ಐಪಿಎಸ್ ಆಗಲು ಡಾಕ್ಟರ್ ವೃತ್ತಿಗೆ ಗುಡ್ ಬೈ, ಪ್ರೇಮಿಗಳ ದಿನದಂದು ಆಫೀಸ್ ನಲ್ಲೇ ಲವ್ ಮ್ಯಾರೇಜ್!

ನವಜೋತ್ ಸಿಮಿ ತಮ್ಮ 2ನೇ ಪ್ರಯತ್ನದಲ್ಲಿಯೇ ಸಿವಿಲ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ, ನಂತರ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡರು.

ಐಪಿಎಸ್ ಅಧಿಕಾರಿ ನವಜೋತ್ ಸಿಮಿ: ಐಎಎಸ್, ಐಪಿಎಸ್ ಅಧಿಕಾರಿ ಆಗುವುದು ಅನೇಕರ ಕನಸಾಗಿರುತ್ತದೆ. ಉನ್ನತ ಹುದ್ದೆಯಲ್ಲಿದ್ದರೂ ಕೂಡ ನಾಗರಿಕ ಸೇವಾ ಪರೀಕ್ಷೆ ಬರೆಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇಲ್ಲೊಬ್ಬ ಐಪಿಎಸ್ ಅಧಿಕಾರಿ ತಾವು ಐಪಿಎಸ್ ಆಗಲು ಡಾಕ್ಟರ್ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ. ಈ ಐಪಿಎಸ್ ಅಧಿಕಾರಿಯ ಹೆಸರು ನವಜೋತ್ ಸಿಮಿ(IPS Navjot Simi). ಇವರು ಬಿಹಾರ ಕೇಡರ್‌ನ 2017ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ನವಜೋತ್ ಸಿಮಿ ತಮ್ಮ 2ನೇ ಪ್ರಯತ್ನದಲ್ಲಿಯೇ ಸಿವಿಲ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ, ನಂತರ ಐಪಿಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ನವಜೋತ್ ಸಿಮಿ 21 ಡಿಸೆಂಬರ್ 1987ರಂದು ಪಂಜಾಬ್‌ನ ಗುರುದಾಸ್‌ಪುರದಲ್ಲಿ ಜನಿಸಿದರು. ಅವರು ಪಂಜಾಬ್‌ನ ಪಖೋವಾಲ್‌ನಲ್ಲಿರುವ ಮಾಡೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದರು.  

2 /6

ನವಜೋತ್ ಸಿಮಿಗೆ ಬಾಲ್ಯದಿಂದಲೂ ಐಪಿಎಸ್ ಅಧಿಕಾರಿಯಾಗುವ ಕನಸಿತ್ತು. ಮೊದಲು ಅವರು ಡಾಕ್ಟರೇಟ್ ಮಾಡಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಆದರೆ ಡಾಕ್ಟರೇಟ್ ಬಿಟ್ಟು ದೆಹಲಿಗೆ ಬಂದು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಂತರ 2016ರಲ್ಲಿ ಅವರು ಮೊದಲ ಬಾರಿಗೆ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಸಂದರ್ಶನದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.  

3 /6

ನವಜೋತ್ ಸಿಮಿ ಮೊದಲ ಪ್ರಯತ್ನದಲ್ಲಿ ವಿಫಲವಾಗಿದ್ದರು. ಆದರೆ ತಮ್ಮ 2ನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. 2017ರಲ್ಲಿ 735ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಅಧಿಕಾರಿಯಾದರು.  

4 /6

ಐಪಿಎಸ್ ಅಧಿಕಾರಿಯಾಗುವ ಮೊದಲು ನವಜೋತ್ ವೈದ್ಯರಾಗಿದ್ದರು. 2010ರಲ್ಲಿ ಅವರು ಲುಧಿಯಾನಾದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಿಂದ BDS (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ)ನಲ್ಲಿ ಪದವಿಯೊಂದಿಗೆ ವೈದ್ಯರಾದರು.

5 /6

UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನವಜೋತ್ ಸಿಮಿ ಬಿಹಾರ ಕೇಡರ್ ಪಡೆದರು. ನವಜೋತ್ ಸಿಮಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

6 /6

ನವಜೋತ್ ಸಿಮಿ ಅವರು 2020ರ ಪ್ರೇಮಿಗಳ ದಿನದ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ತುಷಾರ್ ಸಿಂಗ್ಲಾ ಅವರೊಂದಿಗೆ ಪ್ರೇಮ ವಿವಾಹವಾದರು. ತುಷಾರ್ ಸಿಂಗ್ಲಾ ಪಶ್ಚಿಮ ಬಂಗಾಳ ಕೇಡರ್‌ನ 2015ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನವಜೋತ್ ಸಿಮಿ ಪಾಟ್ನಾದಿಂದ ಹೌರಾಕ್ಕೆ ಹೋಗಿ ತುಷಾರ್ ಸಿಂಗ್ಲಾ ಅವರ ಕಚೇರಿಯಲ್ಲಿ ವಿವಾಹವಾದರು.