ಬಾಯಿ ಚಪ್ಪರಿಸಿಕೊಂಡು ತಿನ್ನುವ ಈ ಆಹಾರಗಳಿಂದ ವೇಗವಾಗಿ ಹೆಚ್ಚುತ್ತದೆ ಕೊಲೆಸ್ಟ್ರಾಲ್ ..!

High cholesterol foods : ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ, ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಬೇಕು.  
 

High cholesterol foods : ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಆಗಾಗ ಪರಿಶೀಲಿಸಬೇಕಾಗುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ನಿಂದ ಎದುರಾಗುವ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಕೊಲೆಸ್ಟ್ರಾಲ್ ಒಂದು ರೀತಿಯ ಜಿಗುಟಾದ ವಸ್ತು. ಇದು ಹಾರ್ಮೋನುಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ದೇಹದ ಇತರ ಪ್ರಮುಖ ಕಾರ್ಯಗಳಿಗೂ ಸಹಕಾರಿಯಾಗಿದೆ. ಆದರೆ ಕೊಲೆಸ್ಟ್ರಾಲ್ ನಿರ್ದಿ ಷ್ಟ  ಮಟ್ಟಕ್ಕಿಂತ ಹೆಚ್ಚಾದರೆ  ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಇದಕ್ಕಾಗಿ ನೀವು ಸರಿಯಾದ ಆಹಾರವನ್ನು ಆರಿಸಬೇಕಾಗುತ್ತದೆ. 

2 /4

ನೀವು ನಿಯಮಿತವಾಗಿ ಹುರಿದ  ಆಹಾರಗಳನ್ನು ತಿನ್ನುತ್ತಿದ್ದರೆ, ಅದು ನಿಮ್ಮ ಕೊಬ್ಬನ್ನು ಹೆಚ್ಚಿಸಲು ಮಾತ್ರವಲ್ಲ ಕ್ಯಾಲೊರಿಯನ್ನು ಕೂಡಾ  ಹೆಚ್ಚಿಸುತ್ತದೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹುರಿದ ಆಹಾರಗಳಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ. ಇದಕ್ಕಾಗಿ, ಹುರಿದ ಆಹಾರವನ್ನು  ಮತ್ತೆ ಮತ್ತೆ ಹುರಿದು ತಿನ್ನುವುದನ್ನು ತಪ್ಪಿಸಬೇಕು. ಬದಲಾಗಿ ಗ್ರಿಲ್ ಮಾಡಿ ಅಥವಾ ಬೇಯಿಸಿ ತಿನ್ನುವುದು ಸೂಕ್ತ .

3 /4

ಬೇಕ್ ಮಾಡಿದ ಆಹಾರ ಮತ್ತು ಸಂಸ್ಕರಿಸಿದ ಆಹಾರಗಳ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ವಸ್ತುಗಳಲ್ಲಿರುವ ಕೊಬ್ಬು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಈ ಆಹಾರಗಳಲ್ಲಿರುವ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿರುವ ಟ್ರೈಗ್ಲಿಸರೈಡ್ ಮತ್ತು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. 

4 /4

ಸಾಸೇಜ್‌ಗಳು, ಡೆಲಿ ಮಾಂಸಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಮಾಂಸದಲ್ಲಿರುವ ಸೋಡಿಯಂ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಸಂಸ್ಕರಿಸಿದ ಮಾಂಸ ಸೇವನೆಯು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ.