ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ, ಕೋವಿಡ್ -19 ರ ಒಮಿಕ್ರಾನ್ ರೂಪಾಂತರಗಳ ಪ್ರಕರಣಗಳು ಸಹ ಹೆಚ್ಚುತ್ತಿವೆ.
ನವದೆಹಲಿ : ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ, ಕೋವಿಡ್ -19 ರ ಒಮಿಕ್ರಾನ್ ರೂಪಾಂತರಗಳ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇನ್ನು ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಜನರು ಕೂಡಾ ಸೋಂಕಿತರಾಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕರೋನಾ ಲಸಿಕೆಯನ್ನು ಸಾಂಕ್ರಾಮಿಕ ರೋಗದ ವಿರುದ್ಧದ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗಿದೆ. ಆದರೆ ಎರಡೂ ಡೋಸ್ಗಳನ್ನು ತೆಗೆದುಕೊಂಡ ಜನರಲ್ಲಿಯೂ ಕೋವಿಡ್ -19 ಸೋಂಕು ಕಾಣಿಸಿಕೊಳ್ಳುತ್ತಿದೆ. ಆದರೆ ಲಸಿಕೆ ಹಾಕಿಕೊಂಡವರಲ್ಲಿ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇದರೊಂದಿಗೆ, ಲಸಿಕೆಯ ಪ್ರಭಾವದಿಂದಾಗಿ ಆಸ್ಪತ್ರೆಗೆ ದಾಖಲು ಮತ್ತು ಸಾವಿನ ಅಪಾಯ ಕೂಡಾ ಕಡಿಮೆಯಾಗಿದೆ.
ವರದಿಯ ಪ್ರಕಾರ, ಲಸಿಕೆ ಪಡೆದ ನಂತರ, ರೋಗನಿರೋಧಕ-ರಕ್ಷಣಾ ವ್ಯವಸ್ಥೆಯು ಅಭಿವೃದ್ಧಿಗೊಳ್ಳುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಲಸಿಕೆ ತೆಗೆದುಕೊಳ್ಳದ ಜನರು ಸೋಂಕಿಗೆ ಒಳಗಾಗುವ ಮತ್ತು ಅದು ಗಂಭೀರ ಸ್ವರೂಪ ಪಡೆಯುವ ಅಪಾಯವನ್ನು ಎದುರಿಸಬೇಕಾಗುತ್ತದೆ.
COVID-19 ಲಸಿಕೆಗಳು SARs-COV-2 ವೈರಸ್ ವಿರುದ್ಧ ಒಂದು ನಿರ್ದಿಷ್ಟ ಮಟ್ಟದ ರಕ್ಷಣೆಯನ್ನು ಒದಗಿಸುತ್ತವೆ. ಭಾಗಶಃ ಮತ್ತು ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳು ಕೂಡಾ ಸೋಂಕಿಗೆ ಒಳಗಾಗಬಹುದು ಎಂದು ಅಧ್ಯಯನಗಳು ತೋರಿಸಿವೆ. ಆದರೆ ಕರೋನಾ ಲಸಿಕೆಯನ್ನು ಪಡೆದ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದರು ಕೂಡಾ, ಅವರಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಕಾಣಬಹುದಾಗಿದೆ.
ಕೋವಿಡ್-19 ರ ಓಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಕಡಿಮೆ ಅಪಾಯವನ್ನು ಹೊಂದಿದೆ ಎನ್ನಲಾಗಿದೆ. ಹೆಚ್ಚಿನ ಸೋಂಕಿತ ರೋಗಿಗಳಲ್ಲಿ ಶೀತದಂತಹ ರೋಗಲಕ್ಷಣಗಳನ್ನು ಕಾಣಬಹುದು. ಗಂಟಳು ನೋವಿನ ಹೊರತಾಗಿ, ಓಮಿಕ್ರಾನ್ನ ಇತರ ಕೆಲವು ಲಕ್ಷಣಗಳೆಂದರೆ ಸುಸ್ತು, ಜ್ವರ, ದೇಹದ ನೋವು, ರಾತ್ರಿ ಬೆವರುವುದು, ಕೆ, ಸೀನುವುದು, ಮೂಗು ಸೋರುವುದು, ವಾಕರಿಕೆ ಮತ್ತು ಹಸಿವಿನ ಕೊರತೆ. ಡೆಲ್ಟಾ ರೂಪಾಂತರಕ್ಕಿಂತ ಭಿನ್ನವಾಗಿ, ಓಮಿಕ್ರಾನ್ ನಲ್ಲಿ ವಾಸನೆ ಮತ್ತು ರುಚಿ ನಷ್ಟದ ಕ್ಕೆ ಕಡಿಮೆ ಎನ್ನಲಾಗಿದೆ
ಕರೋನಾ ಲಸಿಕೆಯನ್ನು ಎರಡೂ ಡೋಸ್ ತೆಗೆದುಕೊಂಡ ಜನರು ಓಮಿಕ್ರಾನ್ ಸೋಂಕಿಗೆ ಒಳಗಾದರೆ ಗಂಟಲು ನೋವಿನಿಂದ ಬಳಲುತ್ತಿದ್ದಾರೆ. ಚಿಕಾಗೋದ ಸಾರ್ವಜನಿಕ ಆರೋಗ್ಯ ಇಲಾಖೆಯ ಆಯುಕ್ತ ಡಾ ಅಲಿಸನ್ ಅರ್ವಾಡಿ ಅವರು ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡ ಜನರಲ್ಲಿ ಗಂಟಲು ನೋವು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.
ಕೋವಿಡ್-19 ಸೋಂಕನ್ನು ಪತ್ತೆಹಚ್ಚಲು ಅತ್ಯಂತ ನಿಖರವಾದ ವಿಧಾನವೆಂದರೆ ಆರ್ಟಿ-ಪಿಸಿಆರ್ ಪರೀಕ್ಷೆ. ಆದ್ದರಿಂದ ರೋಗಲಕ್ಷಣಗಳು ಕಂಡು ಬಂದರೆ ಸಾಧ್ಯವಾದಷ್ಟು ಬೇಗ ಪರೀಕ್ಷಿಸಿಕೊಳ್ಳಿ. ಶೀತದಂತಹ ಲಕ್ಷಣಗಳು ಕಂಡು ಬಂದರೆ ಶೀಘ್ರ ಕರೋನಾ ಪರೀಕ್ಷೆಗೆ ಒಳಗಾಗಲು ಸಲಹೆ ನೀಡಲಾಗುತ್ತದೆ. ಇದರಿಂದ ಸೋಂಕು ಪ್ರಗತಿಯಾಗದಂತೆ ತಡೆಯಬಹುದು. ಇದರೊಂದಿಗೆ, ಪರೀಕ್ಷಾ ವರದಿ ಬರುವವರೆಗೆ ಮತ್ತು ಕರೋನಾ ಸೋಂಕಿತವಾಗಿಲ್ಲ ಎಂದು ದೃಢೀಕರಿಸುವವರೆಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.
ಕರೋನಾ ವೈರಸ್ನ ಹೊಸ ರೂಪಾಂತರವಾದ ಒಮಿಕ್ರಾನ್ ಸೋಂಕನ್ನು ತಪ್ಪಿಸಲು ಮಾಸ್ಕ್ ಧರಿಸುವುದು ಉತ್ತಮ ಮಾರ್ಗವಾಗಿದೆ. ಏಕೆಂದರೆ ಕೋವಿಡ್ -19 ನ ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಸಂಪೂರ್ಣವಾಗಿ ಲಸಿಕೆ ಪಡೆದ ಜನರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಕರೋನಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು.