ಹಣಕಾಸಿನ ತೊಂದರೆಯೇ? ಪೊರಕೆಗೆ ಸಂಬಂಧಿಸಿದ ಈ ಪರಿಹಾರ ಪ್ರಯತ್ನಿಸಿ

Vastu Tips for Money: ಸನಾತನ ಧರ್ಮದಲ್ಲಿ ಲಕ್ಷ್ಮಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ನಂಬುತ್ತಾರೆ. ಎಲ್ಲಿ ಪೊರಕೆಯನ್ನು ಗೌರವಿಸುವುದಿಲ್ಲವೋ ಅಲ್ಲಿ ಲಕ್ಷ್ಮಿ ದೇವಿಯು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ. 
 

Vastu Tips: ಸಮಾಜದಲ್ಲಿ ಧನ - ಸಮ್ಮಾನ ಗಳಿಸುವುದು ಪ್ರತಿಯೊಬ್ಬರ ಮಹದಾಸೆ. ಎಷ್ಟೇ ದುಡಿದರೂ ಕೆಲವೊಮ್ಮೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಇದಕ್ಕಾಗಿ ಹಲವು ವಾಸ್ತು ನಿಯಮಗಳನ್ನು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ನಾವು ಪೊರಕೆಯನ್ನು ಇಡಲು ಹಲವಾರು ನಿಯಮಗಳನ್ನು ಅನುಸರಿಸಬೇಕು. ಇಂದು ಪೊರಕೆಗೆ ಸಂಬಂಧಿಸಿದ 5 ಅದ್ಭುತ ಪರಿಹಾರಗಳ ಬಗ್ಗೆ ಹೇಳಲಿದ್ದೇವೆ. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ಮನೆ-ಕಚೇರಿಗಾಗಿ ಹೊಸ ಪೊರಕೆ ತಂದಿದ್ದರೆ, ಅದರ ಬಳಕೆಯನ್ನು ಶನಿವಾರದಿಂದ ಪ್ರಾರಂಭಿಸಬೇಕು. ಇದನ್ನು ಮಾಡುವುದರಿಂದ ಕುಟುಂಬವು ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತದೆ ಮತ್ತು ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

2 /5

ಮನೆಯನ್ನು ಸ್ವಚ್ಛಗೊಳಿಸಲು ನೀವು ಹೊಸ ಪೊರಕೆ ಖರೀದಿಸಿದ್ದರೆ, ಹಳೆಯ ಪೊರಕೆಯನ್ನು ತಕ್ಷಣವೇ ಎಸೆಯಬೇಡಿ. ಈ ರೀತಿ ಮಾಡುವುದನ್ನು ಶಾಸ್ತ್ರಗಳಿಗೆ ವಿರುದ್ಧವಾಗಿ ಪರಿಗಣಿಸಲಾಗಿದೆ ಮತ್ತು ತಾಯಿ ಲಕ್ಷ್ಮಿ ಕೂಡ ಕೋಪಗೊಂಳ್ಳುತ್ತಾಳೆ. ಬದಲಿಗೆ ನೀವು ಹಳೆಯ ಪೊರಕೆಯನ್ನು ಶನಿವಾರ, ಅಮವಾಸ್ಯೆ, ಹೋಳಿ ಹುಣ್ಣಿಮೆ ಅಥವಾ ಗ್ರಹಣ ಮುಗಿದ ನಂತರ ಎಸೆಯಬಹುದು.

3 /5

ಗುರುವಾರ, ಶುಕ್ರವಾರ ಅಥವಾ ಏಕಾದಶಿ ದಿನ ಹಳೆಯ ಪೊರಕೆಯನ್ನು ಎಸೆಯಬಾರದು. ಈ ಮೂರು ದಿನಗಳನ್ನು ಲಕ್ಷ್ಮಿ ದೇವಿಗೆ ಸಮರ್ಪಿತವೆಂದು ಪರಿಗಣಿಸಲಾಗಿದೆ. ಈ ದಿನ ನೀವು ಅವರ ನೆಚ್ಚಿನ ವಸ್ತು ಪೊರಕೆಯನ್ನು ಎಸೆದರೆ, ಅವರು ಕೋಪಗೊಳ್ಳಬಹುದು, ಇದರಿಂದಾಗಿ ಮನೆಯಲ್ಲಿ ಬಡತನವನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ.

4 /5

ಮನೆಯಲ್ಲಿರುವ ವ್ಯಕ್ತಿಯ ದೀರ್ಘಕಾಲದ ಕಾಯಿಲೆ ವಾಸಿಯಾಗದಿದ್ದರೆ, ಈ ಪೊರಕೆಯ ಉಪಾಯ ಉಪಯುಕ್ತವಾಗಿದೆ. ಗುರುವಾರ ಬೆಳಗ್ಗೆ  ಪೊರಕೆಯಿಂದ ಮನೆ ಗುಡಿಸಿ ಗಂಗಾಜಲದಿಂದ ಸ್ನಾನ ಮಾಡಬೇಕು. ಇದನ್ನು ಮಾಡುವುದರಿಂದ, ರೋಗಿಯ ಆರೋಗ್ಯವು ಸುಧಾರಿಸಲು ಪ್ರಾರಂಭಿಸುತ್ತದೆ.

5 /5

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜನರು ಗುರುವಾರದಂದು ತಮ್ಮ ಮನೆಗೆ ಚಿನ್ನದಿಂದ ಮಾಡಿದ ಚಿಕ್ಕ ಪೊರಕೆಯನ್ನು ತಂದು ಪೂಜಾ ಸ್ಥಳದಲ್ಲಿ ಪೂಜೆ ಮಾಡಿದ ನಂತರ ಅದನ್ನು ಕಮಾನಿನಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ವಾಸಸ್ಥಾನ ಶಾಶ್ವತವಾಗಿ ಉಳಿಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.