ಅದೃಷ್ಟ ರಾಶಿಗಳು ಯಾವುವು ನೋಡೋಣ.
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುತ್ತಾನೆ. ಈ ರೀತಿಯಾಗಿ, ಸೂರ್ಯನು ಒಂದು ವರ್ಷದಲ್ಲಿ ಎಲ್ಲಾ 12 ರಾಶಿಗಳಲ್ಲಿ ಪ್ರಸರಣದ ಚಕ್ರವನ್ನು ಪೂರ್ಣಗೊಳಿಸುತ್ತಾನೆ. ಏಪ್ರಿಲ್ 14 ರಂದು, ಸೂರ್ಯನು 12 ನೇ ರಾಶಿಯಾದ ಮೀನ ರಾಶಿಯನ್ನು ತೊರೆದು ಮತ್ತೆ ಮೇಷವನ್ನು ಪ್ರವೇಶಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಏಪ್ರಿಲ್ 14 ರಂದು ಮಧ್ಯಾಹ್ನ 03.12 ಕ್ಕೆ ಸೂರ್ಯ ಮೇಷ ರಾಶಿಗೆ ಕಾಲಿಡುತ್ತಾನೆ. ಇದರ ನಂತರ ಸೂರ್ಯನು ಮೇಷ ರಾಶಿಯಲ್ಲಿ 1 ತಿಂಗಳ ಕಾಲ ಇರಲಿದ್ದಾನೆ. ಮತ್ತೆ ಮೇ 15 ರಂದು ಬೆಳಿಗ್ಗೆ 11.58 ಕ್ಕೆ ವೃಷಭ ರಾಶಿಗೆ ಪ್ರವೇಶವಾಗುತ್ತದೆ. ಮೇಷ ರಾಶಿಯಲ್ಲಿ ಒಂದು ತಿಂಗಳವರೆಗೆ ಸೂರ್ಯ ಇರುವಾಗ 4 ರಾಶಿಯವರ ಅದೃಷ್ಟವನ್ನು ಬೆಳಗುತ್ತಾನೆ. ಹಾಗಿದ್ದರೆ ಸೂರ್ಯದೇವ ದಯೆ ತೋರುವ ಅದೃಷ್ಟ ರಾಶಿಗಳು ಯಾವುವು ನೋಡೋಣ.
ಮೇಷ ರಾಶಿ : ಸೂರ್ಯನ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಶುಭಕರವಾಗಿರುತ್ತದೆ. ಸೂರ್ಯನು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ. . ವ್ಯಾಪಾರ ವೃದ್ಧಿಯಾಗಲಿದೆ.
ಮಿಥುನ ರಾಶಿ : ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಹಲವು ರೀತಿಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯಮಿಗಳು ಲಾಭ ಗಳಿಸುವ ಅವಕಾಶವನ್ನು ಪಡೆಯುತ್ತಾರೆ. ಆದಾಯ ಹೆಚ್ಚಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವಿದೇಶ ಪ್ರಯಾಣ ಯೋಗ ಕೂಡಿ ಬರಬಹುದು.
ಸಿಂಹ ರಾಶಿ : ಸೂರ್ಯನ ಸಂಚಾರವು ಸಿಂಹ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಈ ರಾಶಿಯವರ ಮೇಲೆ ಯಾವಾಗಲೂ ದಯೆ ತೋರುತ್ತಾನೆ. ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಅವಕಾಶ ಸಿಗಬಹುದು. ವೇತನ ಹೆಚ್ಚಾಗಬಹುದು. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆಯಾಗುತ್ತವೆ.
ವೃಶ್ಚಿಕ ರಾಶಿ : ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಲಾಭವನ್ನು ನೀಡುತ್ತದೆ. ಹೆಚ್ಚುತ್ತಿರುವ ಆದಾಯದಿಂದ ನೆಮ್ಮದಿ ಸಿಗಲಿದೆ. ಹೊರಗೆ ಉಳಿದಿರುವ ಹಣ ಬಂದು ಕೈ ಸೇರಲಿದೆ ಆರೋಗ್ಯ ಉತ್ತಮವಾಗಿರುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)