Tunisha Sharma Suicide: ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ವಿದ್ಯಾ ಬಾಲನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದ 20ರ ಹರೆಯದ ನಟಿ ಈ ರೀತಿ ಪ್ರಾಣ ಕಳೆದುಕೊಂಡಿರುವುದರಿಂದ ಅನೇಕರಿಗೆ ಶಾಕ್ ಆಗಿದೆ.
Tunisha Sharma dies by suicide: ಯುವ ನಟಿ ತುನೀಶಾ ಶರ್ಮಾ ಸಾವಿನ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿದೆ. 20ರ ಹರೆಯದ ನಟಿಯೊಬ್ಬರು ಈ ರೀತಿ ಪ್ರಾಣ ಕಳೆದುಕೊಂಡಿರುವುದರಿಂದ ಅನೇಕರಿಗೆ ಶಾಕ್ ಆಗಿದೆ. ತುನಿಶಾ ಕಿರುತೆರೆಯಿಂದ ಹಿಡಿದು ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ವಿದ್ಯಾ ಬಾಲನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಪ್ರತಿಭಾನ್ವಿತ ನಟಿ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೇವಲ 20ರ ಹರೆಯದಲ್ಲಿ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ‘ಅಲಿ ಬಾಬಾ - ದಸ್ತಾನ್-ಎ-ಕಾಬೂಲ್’ನಲ್ಲಿ ಮೇರಿಯಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ತುನೀಶಾ ಜೀವನದಲ್ಲಿ ಏನಾಯಿತು? ದಿಢೀರ್ ಆಕೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣವೇನು? ನಗು ನಗುತ್ತಲೇ ಇದ್ದ ಆಕೆಗೆ ಎನಾಯಿತು? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಟಿ ತುನೀಶಾ ಶರ್ಮಾ ತಮ್ಮ ಶೂಟಿಂಗ್ ಸೆಟ್ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲಾಗಲಿಲ್ಲ.
ಅಲಿ ಬಾಬಾಗಿಂತ ಮೊದಲು ನಟಿ ತುನೀಶಾ ಶರ್ಮಾ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಚಕ್ರವರ್ತಿ ಅಶೋಕ್ ಸಾಮ್ರಾಟ್, ಗಬ್ಬರ್ ಪೂಂಚ್ವಾಲಾ, ಮಹಾರಾಣಾ ಪ್ರತಾಪ್, ಇಂಟರ್ನೆಟ್ ವಾಲಾ ಲವ್ ಮತ್ತು ಇಷ್ಕ್ ಸುಭಾನ್ ಅಲ್ಲಾ ಮುಂತಾದ ಧಾರಾವಾಹಿಗಳಲ್ಲಿ ಅವರು ಕೆಲಸ ಮಾಡಿದ್ದರು. ತಮ್ಮ ಮನೋಜ್ಞ ಅಭಿನಯಕ್ಕೆ ಅಪಾರ ಜನಮನ್ನಣೆಯನ್ನೂ ಪಡೆದುಕೊಂಡಿದ್ದರು.
ನಟಿ ತುನೀಶಾ ಕಿರುತೆರೆ ಮಾತ್ರವಲ್ಲದೆ ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ‘ಕಹಾನಿ 2’ನಲ್ಲಿ ವಿದ್ಯಾ ಬಾಲನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದರು. ‘ಬಾರ್ ಬಾ ದೇಖೋ’ ಮತ್ತು ‘ಫಿತೂರ್’ನಲ್ಲಿ ಕತ್ರಿನಾ ಕೈಫ್ ಅವರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಹೀಗೆ ಕೇವಲ 20ನೇ ವಯಸ್ಸಿಗೆ ತುನೀಶಾ ಸಾಕಷ್ಟು ಕೆಲಸ ಮಾಡುವ ಮೂಲಕ ಅದ್ಭುತ ನಟಿ ಎನಿಸಿಕೊಂಡಿದ್ದರು.
‘ಅಲಿ ಬಾಬಾ-ದಸ್ತಾನ್-ಎ-ಕಾಬೂಲ್’ನಲ್ಲಿ ಮೇರಿಯಮ್ ಪಾತ್ರದಲ್ಲಿ ನಟಿ ತುನೀಶಾ ಶರ್ಮಾ ಮಿಂಚಿದ್ದರು. ಯಶಸ್ಸಿನ ಉತ್ತುಂಗದ ಹಂತದಲ್ಲಿ ಯುವನಟಿ ಆತ್ಮಹತ್ಯೆ ಮಾಡಿಕೊಂಡು ಜೀವನ ಕಳೆದುಕೊಂಡಿರುವುದು ಅನೇಕರಿಗೆ ದಿಗ್ಭ್ರಮೆ ಮೂಡಿಸಿದೆ. ಯಾವ ಕಾರಣಕ್ಕಾಗಿ ಅವರು ಈ ದುಡುಕು ನಿರ್ಧಾರ ತೆಗೆದುಕೊಂಡರು? ಅನ್ನೋದೇ ಇದೀಗ ದೊಡ್ಡ ಯಕ್ಷಪ್ರಶ್ನೆಯಾಗಿದೆ.