ಸುಟ್ಟು ಕರಕಲಾದ ಮನೆಯಲ್ಲಿ ತನ್ನ ಮರಿಗಳಿಗಾಗಿ ತಾಯಿ ಹುಡುಕಾಟ, ಇಲ್ಲಿದೆ ಮನಕಲಕುವ ದೃಶ್ಯ

ಮನೆಗೆ ಬೆಂಕಿ ತಗುಲಿ ನಾಯಿಯ 7 ಮರಿಗಳು ಸಾವನ್ನಪ್ಪಿವೆ. 

ನವದೆಹಲಿ : ಅದು ಮನುಷ್ಯರಾಗಿರಲಿ ಅಥವಾ ಪ್ರಾಣಿಯಾಗಿರಲಿ, ಯಾವುದೇ ತಾಯಿ ತನ್ನ ಮಕ್ಕಳನ್ನು ಕಳೆದುಕೊಂಡರೆ ಅದರ ನೋವು ಹೇಳ ತೀರದು. ಕೋಲ್ಕತ್ತಾದ ಸಿಂತಿ ರಾಮಲೀಲಾ ಗಾರ್ಡನ್‌ನಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿದೆ. ಮನೆಗೆ ಬೆಂಕಿ ತಗುಲಿ ನಾಯಿಯ 7 ಮರಿಗಳು ಸಾವನ್ನಪ್ಪಿವೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರು ದುರಂತದಿಂದ ಪಾರಾಗಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಕೋಲ್ಕತ್ತಾದ ಸಿಂಥಿಯಲ್ಲಿ ಬೆಂಕಿಯಿಂದಾಗಿ ಎಲ್ಲವೂ ಸುಟ್ಟು ಬೂದಿಯಾಗಿದೆ. ಅವಶೇಷಗಳ ಚಿತ್ರವು ಸುತ್ತಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ನಾಯಿಯೊಂದು ಬೂದಿಯನ್ನು ಅಗೆದು ತನ್ನ ಮಕ್ಕಳನ್ನು ಹುಡುಕಾಡುತ್ತಿರುವ ದೃಶ್ಯ ಮನ ಕಲಕುವಂತಿದೆ

2 /6

7 ನಾಯಿಮರಿಗಳು ಎಲ್ಲಿಗೆ ಹೋದವು? ತಾಯಿ ನಾಯಿ ತನ್ನ ಮಕ್ಕಳನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಅಲೆದಾಡುತ್ತಿದೆ. ಈ ದೃಶ್ಯವನ್ನು ಝೀ ನ್ಯೂಸ್ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದೆ. 

3 /6

ಸಿಂತಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಲೀಲಾ ಬಗಾನ್‌ನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಇಡೀ ಮನೆ ಸುಟ್ಟು ಬೂದಿಯಾಗಿದೆ.   

4 /6

ಅಶೋಕ್ ಚಂದ್ರಬಾಬು ಮತ್ತು ಅವರ ಕುಟುಂಬ ಸದಸ್ಯರು ಹೇಗೋ ಬದುಕುಳಿದಿದ್ದಾರೆ. ಆದರೆ, ಮನೆಯ ಹೊರಗೆ ಏನನ್ನೂ ತರಲಾಗಲಿಲ್ಲ. ಬೆಂಕಿಯು ಎಲ್ಲವನ್ನೂ ನುಂಗಿ ಹಾಕಿದೆ. 

5 /6

ಅಶೋಕ್ ಬಾಬು ಎಂಬುವವರ ಮನೆಯ ಪಕ್ಕದಲ್ಲೇ 7 ನಾಯಿಮರಿಗಳು ಹುಟ್ಟಿವೆ. ಆ ನಾಯಿಮರಿಗಳು ಕೇವಲ 2-3 ದಿನಗಳ ಹಿಂದೆ ಜನಿಸಿದವು. ಬೆಂಕಿ ಕಾಣಿಸಿಕೊಂಡ ನಂತರ ಆ ನಾಯಿಮರಿಗಳ ಯಾವುದೇ ಕುರುಹು ಕಂಡುಬಂದಿಲ್ಲ.  

6 /6

ಬೆಂಕಿ ತಗುಲಿ ನಾಯಿ ಮರಿಗಳು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ವೇಳೆ ನಾಯಿ ಮರಿಗಳಿಗೆ ಜನ್ಮ ನೀಡಿದ ತಾಯಿ ತನ್ನ ಮರಿಗಳನ್ನು ಹುಡುಕುತ್ತಾ ಅಲೆಯುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು.