ಒಳ್ಳೆಯ ದಿನಗಳು ಮುಂದಿವೆ ಎನ್ನುವುದನ್ನು ಸೂಚಿಸುತ್ತವೆ ಈ ಕನಸುಗಳು

 ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳನ್ನು ಸೂಚಿಸುತ್ತವೆಯಂತೆ. ಕನಸುಗಳಿಗೆ ಬೇರೆ ಬೇರೆ ರೀತಿಯ ಅರ್ಥಗಳಿರುತ್ತವೆ.   ಹಾಗಿದ್ದರೆ ಯಾವ ರೀತಿಯ ಕನಸು ಶುಭ ಸೂಚಕವಾಗಿರುತ್ತವೆ ನೋಡೋಣ. 

 ಬೆಂಗಳೂರು :  ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳನ್ನು ಸೂಚಿಸುತ್ತವೆಯಂತೆ. ಕನಸುಗಳಿಗೆ ಬೇರೆ ಬೇರೆ ರೀತಿಯ ಅರ್ಥಗಳಿರುತ್ತವೆ.   ಹಾಗಿದ್ದರೆ ಯಾವ ರೀತಿಯ ಕನಸು ಶುಭ ಸೂಚಕವಾಗಿರುತ್ತವೆ ನೋಡೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುವುದು ಅತ್ಯಂತ ಮಂಗಳಕರ ಸಂಕೇತ. ಇದರರ್ಥ ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಸ್ವೀಕರಿಸುತ್ತೀರಿ ಎಂದು. ಮುಂದಿನ ದಿನಗಳಲ್ಲಿ  ಆರ್ಥಿಕ ಲಾಭವಾಗುವುದನ್ನು ಕೂಡಾ ಇದು ಸೂಚಿಸುತ್ತದೆ.   

2 /5

ಕನಸಿನಲ್ಲಿ ಜೇನುನೊಣವನ್ನು ನೋಡುವುದು ಕೂಡಾ ಮಂಗಳಕರ. ಈ ಕನಸು ಅಪಾರ ಪ್ರಮಾಣದ ಆದಾಯವನ್ನು ಸೂಚಿಸುತ್ತದೆ.  ವ್ಯಾಪಾರ  ವ್ಯವಹಾರದಲ್ಲಿನ ಪ್ರಗತಿಯನ್ನು ಕೂಡಾ ಇದು ಸೂಚಿಸುತ್ತದೆ.  

3 /5

ಹಣ್ಣುಗಳಿಂದ ತುಂಬಿದ ಮರ ಕನಸಿನಲ್ಲಿ ಕಂಡರೆ ಅದು ಕೂಡಾ ಶುಭ ಫಲವನ್ನು ನೀಡುತ್ತದೆ.   ಯಾವುದಾದರೂ ಮೂಲೆಯಿಂದ ಹಣ ಬರುತ್ತದೆ ಎನ್ನುವುದನ್ನು ಈ ಕನಸು ಸೂಚಿಸುತ್ತದೆ.  

4 /5

ಕನಸಿನಲ್ಲಿ ಕಪ್ಪು ಬಣ್ಣದ ಚೇಳನ್ನು ನೋಡುವುದು ತುಂಬಾ ಮಂಗಳಕರ. ಹೀಗಾದರೆ ಅರ್ಧಕ್ಕೆ ನಿಂತ ನಿಮ್ಮ ಕೆಲಸ ಪೂರ್ಣಗೊಳ್ಳಲಿದೆ ಎಂದರ್ಥ.

5 /5

ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿಯನ್ನು  ಸೂಚಿಸುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)