ಆಮಂತ್ರಣ ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿದ್ದು, ಕೊನೆಯ ಪುಟದಲ್ಲಿ ಪರಿಸರ ಸಂರಕ್ಷಣೆಯ ಬರಹಗಳು ಗಮನ ಸೆಳೆಯುತ್ತವೆ.
ಆಮಂತ್ರಣ ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿದ್ದು, ಕೊನೆಯ ಪುಟದಲ್ಲಿ ಪರಿಸರ ಸಂರಕ್ಷಣೆಯ ಬರಹಗಳು ಗಮನ ಸೆಳೆಯುತ್ತವೆ. 'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಎಂಬ ತಲೆಬರಹದಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಕಸ ಎಸಯಬೇಡಿ ಹೀಗೆ ಅನೇಕ ಪರಿಸರ ಸಂರಕ್ಷಣಾ ವಿಚಾರಗಳನ್ನು ಹೊಂದಿದ ಬರಹ ಇಲ್ಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಪರಿಸರ ನಮಗೆ ಎಷ್ಟೋ ಕೊಡುಗೆಗಳನ್ನು ನೀಡಿದೆ. ಆದ್ರೆ ಅದಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಇಲ್ಲೊಬ್ಬರು ನಿವೃತ್ತ ಪ್ರಾಧ್ಯಾಪಕರೊಬ್ಬರಿದ್ದಾರೆ. ಈ ತರನೂ ನಾವು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರೇ ರಾಜಮಣಿ ರಾಮಕುಂಜ.
ರಾಜಮಣಿ ರಾಮಕುಂಜ ಎಂಬ ನಿವೃತ್ತ ಪ್ರಾಧ್ಯಾಪಕರೊಬ್ಬರ ಪುತ್ರಿ ಮೇಧಾ ರಾಮಕುಂಜ ಅವರ ವಿವಾಹ ರಂಜನ್ ಆಚಾರ್ಯ ಅವರ ಜೊತೆಗೆ ಇದೇ ಡಿಸೆಂಬರ್ 14 ರಂದ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ನಡೆಯಲಿದೆ. ಇವರ ಮದುವೆಯ ಆಮಂತ್ರಣ ಪತ್ರವೇ ವಿಶೇಷ. ಮದುವೆಗೆ ಈ ರೀತಿಯೂ ಆಮಂತ್ರಣ ನೀಡಬಹುದು!
ಮಂಗಳೂರಿನ ಖ್ಯಾತ ಚಿತ್ರ ಕಲಾವಿದ ಭುವನ್ ಮಂಗಳೂರು ಅವರು ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಮದುಮಗ ಮತ್ತು ಮದುಮಗಳ ಚಿತ್ರವನ್ನು ಬಿಡಿಸಿದ್ದಾರೆ. ಒಳಗಿನ ಪುಟದಲ್ಲಿ ಹೋಮ ಕುಂಡಲಿ ಇದೆ. ಅದರ ಜತೆಗೆ 'ನಿಮ್ಮಿಂದ ಗಿಡವಾಗಲಿ' ಎಂಬ ಬರಹದ ಅಡಿಯಲ್ಲಿ ಬೆಂಡೆಕಾಯಿ, ಬದನೆ, ಹರಿವೆ ಹಲಸಂಡೆ ಬೀಜಗಳ ಪ್ಯಾಕೆಟ್ ಇಟ್ಟಿದ್ದಾರೆ. ಈ ಮೂಲಕ ಕಾಗದ ಸಿಕ್ಕಿದ ಪ್ರತಿ ಮನೆಯಲ್ಲಿಯೂ ಗಿಡವೊಂದು ಮೊಳಕೆಯೊಡೆಯ ಬೇಕು. ಆ ಮೂಲಕ ಮನಪರಿವರ್ತನೆಯಾಗಿ ನಾವು ಪರಿಸರವನ್ನು ಉಳಿಸುವ ಪಣತೊಡಬೇಕು ಎಂಬುದೇ ಇವರ ಆಶಯವಾಗಿದೆ.
ಆಮಂತ್ರಣ ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿದ್ದು, ಕೊನೆಯ ಪುಟದಲ್ಲಿ ಪರಿಸರ ಸಂರಕ್ಷಣೆಯ ಬರಹಗಳು ಗಮನ ಸೆಳೆಯುತ್ತವೆ. 'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಎಂಬ ತಲೆಬರಹದಡಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬೇಡಿ. ಕಸ ಎಸಯಬೇಡಿ ಹೀಗೆ ಅನೇಕ ಪರಿಸರ ಸಂರಕ್ಷಣಾ ವಿಚಾರಗಳನ್ನು ಹೊಂದಿದ ಬರಹ ಇಲ್ಲಿವೆ. ಜೊತೆಗೆ ಮದುವೆ ಕಾರ್ಯಕ್ರಮದ ಪೌರೋಹಿತ್ಯ ಹಾಗೂ ಪಾಕಶಾಲೆಯ ನೇತೃತ್ವ ವಹಿಸಿದವರ ಹೆಸರು ಕೂಡಾ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೆ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎಂಬ ಮಾಹಿತಿಗಾಗಿ ಮದುವೆಗೆ ಆಗಮಿಸುವ ಸರ್ವರಿಗೂ ಬಟ್ಟೆಯ ಕೈ ಚೀಲವೊಂದನ್ನು ನೀಡಲಾಗುತ್ತದೆ. ಇದರಲ್ಲಿ ರಾಷ್ಟ್ರ ದೇವೋಭವ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ. ಶ್ರೀರಸ್ತು ಶುಭ ಮಸ್ತು ಎಂಬ ಬರಹವನ್ನು ಪ್ರಿಂಟ್ ಮಾಡಿದ್ದಾರೆ.