Raj Yoga Zodiac Signs: 2025ರ ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ರಾಜಯೋಗದಿಂದ ಅದೃಷ್ಟದ ಬೆಂಬಲ ಸಿಗಲಿದೆ. ವರ್ಷ ಪೂರ್ತಿ ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಏಳು ರಾಶಿಯವರಿಗೆ ರಾಜಯೋಗ ಶುರುವಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
7 Zodiac Signs Who Are Likely To Have Raj Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ನೇ ವರ್ಷ ಕೆಲವೊಂದು ರಾಶಿಯವರಿಗೆ ಒಳ್ಳೆಯ ಪರಿಣಾಮಗಳನ್ನ ನೀಡಿದರೆ ಇನ್ನು ಕೆಲವು ರಾಶಿಯವರಿಗೆ ಕಹಿ ಫಲಿತಾಂಶಗಳನ್ನ ನೀಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ 2025ರ ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ರಾಜಯೋಗದಿಂದ ಅದೃಷ್ಟದ ಬೆಂಬಲ ಸಿಗಲಿದೆ. ವರ್ಷ ಪೂರ್ತಿ ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಏಳು ರಾಶಿಯವರಿಗೆ ರಾಜಯೋಗ ಶುರುವಾಗಲಿದೆ. ಈ ಅವಧಿಯಲ್ಲಿ ಉದ್ದಿಮೆಯಲ್ಲಿ ಯಶಸ್ಸು ಮತ್ತು ಅಪಾರ ಆರ್ಥಿಕ ಲಾಭ ಗಳಿಸಲಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶನಿ ಹಾಗೂ ಗುರುವಿನ ಸ್ಥಾನದಿಂದ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಸಕಾರಾತ್ಮಕ ಫಲಿತಾಂಶವನ್ನು ಸಿಗಲಿವೆ. ಈ ಹಿಂದೆ ಕಂಡಿರುವಂತಹ ಆರ್ಥಿಕ ನಷ್ಟಕ್ಕೆ ಸರಿಹೊಂದುವ ರೀತಿಯಲ್ಲಿ ಹೆಚ್ಚಿನ ಲಾಭದಾಯಕ ಫಲಿತಾಂಶವನ್ನು 2025ರಲ್ಲಿ ನೀವು ಕಾಣಲಿದ್ದೀರಿ ಹಾಗೂ ಆರ್ಥಿಕವಾಗಿ ಸದೃಢಗೊಳ್ಳಲಿದ್ದೀರಿ. ವ್ಯಾಪಾರ ಹಾಗೂ ವೃತ್ತಿಯಲ್ಲಿ ದೊಡ್ಡಮಟ್ಟದ ಲಾಭ ಪಡೆದುಕೊಳ್ಳುವಂತಹ ಯೋಗವನ್ನು ಹೊಂದಿದ್ದೀರಿ. ಎಲ್ಲಾ ಅಂದುಕೊಂಡಂತೆ ನಡೆದರೆ ವೃಷಭ ರಾಶಿಯವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಾಕಷ್ಟು ಸಮಯದಿಂದ ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೂ ನೆಚ್ಚಿನ ಕೆಲಸ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಕೂಡ ನೀವು ಸಕಾರಾತ್ಮಕ ಬದಲಾವಣೆಯನ್ನು ಕಾಣಬಹುದು.
2025ರಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರಿಗೆ ಕೆಲವೊಂದು ಕಡೆ ಕಾಣಿಸಿಕೊಳ್ಳುವ ಸಮಸ್ಯೆಗಳನ್ನ ಹೊರತುಪಡಿಸಿದರೆ ಮತ್ತೆಲ್ಲಾ ಶುಭ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು. ನಿಮ್ಮ ಭಾಗ್ಯ ಸ್ಥಾನದಲ್ಲಿ ಗುರು ಇರುವ ಕಾರಣದಿಂದ ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ಜೀವನದ ಪ್ರತಿಯೊಂದು ಘಟ್ಟಗಳಲ್ಲಿ ಕೂಡ ಉತ್ತಮ ಪರಿಸ್ಥಿತಿ ಇರಲಿದೆ. ಜೀವನದಲ್ಲಿರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಹಾಗೂ ಕಷ್ಟಗಳು ಪರಿಹಾರಗೊಳ್ಳಲಿವೆ. ಈ ಹಿಂದೆ ನೀವು ಕೊಟ್ಟಿರುವಂತಹ ಕಷ್ಟಕ್ಕೆ ಹೊಸ ವರ್ಷದಲ್ಲಿ ಪ್ರತಿಫಲ ದೊರಕಲಿದೆ.
ಈ ಸಂದರ್ಭದಲ್ಲಿ ಕುಂಭ ರಾಶಿಯ ಜಾತಕದವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದ್ದರೂ ಜೀವನದಲ್ಲಿ ಏನು ಮಾಡಬೇಕು? ಅಥವಾ ಏನು ಮಾಡಬಾರದು? ಎನ್ನುವಂತಹ ಸರಿಯಾದ ಚಿತ್ರಣವನ್ನು ಅಥವಾ ಪಾಠವನ್ನು ಕಲಿಸಿಕೊಡಲಿದೆ. ಗುರುಬಲದಿಂದ ಕುಂಭ ರಾಶಿಯವರಿಗೆ ಈ ಸಂದರ್ಭದಲ್ಲಿ ಸಾಕಷ್ಟು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಹಾಗೂ ಮಾಡುವಂತಹ ಕೆಲಸದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಶನಿಯ ಕಾರಣದಿಂದ 2025ರಲ್ಲಿ ಕುಂಭ ರಾಶಿಯವರು ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ಕಾಣಲಿದ್ದೀರಿ. ನೀವು ಮಾಡುವ ಕೆಲಸ ಹಾಗೂ ವ್ಯಾಪಾರಗಳಲ್ಲಿ ಅಪಾರ ಲಾಭ ಗಳಿಸುತ್ತೀರಿ. ಹಣಕಾಸಿನ ವೃದ್ಧಿ ಕೂಡ ಕಂಡುಬರಲಿದ್ದು, ಆರ್ಥಿಕವಾಗಿ ಸಂಪೂರ್ಣವಾಗಿ ಸದೃಢರಾಗಲಿದ್ದೀರಿ.
ಈ ಸಮಯದಲ್ಲಿ ಸೂರ್ಯನ ರಾಶಿಯಾಗಿರುವಂತಹ ಸಿಂಹ ರಾಶಿಯವರು ಕೈತುಂಬಾ ಹಣವನ್ನು ಸಂಪಾದನೆ ಮಾಡಲಿದ್ದಾರೆ. ಪಾಲುದಾರಿಕೆಯ ವ್ಯಾಪಾರ ಮಾಡುತ್ತಿರುವವರಿಗೆ ಕೈತುಂಬಾ ಧನಲಾಭವಾಗಲಿದೆ. ಲವ್ ಲೈಫ್‌ನಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಲಿದ್ದು, ಎಲ್ಲಾ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ದೊರಕಲಿದೆ. ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಪ್ರಾರಂಭಿಸಲಿದ್ದೀರಿ. ಕುಟುಂಬದಲ್ಲಿ ದೀರ್ಘಕಾಲದಿಂದ ಕಂಡುಬರುತ್ತಿರುವ ಸಮಸ್ಯೆಗಳು ಕೂಡ ದೂರವಾಗಲಿದೆ. ಈ ಸಂದರ್ಭದಲ್ಲಿ ನಿರುದ್ಯೋಗಿಗಳು ತಮ್ಮ ನೆಚ್ಚಿನ ಕೆಲಸವನ್ನು ಪಡೆದುಕೊಳ್ಳುವ ಮೂಲಕ ಪ್ರಗತಿ ಕಾಣಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತಾಪತ್ರಯಗಳು ಕಂಡುಬರುವುದಿಲ್ಲ.
2025ರಲ್ಲಿ ಕನ್ಯಾ ರಾಶಿಯವರಿಗೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸಕಾರಾತ್ಮಕ ಫಲಿತಾಂಶಗಳ ಮೂಲಕ ದೇವರ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ. 2025ರಲ್ಲಿ ಯಾವುದೇ ಕೆಲಸ ಮಾಡಿದರು ಗೆಲುವು ನಿಶ್ಚಿತವಾಗಿರುತ್ತದೆ. ನೌಕರಿಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುವಂತಹ ಕನಸು ನನಸಾಗಲಿದೆ. ಸರ್ಕಾರಿ ನೌಕರಿಗಾಗಿ ತಯಾರಿ ಮಾಡಿಕೊಳ್ಳುವವರಿಗೂ ಸಹ ಸಿಹಿಸುದ್ದಿ ಪಡೆಯಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಭಾಗ್ಯದ ಬಾಗಿಲು ತೆರೆಯಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ನವಜೋಡಿಗಳಿಗೆ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಸುಖವಾಗಿ ಸಂಸಾರ ಮಾಡುವ ಅವಕಾಶ ಸಿಗಲಿದೆ.
ಮಕರ ರಾಶಿಯವರು ಉದ್ಯೋಗದ ಬಗ್ಗೆ ಯಾವುದೇ ರೀತಿಯ ಚಿಂತೆ ಪಡಬೇಕಾದ ಅಗತ್ಯವಿಲ್ಲ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕರ ರಾಶಿಯವರನ್ನು ಅತ್ಯಂತ ಬುದ್ಧಿವಂತ ರಾಶಿ ಎಂದು ಹೇಳಲಾಗಿದೆ. ತಮ್ಮ ಬುದ್ಧಿವಂತಿಕೆ ಆಧಾರದ ಮೇಲೆ ಮಕರ ರಾಶಿಯವರು ಉತ್ತಮ ಕೆಲಸ ಪಡೆದುಕೊಳ್ಳಲಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಫಲಿತಾಂಶದ ಮೂಲಕ ಒಳ್ಳೆಯ ಆದಾಯ ಸಂಪಾದಿಸುತ್ತೀರಿ. ಶನಿದೇವನ ಕೃಪೆಯಿಂದ ಈ ರಾಶಿಯವರಿಗೆ ಈಡೇರದ ಇಷ್ಟಾರ್ಥಗಳು ನೆರವೇರಲಿದ್ದು, ಇದರಿಂದ ಅವರ ಮನಸ್ಸಿಗೆ ಸಂತೋಷವಾಗುತ್ತದೆ. ಅಪಾರ ಹಣ ಗಳಿಸುವ ಅವಕಾಶವು ದೊರೆಯುತ್ತದೆ.
ಮೀನ ರಾಶಿಯವರಲ್ಲಿ ತಮ್ಮ ಕೆಲಸದ ಬಗ್ಗೆ ಇರುವಂತಹ ದೃಢತೆ ಹಾಗೂ ಪರಿಶ್ರಮದ ಮನೋಭಾವದಿಂದ ಉತ್ತಮ ಲಾಭ ಗಳಿಸುತ್ತೀರಿ. ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ ಹಾಗೂ ಹಣಕಾಸಿನ ವಿಚಾರದಲ್ಲಿ ಪ್ರಗತಿ ಹೊಂದಲಿದ್ದೀರಿ. ನಿಮ್ಮ ಅರ್ಹತೆಗೆ ತಕ್ಕಂತೆ ಸಿಗುವಂತಹ ಪ್ರತಿಯೊಂದು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿರಲಿದೆ. ಮಾರ್ಗದರ್ಶಕರ ಮೂಲಕ ನೀವು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಧನೆಯ ಶಿಖರ ಏರಲಿದ್ದೀರಿ. ಯಾವುದೇ ಕಾರಣಕ್ಕೂ ಕೆಲಸದ ವಿಚಾರದಲ್ಲಿ ನೀವು ಉದಾಸೀನ ತೋರಿಸಬಾರದು. ಕೆಲಸದಲ್ಲಿ ನೀವು ತೋರುವ ನಿಷ್ಠೆ ಹಾಗೂ ಶ್ರದ್ದೆಯ ಮೇಲೆ ನೀವು ಯಶಸ್ಸು ಗಳಿಸುತ್ತೀರಿ.