Kannadada Kotyadhipathi: ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಟಿವಿ ಕಾರ್ಯಕ್ರಮಗಳಲ್ಲಿ ʼಕನ್ನಡದ ಕೋಟ್ಯಾಧಿಪತಿʼ ಒಂದು ಹೆಜ್ಜೆ ಮುಂದೆಯೇ ನಿಲ್ಲುತ್ತದೆ. ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಈ ಕ್ವಿಜ್ ಕಾರ್ಯಕ್ರಮವನ್ನು ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರು ನಡೆಸಿಕೊಡುತ್ತಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಟಿವಿ ಕಾರ್ಯಕ್ರಮಗಳಲ್ಲಿ ʼಕನ್ನಡದ ಕೋಟ್ಯಾಧಿಪತಿʼ ಒಂದು ಹೆಜ್ಜೆ ಮುಂದೆಯೇ ನಿಲ್ಲುತ್ತದೆ. ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಈ ಕ್ವಿಜ್ ಕಾರ್ಯಕ್ರಮವನ್ನು ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರು ನಡೆಸಿಕೊಡುತ್ತಿದ್ದರು.
ಆದರೆ ಇದೀಗ ಅಪ್ಪು ನಮ್ಮನ್ನ ಅಗಲಿದ್ದಾರೆ. ಕಿರುತೆರೆಯಲ್ಲಿ ಮೊದಲ ಬಾರಿಗೆ ನಿರೂಪಕರಾಗಿ ಪಾದಾರ್ಪಣೆ ಮಾಡಿದ ಪುನೀತ್ ರಾಜ್ಕುಮಾರ್ ಅವರು, ತಮ್ಮ ಮುಗ್ಧ ನಿರೂಪಣೆಯಿಂದ ಜನಮನ ಗೆದ್ದಿದ್ದರು. ಇನ್ನೊಂದೆಡೆ ಆ ಕಾರ್ಯಕ್ರಮ ಒಂದಷ್ಟು ಸೀಸನ್ಗಳ ಬಳಿಕ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಆರಂಭಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ.
ಕನ್ನಡಿಗರಿಗೆ ಮೀಸಲಾಗಿದ್ದ ಈ ಕಾರ್ಯಕ್ರಮವು ಕನ್ನಡ ದೂರದರ್ಶನದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಒಂದು ಕೋಟಿ ರೂಪಾಯಿಗಳ ಬಹುಮಾನವನ್ನು ನೀಡುತ್ತಿದ್ದ ಈ ಅದ್ಭುತ ಕಾರ್ಯಕ್ರಮವನ್ನು, ನಟ ಪುನೀತ್ ರಾಜ್ಕುಮಾರ್ ನಿರೂಪಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಪ್ಪು 8 ಕೋಟಿ ರೂಪಾಯಿ ಸಂಭಾವನೆ ರೂಪದಲ್ಲಿ ಪಡೆದಿದ್ದರಂತೆ. ಆದರೆ ಆ ದುಡ್ಡನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳದ ಕರುಣಾಮಯಿ, ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು ಎನ್ನಲಾಗಿದೆ.
ಇದೀಗ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮತ್ತೆ ಪ್ರಾರಂಭವಾಗಲಿದ್ದು, ಹೊಸ ನಿರೂಪಕನನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆ ನಟ ಬೇರಾರು ಅಲ್ಲ, ಅಪ್ಪು ಪ್ರಾಣ ಸ್ನೇಹಿತ, ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದು ಹೇಳಲಾಗುತ್ತಿದೆ.
ಈ ವಿಚಾರ ಒಂದಷ್ಟು ಮೂಲಗಳಿಂದು ತಿಳಿದುಬಂದಿದ್ದು ಬಿಟ್ಟರೆ, ಯಾವುದೇ ಅಧಿಕೃತ ಹೇಳಿಕೆಗಳು ಲಭ್ಯವಾಗಿಲ್ಲ. ಮತ್ತೊಂದೆಡೆ, ಕಿಚ್ಚ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದೇ ಆದಲ್ಲಿ, ಅಪ್ಪು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸವಾಗಲಿದೆ.
ಈಗಾಗಲೇ ಕಿಚ್ಚ 'ಬಿಗ್ಬಾಸ್ ಕನ್ನಡ' ನಿರೂಪಣೆಯನ್ನ ಇನ್ಮುಂದೆ ಮಾಡುವುದಿಲ್ಲ ಎಂದು ಪೋಸ್ಟ್ ಶೇರ್ ಮಾಡಿದ್ದರು. ಈ ಬೆನ್ನಲ್ಲೇ ಇಂತಹ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವುದು ಕುತೂಹಲ ಮೂಡಿಸಿದೆ.
ಸೂಚನೆ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಅನುಸಾರ ಈ ವರದಿ ಬರೆಯಲಾಗಿದೆ. ಯಾವುದೇ ನಿಖರತೆ ಇದರಲ್ಲಿ ಒಳಗೊಂಡಿಲ್ಲ. ಜೀ ಕನ್ನಡ ನ್ಯೂಸ್ ಈ ಸುದ್ದಿಯನ್ನು ಯಾವುದೇ ಕಾರಣಕ್ಕೂ ಖಚಿತಪಡಿಸುವುದಿಲ್ಲ.