617 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಮೂರು ರಾಜಯೋಗದಿಂದ ಖುಲಾಯಿಸುವುದು ಈ ರಾಶಿಯವರ ಅದೃಷ್ಟ

ನಾಲ್ಕು ದೊಡ್ಡ ಗ್ರಹಗಳ ಅಪರೂಪದ ಸಂಯೋಜನೆಯು 617 ವರ್ಷಗಳ ನಂತರ ರೂಪುಗೊಂಡಿದೆ. ಇದರಿಂದಾಗಿ ಶಶ, ಮಾಳವ್ಯ ಮತ್ತು ಹಂಸ ರಾಜಯೋಗ  ರಚನೆಯಾಗುತ್ತಿದೆ. 
 

ಬೆಂಗಳೂರು :  ಗ್ರಹಗಳು ಮತ್ತು ನಕ್ಷತ್ರಪುಂಜಗಳ ರಾಶಿಯನ್ನು ಬದಲಾಯಿಸುವ ಕಾರಣ  ಕೆಲವೊಮ್ಮೆ ಅಪರೂಪದ ರಾಜಯೋಗ ರೂಪುಗೊಳ್ಳುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಮತ್ತು ಗುರುಗಳು ಪ್ರಸ್ತುತ ಮೀನದಲ್ಲಿದ್ದಾರೆ. ಆದರೆ, ಶನಿಯು ಕುಂಭ ರಾಶಿಯಲ್ಲಿ ಸೂರ್ಯನೊಂದಿಗೆ ಇದ್ದಾನೆ. ಈ ನಾಲ್ಕು ದೊಡ್ಡ ಗ್ರಹಗಳ ಅಪರೂಪದ ಸಂಯೋಜನೆಯು 617 ವರ್ಷಗಳ ನಂತರ ರೂಪುಗೊಂಡಿದೆ. ಇದರಿಂದಾಗಿ ಶಶ, ಮಾಳವ್ಯ ಮತ್ತು ಹಂಸ ರಾಜಯೋಗ  ರಚನೆಯಾಗುತ್ತಿದೆ. ಈ ಮೂರು ರಾಜಯೋಗಗಳು 4 ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅವರ ಜೀವನದಲ್ಲಿ ಪ್ರಗತಿಯಾಗುತ್ತದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೀನರಾಶಿಯಲ್ಲಿ ಗುರು ಮತ್ತು ಶುಕ್ರರ ಸಂಯೋಗದಿಂದ ಹಂಸ ಮತ್ತು ಮಾಳವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಈ ರಾಶಿಯವರಿಗೆ ಈ ರಾಜಯೋಗವು ಅನುಕೂಲಕರವಾಗಿರಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶ ದೊರೆಯಬಹುದು. ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ ಹೆಚ್ಚಿದೆ. ಉದ್ಯಮಿಗಳಿಗೆ ಹೊಸ ವ್ಯಾಪಾರ ಒಪ್ಪಂದ ಸಿಗಬಹುದು. ಇದರಿಂದ  ಉತ್ತಮ ಧನಲಾಭವಾಗುವುದು.   

2 /4

ಶನಿದೇವನು ಕುಂಭ ರಾಶಿಯವರ ಜಾತಕದಲ್ಲಿ ಶಶ ಎಂಬ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಯಾವ ಕೆಲಸದಲ್ಲಿ ಹಿನ್ನೆಡೆಯಾಗಿತ್ತೋ ಅದೇ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಧುರತೆ ಇರುತ್ತದೆ.

3 /4

ಶುಕ್ರ ಗ್ರಹವು ಧನು ರಾಶಿಯ ಜಾತಕದ ನಾಲ್ಕನೇ ಮನೆಯಲ್ಲಿ ಮಾಳವ್ಯ ರಾಜಯೋಗವನ್ನು ಸೃಷ್ಟಿಸಿದೆ. ಇದು ವೃತ್ತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಉದ್ಯೋಗದ ಆಫರ್ ಬರಬಹುದು. ಉದ್ಯೋಗಸ್ಥರಿಗೆ ಬಡ್ತಿ ಮತ್ತು ಇನ್‌ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ವಾಹನ ಮತ್ತು ಆಸ್ತಿ ಖರೀದಿಗೆ ಅವಕಾಶವಿದೆ.

4 /4

ಕನ್ಯಾ ರಾಶಿಯ ಜನರ ಜಾತಕದ ಏಳನೇ ಮನೆಯಲ್ಲಿ ಮಾಳವ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದು ಮಂಗಳಕರ ಮತ್ತು ಫಲಪ್ರದವೆಂದು ಸಾಬೀತಾಗಲಿದೆ. ಹಣದ ಕೊರತೆ ದೂರವಾಗುತ್ತದೆ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಉದ್ಯಮಿಗಳು ಮತ್ತು ಉದ್ಯೋಗಿಗಳ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)