ಜಗತ್ತಿನ ಐದು ರಾಷ್ಟ್ರಗಳಲ್ಲಿ ಕತ್ತಲೆಂಬುದೇ ಇಲ್ಲ; ಸದಾ ಹೊಳೆಯುತ್ತಿರುತ್ತಾನೆ ಸೂರ್ಯ

ಜಗತ್ತಿನಲ್ಲಿ ಕೆಲವು ದೇಶಗಳಿವೆ ಇಲ್ಲಿ ಸೂರ್ಯ ನಿದ್ರೆಗೆ ಜಾರುವುದೇ ಇಲ್ಲ.  ಅಂದರೆ ಇಲ್ಲಿ ಸೂರ್ಯ ಸದಾ ಹೊಳೆಯುತ್ತಿರುತ್ತಲೇ ಇರುತ್ತಾನೆ.

ನವದೆಹಲಿ : ಜಗತ್ತಿನಲ್ಲಿ ಕೆಲವು ದೇಶಗಳಿವೆ ಇಲ್ಲಿ ಸೂರ್ಯ ನಿದ್ರೆಗೆ ಜಾರುವುದೇ ಇಲ್ಲ.  ಅಂದರೆ ಇಲ್ಲಿ ಸೂರ್ಯ ಸದಾ ಹೊಳೆಯುತ್ತಿರುತ್ತಲೇ ಇರುತ್ತಾನೆ. ಹಾಗಿದ್ದರೆ ಈ ದೇಶಗಳಲ್ಲಿ ಜನ ಮಲಗುವುದು, ಏಳುವುದು, ಊಟ ತಿಂಡಿ ಸೇರಿದಂತೆ ಜೀವನಶೈಲಿಯಲ್ಲಿ ಸಮಸ್ಯೆ ಬರುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಅಲ್ಲದೆ ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳಲೂ ಬಹುದು, ಆದರೆ ಇದು ನೂರಕ್ಕೆ ನೂರರಷ್ಟು ಸತ್ಯ. ಹಾಗಿದ್ದರೆ ಆ ಐದು ದೇಶಗಳು ಯಾವುವು ನೋಡೋಣ ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೆನಡಾದಲ್ಲಿ ವರ್ಷದ ಬಹುಪಾಲು ಹಿಮ ಹೆಪ್ಪುಗಟ್ಟುತ್ತದೆ. ಬೇಸಿಗೆಯಲ್ಲಿ ಇಲ್ಲಿ ರಾತ್ರಿ ಎನ್ನುವುದೇ ಇಲ್ಲ. ಏಕೆಂದರೆ ಇಲ್ಲಿ ಬೇಸಿಗೆಯಲ್ಲಿ ಸೂರ್ಯ ನಿರಂತರವಾಗಿ  ಹೊಳೆಯುತ್ತಾನೆ.

2 /5

 ನಾರ್ವೆ ವಿಶ್ವದ ಅತ್ಯಂತ ಸುಂದರ ದೇಶಗಳಲ್ಲಿ ಒಂದಾಗಿದೆ. ನಾರ್ವೆಯನ್ನು ಲಾಂಡ್ ಆಫ್ ದಿ ಮಿಡ್ ನೈಟ್ ಸನ್ ಎಂದು ಕರೆಯುತ್ತಾರೆ. ಇಲ್ಲಿ, ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಅಂದರೆ 76 ದಿನಗಳವರೆಗೆ 24 ಗಂಟೆಗಳ ಕಾಲ ನಿರಂತರವಾಗಿ ಹೊಳೆಯುತ್ತಿರುತ್ತಾನೆ. ಇಲ್ಲಿ ಸಂಜೆಯಾಗುತ್ತಿದ್ದಂತೆ ಸ್ವಲ್ಪ ಕತ್ತಲು ಆವರಿಸಿದಂತೆ ಕಾಣುತ್ತದೆ ಅಷ್ಟೇ.   

3 /5

 24 ಗಂಟೆಗಳಲ್ಲಿ 23 ಗಂಟೆಗಳ ಕಾಲ ಸೂರ್ಯ ಬೆಳಕು ಚೆಲ್ಲುವ ಮೊದಲ ದೇಶ ಫಿನ್ಲ್ಯಾಂಡ್. ಬೇಸಿಗೆಯಲ್ಲಿ 73 ದಿನಗಳವರೆಗೆ ಇಲ್ಲಿಕತ್ತಲಾಗುವುದಿಲ್ಲ. ಈ ಸ್ಥಳದ ಸೌಂದರ್ಯವನ್ನು ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.  

4 /5

 ಐಸ್ಲ್ಯಾಂಡ್ ಯುರೋಪಿನ ಎರಡನೇ ಅತಿದೊಡ್ಡ ದ್ವೀಪವಾಗಿದೆ. ಮಧ್ಯರಾತ್ರಿಯಲ್ಲೂ ಇಲ್ಲಿ ಸೂರ್ಯನ ಬೆಳಕು ಪಸರಿಸಿಕೊಂಡಿರುತ್ತದೆ.  

5 /5

ಅಲಾಸ್ಕಾದ ಹಿಮನದಿಗಳು ಬಹಳ ಸುಂದರವಾಗಿವೆ. ಮೇ ನಿಂದ ಜುಲೈ ವರೆಗೆ ಇಲ್ಲಿ ಸೂರ್ಯ ಬೆಳಗುತ್ತಿರುತ್ತಾನೆ. ರಾತ್ರಿ 12.30 ಕ್ಕೆ ಅಸ್ತಮಿಸುವ ಸೂರ್ಯ 51 ನಿಮಿಷಗಳ ನಂತರ ಮತ್ತೆ ಉದಯಿಸುತ್ತಾನೆ.