ಮಲಬದ್ಧತೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತವೆ ಈ ಯೋಗಾಸನಗಳು...ಪ್ರತಿದಿನ ತಪ್ಪದೇ ಮಾಡಿ

Yoga for constipation : ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಇದನ್ನು ಸಾಮಾನ್ಯವಾಗಿ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ನಿರ್ವಹಿಸುವುದು ಮತ್ತು ಕ್ರಮೇಣವಾಗಿ ಇದರಿಂದ ಹೊರಬರಬಹುದು. ಯೋಗದಿಂದ ರೋಗ ಮುಕ್ತಿ ಎನ್ನುವ ಮಾತಿನಂತೆ ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗಾಸನ ಮಾಡುವುದನ್ನು ರೂಢಿಸಿಕೊಂಡರೆ ಇಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಹಾಗಾದರೆ ಈ ಮಲಬದ್ಧತೆಯನ್ನು ನಿವಾರಿಸುವ ಆ ಯೋಗಾಸನಗಳು ಯಾವುವು ಎನ್ನುವುದನ್ನು ತಿಳಿಯೋಣ. 

1 /5

ಧನುರಾಸನ : ಈ ಯೋಗಾಸನವು ನಿಮಗೆ ಮಲಬದ್ಧತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಅಲ್ಲದೇ ಈ ಆಸನದಲ್ಲಿ ಬೆನ್ನು ಮೂಳೆಯನ್ನು ಭಾಗಿಸುವುದರಿಂದ ಮೂಳೆಗಳಲ್ಲಿನ ಬಿಗಿತಯನ್ನು ಕಡಿಮೆ ಮಾಡಬಹುದು.  

2 /5

ಅರ್ಧ ಮತ್ಸೇಂದ್ರಾಸನ : ಈ ಆಸನದ ನಿಯಮಿತ ಅಭ್ಯಾಸವು ದೇಹದಲ್ಲಿನ ಪರಿಚಲನೆಯನ್ನು ಸುಧಾರಿಸುತ್ತದೆ. ಅಲ್ಲದೇ ಇದು ಮುಟ್ಟಿನ ಅಸ್ವಸ್ಥತೆಗಳನ್ನು ತಡೆಯಲು ಸಹಾಯ ಮಾಡುತ್ತದೆ.  

3 /5

ಮಲಸಾನ : ಮಲಾಸನ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಿದೆ. ಅಲ್ಲದೇ ಈ ಆಸನವನ್ನು ಮಾಡುವುದರಿಂದ ಸೊಂಟದ ಸ್ನಾಯುಗಳು ಬಲವಾಗಿರುತ್ತವೆ.   

4 /5

ಬಾಲಾಸನ : ಬಾಲಾಸನ ಇದು ಒತ್ತಡವನ್ನು ಕಡಿಮೆ ಮಾಡಿ ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಅಲ್ಲದೇ ಈ ಆಸನ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ  

5 /5

ಬದ್ಧ ಕೋನಸಾನ : ಈ ಆಸನವು ಅಧಿಕ ರಕ್ತಸ್ರಾವ ಹಾಗೂ ಅನಿಯಮಿತ ಮಿಟ್ಟಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೊತೆಗೆ ಈ ಆಸನ ಮೂತ್ರಪಿಂಡದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.