Audi E-rickshaw: ಮುಂದಿನ ವರ್ಷ ಭಾರತೀಯ ರಸ್ತೆಗಿಳಿಯಲಿರುವ ಆಡಿ ಚಾಲಿತ ಇ-ರಿಕ್ಷಾಗಳು

ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಇ-ಆಟೋ(Audi E-rickshaw) ನಿರ್ಮಾಣ ಮಾಡಲಾಗಿದೆ.

 

ನವದೆಹಲಿ: ಜರ್ಮನ್-ಭಾರತೀಯ ಸ್ಟಾರ್ಟ್-ಅಪ್ ನುನಮ್(Nunam) ಶೀಘ್ರದಲ್ಲಿಯೇ 3 ಮಾದರಿಯ ಎಲೆಕ್ಟ್ರಿಕ್ ರಿಕ್ಷಾ(Audi powered e-Rickshaws)ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಹೊಸ ಬ್ಯಾಟರಿಗಳ ವೆಚ್ಚ ತಗ್ಗಿಸಲು ಆಡಿ ಎಲೆಕ್ಟ್ರಿಕ್ ಕಾರಿನ ಹಳೆಯ ಬ್ಯಾಟರಿಗಳಿಂದ ಈ ಇ-ಆಟೋ ನಿರ್ಮಾಣ ಮಾಡಲಾಗುತ್ತಿದೆ. ಅಂದುಕೊಂಡಂತಾದರೆ ಇನ್ನು ಮುಂದಿನ ವರ್ಷವೇ ಈ ಇ-ರಿಕ್ಷಾಗಳು ಭಾರತೀಯ ರಸ್ತೆಗಳಿಗೆ ಇಳಿಯಲಿದೆ. ಆಡಿ ಎನ್ವಿರಾನ್‌ಮೆಂಟಲ್ ಫೌಂಡೇಶನ್ ನುನಮ್‌ನಿಂದ ಧನಸಹಾಯ ಪಡೆದ ಎನ್‌ಜಿಒಗೆ ರಿಕ್ಷಾಗಳನ್ನು ಒದಗಿಸುತ್ತದೆ. ನುನಮ್ 3 ಮೂಲ ಮಾದರಿಗಳ ಇ-ರಿಕ್ಷಾಗಳನ್ನು ಆಡಿಯ ನೆಕರ್ಸಲ್ಮ್ ಸೈಟ್‌ನಲ್ಲಿ ತರಬೇತಿ ತಂಡದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಇದು ನುನಮ್ ಜೊತೆಗೆ ಆಡಿ ಎಜಿ ಮತ್ತು ಆಡಿ ಎನ್ವಿರಾನ್ಮೆಂಟಲ್ ಫೌಂಡೇಶನ್ ಎರಡರ ನಡುವಿನ ಮೊದಲ ಜಂಟಿ ಯೋಜನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸೆಕೆಂಡ್-ಲೈಫ್ ಬ್ಯಾಟರಿಗಳಿಂದ ಚಾಲಿತವಾದ ಇ-ರಿಕ್ಷಾಗಳು 2023ರ ಆರಂಭದಲ್ಲಿ ಪ್ರಾಯೋಗಿಕ ಯೋಜನೆಯಲ್ಲಿ ಮೊದಲ ಬಾರಿಗೆ ಭಾರತದ ರಸ್ತೆಗಳಿಗೆ ಇಳಿಸಲು ನಿರ್ಧರಿಸಲಾಗಿದೆ. ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ಇವುಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ. ನಿರ್ದಿಷ್ಟವಾಗಿ ಮಹಿಳೆಯರು ತಮ್ಮ ಸರಕುಗಳ ಮಾರಾಟಕ್ಕೆ ಮಧ್ಯವರ್ತಿಗಳ ಅಗತ್ಯವಿಲ್ಲದೆ ಮಾರುಕಟ್ಟೆಗೆ ಸಾಗಿಸಲು ಈ ಎಲೆಕ್ಟ್ರಿಕ್ ರಿಕ್ಷಾಗಳನ್ನು ಬಳಸಲು ಸಾಧ್ಯವಾಗುತ್ತದೆ.   

2 /4

ಹೆಚ್ಚಿನ ಶಕ್ತಿ-ಸಾಂದ್ರತೆಯ ಬ್ಯಾಟರಿ ಮತ್ತು ಕಡಿಮೆ ತೂಕ ಹೊಂದಿರುವ ಈ ಇ-ರಿಕ್ಷಾಗಳು ಪರಿಸರ ಸ್ನೇಹಿಯಾಗಿರುತ್ತವೆ. ಈ ಎಲೆಕ್ಟ್ರಿಕ್ ಮೋಟಾರ್ ವಿಶೇಷವಾಗಿ ಶಕ್ತಿಯುತವಾಗಿರಬೇಕೆಂದೆನಿಲ್ಲ. ಏಕೆಂದರೆ ಭಾರತದಲ್ಲಿ ರಿಕ್ಷಾ ಚಾಲಕರು ವೇಗವಾಗಿ ಅಥವಾ ದೂರ ಪ್ರಯಾಣಿಸುವುದಿಲ್ಲ. ಈಗಾಗಲೇ ಭಾರತೀಯ ಮಾರುಕಟ್ಟೆಗೆ ವಿವಿಧ ಮಾದರಿಯ ಇ-ರಿಕ್ಷಾಗಳು ಪ್ರವೇಶಿಸಿವೆ. ಆಡಿಯ ಹಳೆ ಬ್ಯಾಟರಿಯಿಂದ ಚಾಲಿತವಾಗಿರುವ ಈ ಇ-ರಿಕ್ಷಾಗಳು ನೋಡಲು ಆಕರ್ಷಕ ಮತ್ತು ಬಹುಉಪಯೋಗಿ ಸಮಾರ್ಥ್ಯವನ್ನು ಹೊಂದಿವೆ.  

3 /4

ಈ ಇ-ರಿಕ್ಷಾಗಳನ್ನು ಸೌರ ಚಾರ್ಜಿಂಗ್ ಸ್ಟೇಷನ್‌ಗಳಿಂದ ವಿದ್ಯುತ್ ಬಳಸಿ ಚಾರ್ಜ್ ಮಾಡಲಾಗುತ್ತದೆ. ಸ್ಥಳೀಯ ಪಾಲುದಾರರ ಪ್ರದೇಶದಲ್ಲಿ ಸ್ಥಾಪಿಸಲಾದ ಚಾರ್ಜಿಂಗ್ ಸ್ಟೇಷನ್‍ಗಳಿಂದ ಇ-ರಿಕ್ಷಾಗಳನ್ನು ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಹಗಲಿನಲ್ಲಿ ಸೂರ್ಯನ ಬೆಳಕು ಇ-ಟ್ರಾನ್ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದು ಬಫರ್ ಶೇಖರಣಾ ಘಟಕವಾಗಿ ಕಾರ್ಯನಿರ್ವಹಿಸಲಿದ್ದು, ಸಂಜೆ ರಿಕ್ಷಾಗಳಿಗೆ ವಿದ್ಯುತ್ ರವಾನಿಸಲಾಗುತ್ತದೆ.

4 /4

ಈ ಇ-ರಿಕ್ಷಾಗಳ ಬ್ಯಾಟರಿಯನ್ನು ಈ ಮೊದಲೇ ಹೇಳಿದಂತೆ ಆಡಿ ಕಾರುಗಳಲ್ಲಿ ಬಳಕೆ ಮಾಡಲಾಗಿರುತ್ತದೆ. ಇ-ರಿಕ್ಷಾಗಳಲ್ಲಿ ಬ್ಯಾಟರಿಯ ಮರುಬಳಕೆ ಬಳಿಕವೂ ಅದು ಉಪಯೋಗಕ್ಕೆ ಬರಲಿದೆ. 3ನೇ ಹಂತದಲ್ಲಿ ಬ್ಯಾಟರಿಗಳ ಉಳಿದ ಶಕ್ತಿಯನ್ನು LED ಲೈಟಿಂಗ್‌ನಂತಹ ಸ್ಥಾಯಿ ಅಪ್ಲಿಕೇಶನ್‌ಗಳಲ್ಲಿ ಬಳಸಬಹುದಾಗಿದೆ.