Malavika Mohanan on Prabhas : ಮಲ್ಲು ಗರ್ಲ್ ನಟಿ ಮಾಳವಿಕಾ ಮೋಹನ್ ನಾನು ಮತ್ತು ವರಲಕ್ಷ್ಮಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಖ್ಯಾತ ಮಲಯಾಳಂ ಸಿನಿಮಾಟೋಗ್ರಾಫರ್ ಕೆ.ಯು.ಮೋಹನ್ ಪುತ್ರಿ ಮಾಳವಿಕಾ.. ಸಧ್ಯ ಪ್ರಭಾಸ್ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
ಇಂಡಸ್ಟ್ರಿಯಲ್ಲಿ ಸೌಂದರ್ಯ, ನಟನೆ, ಅದೃಷ್ಟ ಇರುವ ನಟಿಯರು ಬಹಳ ಕಡಿಮೆ. ಅಂತಹವರಲ್ಲಿ ಮಾಳವಿಕಾ ಮೋಹನ್ ಕೂಡ ಒಬ್ಬರು. ಈ ಮೋಹನಾಂಗಿ ಈಗ ತೆಲುಗಿನಲ್ಲೂ ಬ್ಯುಸಿಯಾಗಲಿದ್ದಾರೆ. ರಾಜಾ ಸಾಬ್ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
2016ರಲ್ಲಿ ಕನ್ನಡದ ನಾನು ಮತ್ತು ವರಲಕ್ಷ್ಮಿ ಎಂಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಸುಂದರಿ, ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದರು..
2019 ರಲ್ಲಿ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರದಲ್ಲಿ ಮಾಳವಿಕಾ ಮೋಹನ್ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಸೂಪರ್‌ಸ್ಟಾರ್ ಸಹೋದರಿಯಾಗಿ ಕಾಣಿಸಿಕೊಂಡಿದ್ದರು.
ಈ ಚಿತ್ರದ ನಂತರ ಮಾಳವಿಕಾ ಮೋಹನನ್ 2021 ರಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ನಟಿಗೆ ಒಳ್ಳೆಯ ಕ್ರೇಜ್ ನೀಡಿತು.
ಇತ್ತೀಚೆಗೆ, ಪಿ.ರಂಜಿತ್ ನಿರ್ದೇಶನದ 2024 ರಲ್ಲಿ ಬಿಡುಗಡೆಯಾದ ತಂಗಳನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾದ ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆಯಿತು.
ನಟಿ ಮಾಳವಿಕಾ ಪ್ರಸ್ತುತ ತಮಿಳಿನ ಸರ್ದಾರ್ 2 ಮತ್ತು ನಟ ಕಾರ್ತಿಕ್ ಅವರ ಮುಂಬರುವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ದಿ ರಾಜಾ ಸಾಬ್ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ..
ಇತ್ತೀಚಿಗೆ ಮಾಳವಿಕಾ ಸಂದರ್ಶನವೊಂದರಲ್ಲಿ.. ನಟ ಪ್ರಭಾಸ್ ಎಂದರೆ ನನಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ. ಸದ್ಯ ಸುಂದರಿಯ ಈ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನಟಿ ಮಾಳವಿಕಾ ಮೋಹನನ್ ಫೋಟೋಸ್
ನಟಿ ಮಾಳವಿಕಾ ಮೋಹನನ್ ಫೋಟೋಸ್
ನಟಿ ಮಾಳವಿಕಾ ಮೋಹನನ್ ಫೋಟೋಸ್
ನಟಿ ಮಾಳವಿಕಾ ಮೋಹನನ್ ಫೋಟೋಸ್
ನಟಿ ಮಾಳವಿಕಾ ಮೋಹನನ್ ಫೋಟೋಸ್