ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ ಐಶಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.
ನವದೆಹಲಿ: ಜಗತ್ತಿನಲ್ಲಿ ಇಂತಹ ಒಂದು ಹಳ್ಳಿ ಇದೆ ಎಂದು ಯಾರಾದರೂ ನಿಮಗೆ ಹೇಳಿದರೆ ನೀವು ನಂಬುವುದಿಲ್ಲ. ಅನೇಕ ದೊಡ್ಡ ನಗರಗಳನ್ನೇ ಮೀರಿ ಬೆಳೆಯುತ್ತಿರುವು ಈ ಹಳ್ಳಿಯಲ್ಲಿರುವ ಪ್ರತಿಯೊಬ್ಬರೂ ಶ್ರೀಮಂತರು. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ ಐಶಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದು ಅಚ್ಚರಿಯಾದರೂ ನಿಜ. ಈ ಶ್ರೀಮಂತ ಹಳ್ಳಿಯ ಬಗೆಗಿನ ಮತ್ತಷ್ಟು ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇಂದು ನಾವು ನಿಮಗೆ ಅನೇಕ ನಗರಗಳಿಗೆ ಸ್ಪರ್ಧೆಯನ್ನು ಒಡ್ಡಿರುವ ಶ್ರೀಮಂತ ಹಳ್ಳಿಯ ಬಗ್ಗೆ ಹೇಳಲಿದ್ದೇವೆ. ಇಲ್ಲಿ ವಾಸಿಸುವ ಎಲ್ಲರೂ ಕೋಟ್ಯಾಧಿಪತಿಗಳು. ಇದನ್ನು ವಿಶ್ವದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಯಲಾಗುತ್ತದೆ.
ಹುವಾಜಿ ಎಂಬ ಹೆಸರಿನ ಹಳ್ಳಿಯು ಚೀನಾದ ಜಿಯಾಂಗ್ಯಿನ್ ನಗರದ ಸಮೀಪದಲ್ಲಿದೆ. ಇದೊಂದು ಕೃಷಿ ಪ್ರಧಾನ ಗ್ರಾಮ. ಇಲ್ಲಿನ ಬಹುತೇಕ ಜನರು ಕೃಷಿ ಮಾಡುತ್ತಾರೆ. ಹುವಾಜಿ ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ವಾರ್ಷಿಕ ಆದಾಯ 80 ಲಕ್ಷ ರೂ. ಇದೆ.
ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ಐಷಾರಾಮಿ ಮನೆಯನ್ನು ನಿರ್ಮಿಸಿದ್ದಾರೆ. ಈ ಮನೆಗಳಲ್ಲಿ ಐಷಾರಾಮಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಇವೆ. ಮನೆಗಳ ಒಳಗೆ ಐಷಾರಾಮಿ ಕಾರುಗಳು ಸಹ ಇವೆ. ಇಲ್ಲಿ ನಿರ್ಮಿಸಲಾದ ರಸ್ತೆಗಳು ಮತ್ತು ಚರಂಡಿಗಳು ನಗರಗಳನ್ನೇ ಮೀರಿಸುವಂತಿವೆ.
ಈ ಗ್ರಾಮವು 1961ರಲ್ಲಿ ನೆಲೆಗೊಂಡಿತು. ಆಗ ತುಂಬಾ ಬಡವಾಗಿತ್ತು. ಗ್ರಾಮ ನೆಲೆಸಿದ ಸುಮಾರು 1 ವರ್ಷದ ನಂತರ ಇಲ್ಲಿ ಕಮ್ಯುನಿಸ್ಟ್ ಪಕ್ಷದ ಸಂಘಟನೆ ರೂಪುಗೊಂಡಿತು. ಅದರ ಅಧ್ಯಕ್ಷ ವೂ ರೆನ್ವಾವೊ ಹಳ್ಳಿಗರಿಗೆ ಇಂತಹ ಪರಿಕಲ್ಪನೆಯನ್ನು ನೀಡಿದರು. ಬಳಿಕ ಹಳ್ಳಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿಹೋಯಿತು.
ವೈಯಕ್ತಿಕ ಕೃಷಿ ಮಾಡುವ ಬದಲು ಗುಂಪು ಕೃಷಿ ಮಾಡುವಂತೆ ವೂ ರೆನ್ವಾವೊ ಇಲ್ಲಿನ ಗ್ರಾಮಸ್ಥರಿಗೆ ತಿಳಿಸಿದ್ದರು. ಇಲ್ಲಿನ ಪ್ರತಿಯೊಬ್ಬರ ಜನರು ಅವರ ಮಾತನ್ನು ಪಾಲಿಸಿದರು ಮತ್ತು ಸಾಮೂಹಿಕ ಕೃಷಿಯನ್ನು ಪ್ರಾರಂಭಿಸಿದರು. ಅದರ ನಂತರ ಎಲ್ಲವೂ ಬದಲಾಗಲಾರಂಭಿಸಿತು ಮತ್ತು ಇಂದು ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಮಿಲಿಯನೇರ್ ಆಗಿದ್ದಾನೆ.