Animal World: ನೂರಾರು ವರ್ಷ ಜೀವಂತವಾಗಿರುವ ಅತ್ಯಂತ ಅಪರೂಪದ ಪ್ರಾಣಿಗಳು

ಈ ಪ್ರಾಣಿಗಳು ಜೀವಂತವಾಗಿರುವುದನ್ನು ಕಂಡು ವಿಜ್ಞಾನಿಗಳೂ ಅಚ್ಚರಿಗೊಂಡಿದ್ದಾರೆ. ಈ ಪ್ರಾಣಿಗಳ ದೀರ್ಘಾಯುಷ್ಯದ ಗುಟ್ಟಿನ ಬಗ್ಗೆ ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ.

ಜಗತ್ತಿನಲ್ಲಿ ಅನೇಕ ರೀತಿಯ ಪ್ರಾಣಿಗಳಿವೆ. ಇವುಗಳಲ್ಲಿ ಕೆಲವು ಬಹಳ ವಿಚಿತ್ರವಾಗಿವೆ. ನೀವು ಅನೇಕ ಪ್ರಾಣಿಗಳ ಬಗ್ಗೆ ಓದಿರಬಹುದು ಮತ್ತು ಕೇಳಿರಬಹುದು. ಆದರೆ ನೀವು ಅತ್ಯಂತ ಹಳೆಯ ಪ್ರಾಣಿಯ ಬಗ್ಗೆ ಕೇಳಿದ್ದೀರಾ? ನೂರಾರು ವರ್ಷಗಳಿಂದ ಜೀವಂತವಾಗಿರುವ ಅತ್ಯಂತ ಅಪರೂಪದ 5 ಪ್ರಾಣಿಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಇವುಗಳಲ್ಲಿ ಕೆಲವು ತಮ್ಮ ಸರಾಸರಿ ವಯಸ್ಸಿಗಿಂತಲೂ ಹೆಚ್ಚು ವರ್ಷಗಳ ಕಾಲ ಬದುಕಿವೆ. ಈ ಪ್ರಾಣಿಗಳು ಈ ರೀತಿ ಜೀವಂತವಾಗಿರುವುದನ್ನು ಕಂಡು ವಿಜ್ಞಾನಿಗಳೂ ಅಚ್ಚರಿಗೊಂಡಿದ್ದಾರೆ. ಈ ಪ್ರಾಣಿಗಳ ದೀರ್ಘಾಯುಷ್ಯದ ಗುಟ್ಟಿನ ಬಗ್ಗೆ ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಚಿಪ್ಪುಜೀವಿ ಸಮುದ್ರದಲ್ಲಿ ವಾಸಿಸುವ ಪ್ರಾಣಿ ಪ್ರಭೇದಕ್ಕೆ ಸೇರಿದೆ. ಅಕಶೇರುಕ ಪ್ರಾಣಿಗಳ ಜಾತಿಗೆ ಸೇರಿದ ಇವುಗಳನ್ನು ಮೃದ್ವಂಗಿಗಳು ಎಂತಲೂ ಕರೆಯುತ್ತಾರೆ. ಇವು ಸಾಮಾನ್ಯವಾಗಿ 100 ರಿಂದ 200 ವರ್ಷಗಳವರೆಗೆ ಜೀವಿಸುತ್ತದೆ. ಆದರೆ ಈ ಮಿಂಗ್ ಚಿಪ್ಪುಜೀವಿಯ ವಯಸ್ಸು ಬರೋಬ್ಬರಿ 510 ವರ್ಷ. 2006ರಲ್ಲಿ ಐಸ್ಲ್ಯಾಂಡ್ ಕರಾವಳಿಯಲ್ಲಿ ‘ಮಿಂಗ್’ ಹೆಸರಿನ ಈ ಚಿಪ್ಪುಜೀವಿ ಕಂಡುಬಂದಾಗ ಅದರ ವಯಸ್ಸು 507 ವರ್ಷಗಳು ಅಂತಾ ಹೇಳಲಾಗಿತ್ತು. ಇದರ ವಯಸ್ಸನ್ನು ಲೆಕ್ಕಾಚಾರ ಮಾಡಲು ಸಂಶೋಧಕರು ಅದರ ಶೆಲ್‌ನಲ್ಲಿರುವ ಬ್ಯಾಂಡ್‌ಗಳನ್ನು ಎಣಿಸಿದ್ದರಂತೆ. ಸಮುದ್ರದಿಂದ ಮೀನು ಹಿಡಿಯುವಾಗ ಈ ಸಮುದ್ರವಾಸಿ ಬಲೆಗೆ ಬಿದ್ದಿತ್ತು.

2 /5

ಬೌಹೆಡ್ ತಿಮಿಂಗಲವು ಕೂಡ ದೀರ್ಘಾಯುಷಿ. ಇದು ಆರ್ಕ್ಟಿಕ್ ಮತ್ತು ಉಪ-ಆರ್ಕ್ಟಿಕ್ ಸಮುದ್ರಗಳಲ್ಲಿ ಕಂಡುಬರುತ್ತದೆ. ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA) ಪ್ರಕಾರ, ಇವು 100 ವರ್ಷಗಳ ಕಾಲ ಆರಾಮವಾಗಿ ಬದುಕುತ್ತವಂತೆ. ಆದರೆ ಕೆಲವು ತಿಮಿಂಗಲು 200 ವರ್ಷಗಳಿಗಿಂತಲೂ ಹೆಚ್ಚು ವರ್ಷ ಬದುಕುತ್ತವಂತೆ. ಇವುಗಳನ್ನು ಬೇಟೆಯಾಡದಿದ್ದರೆ ದೀರ್ಘಕಾಲ ಬದುಕಬಹುದು ಅಂತಾ ಹೇಳಲಾಗಿದೆ. ಇವುಗಳ ದೇಹದಲ್ಲಿ ಜೀನ್ ಇದ್ದು, ಇದನ್ನು ERCC1 ಎಂದು ಕರೆಯಲಾಗುತ್ತದೆ. ಈ ಜೀನ್ ದೇಹದಲ್ಲಿನ ಹಾನಿಗೊಳಗಾದ ಡಿಎನ್‌ಎಯನ್ನು ಸರಿಪಡಿಸುತ್ತಲೇ ಇರುತ್ತದೆ. ಆದ್ದರಿಂದ ಈ ಮೀನುಗಳಿಗೆ ಭಯಾನಕ ಕಾಯಿಲೆಗಳು ತಲೆಬಿಸಿ ಇರಲ್ಲ.  ಎರಡನೆಯದು ಪಿಸಿಎನ್ಎ ಎಂಬ ಜೀನ್. ಈ ಜೀನ್ ಹಳೆಯ ಕೋಶಗಳ ಜಾಗದಲ್ಲಿ ಹೊಸ ಕೋಶಗಳನ್ನು ರೂಪಿಸಿ, ಭಾಗಗಳನ್ನು ಸರಿಪಡಿಸುತ್ತದಂತೆ.

3 /5

ಬಿಬಿಸಿ ವರದಿಯ ಪ್ರಕಾರ, ಈ ಆಮೆಯ ಹೆಸರು ಜೊನಾಥನ್ ಮತ್ತು ಇದು ವಿಶ್ವದ ಅತ್ಯಂತ ಹಳೆಯ ಜೀವಿ ಎಂಬ ಬಿರುದನ್ನು ಪಡೆದುಕೊಂಡಿದೆ. ಈ ಆಮೆ ದಕ್ಷಿಣ ಅಟ್ಲಾಂಟಿಕ್ ಸಾಗರದ ಸೇಂಟ್ ಹೆಲೆನಾ ದ್ವೀಪದಲ್ಲಿ ಕಂಡುಬರುತ್ತದೆ. ಇದು ತನ್ನ ವಯಸ್ಸಿನಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಜೊನಾಥನ್ 1832ರಲ್ಲಿ ಜನಿಸಿದ್ದು, 2022ಕ್ಕೆ ಇದರ ವಯಸ್ಸು 190 ವರ್ಷಗಳು. 1882ರಲ್ಲಿ ಜೊನಾಥನ್ ಗೆ 50 ವರ್ಷ ವಯಸ್ಸಾದಾಗ ಅದನ್ನು ಸೇಂಟ್ ಹೆಲೆನಾಗೆ ಕರೆತರಲಾಯಿತು.

4 /5

Tuatara ಓತಿಕ್ಯಾತ ಮತ್ತು ಉಡುವಿನಂತಹ ಪ್ರಬೇಧಕ್ಕೆ ಸೇರಿದ ಪ್ರಾಣಿ. ಇದು ಡೈನೋಸಾರ್‌ಗಳ ಜೊತೆಗೆ ಭೂಮಿಯ ಮೇಲೆ ಜೀವಿಸಿದ್ದ ಸರೀಸೃಪ ಜಾತಿಗೆ ಸೇರಿದ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಹೇಳಲಾಗುತ್ತಿದೆ. ಈ ಜೀವಿಗಳು ನ್ಯೂಜಿಲೆಂಡ್‌ನ 32 ದ್ವೀಪಗಳಲ್ಲಿ ವಾಸಿಸುತ್ತವೆ. ಈ ಜೀವಿಗಳು 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಬದುಕಬಲ್ಲವು. ಆದರೆ ‘ಹೆನ್ರಿ’ ಹೆಸರಿನ ಈ Tuataraದ ವಯಸ್ಸು 123 ವರ್ಷ. ಇದು ಸೌತ್‌ಲ್ಯಾಂಡ್ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯಲ್ಲಿ ನೆಲೆಸಿರುವ ಭೂಮಿಯ ಮೇಲೆ ಉಳಿದಿರುವ ಅತ್ಯಂತ ಹಳೆಯ ಟುವಾಟಾರಾಗಳಲ್ಲಿ ಒಂದಾಗಿದೆ.

5 /5

ಮಧ್ಯಪ್ರದೇಶದ ‘ಪನ್ನಾ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿರುವ ‘ವತ್ಸಲಾ’ ಎಂಬ ಹೆಸರಿನ ಈ ಆನೆ ವಿಶ್ವದ ಅತ್ಯಂತ ಹಳೆಯ ಆನೆಗಳಲ್ಲಿ ಒಂದಾಗಿದೆ. ಪ್ರೀತಿ ವಾತ್ಸಲ್ಯದ ಪ್ರತೀಕವಾಗಿರುವ ವತ್ಸಲಾ ವಯಸ್ಸು 102 ವರ್ಷಗಳು. ವಿಶ್ವದ ಅತ್ಯಂತ ಹಳೆಯ ಆನೆಗೆ ‘ಲಿನ್ ವಾಂಗ್’ ಎಂದು ಹೆಸರಿಸಲಾಗಿತ್ತು, ಇದು ತನ್ನ 86ನೇ ವಯಸ್ಸಿನಲ್ಲಿ 2003ರಲ್ಲಿ ತೈವಾನ್‌ನ ಮೃಗಾಲಯದಲ್ಲಿ ಸಾವನ್ನಪ್ಪಿತು. ಇದೀಗ ವತ್ಸಲಾ ಆನೆಯು ‘ಲಿನ್ ವಾಂಗ್' ದಾಖಲೆ ಮುರಿದಿದೆ. ಆದರೆ ‘ಪನ್ನಾ ಹುಲಿ ಸಂರಕ್ಷಿತಾರಣ್ಯ’ ಕಚೇರಿಯಲ್ಲಿ ‘ವತ್ಸಲಾ’ ಆನೆಯ ಜನ್ಮ ದಾಖಲೆಗಳು ಲಭ್ಯವಾಗದ ಕಾರಣ ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ಇದರ ಹೆಸರನ್ನು ದಾಖಲಿಸಲು ಸಾಧ್ಯವಾಗಿಲ್ಲ.