Vastu Shastra Tips: ನಿಮ್ಮ ಮನೆಯಲ್ಲಿಯೂ ವಾಸ್ತು ದೋಷವಿದೆಯೇ? ಹೀಗೆ ಕಂಡುಹಿಡಿಯಿರಿ

Vastu shastra For Home: ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಆ ಲಕ್ಷಣಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

Vastu dosh in house: ಮನೆಯಲ್ಲಿ ವಾಸ್ತು ದೋಷವಿದ್ದರೆ ಆ ಮನೆ ಎಂದಿಗೂ ಏಳಿಗೆಯಾಗುವುದಿಲ್ಲ. ವಾಸ್ತು ದೋಷವಿದ್ದರೆ ಮನೆಯಲ್ಲಿ ತೊಂದರೆಗಳು ಹೆಚ್ಚುತ್ತೆ. ಮನೆಯ ಸದಸ್ಯರು ಆಗಾಗ ಅನಾರೋಗ್ಯಕ್ಕೆ ಒಳಗಾಗಬಹುದು. ಜೊತೆಗೆ ಆರ್ಥಿಕ ನಷ್ಟವನ್ನು ಎದುರಿಸಬಹುದು. ಇದರ ಜೊತೆಗೆ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಮನೆಯಲ್ಲಿ ವಾಸ್ತುದೋಷವಿದ್ದರೆ ಅದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನೀವು ಮುಂದೆ ದೊಡ್ಡ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುತ್ತೀರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ಎಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸಿದರೂ ವ್ಯವಹಾರದಲ್ಲಿ ಯಾವುದೇ ಪ್ರಗತಿ ಇರುವುದಿಲ್ಲ ಅಥವಾ ನಷ್ಟವಿರುತ್ತದೆ. ಇದರಿಂದ ನೀವು ವಾಸಿಸುವ ಮನೆಯಲ್ಲಿ ವಾಸ್ತು ದೋಷವಿರುವ ಸಾಧ್ಯತೆಯಿರುತ್ತದೆ. ವಾಸ್ತು ದೋಷವಿರುವ ಮನೆಯು ನಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಮನೆಯ ನಿವಾಸಿಗಳ ಆತ್ಮವಿಶ್ವಾಸ ಮತ್ತು ಧೈರ್ಯ ಕಡಿಮೆ ಮಾಡುತ್ತದೆ.

2 /5

ನಿಮ್ಮ ಮನೆಯ ಸದಸ್ಯರು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾರೆಯೇ? ಮನೆಯಲ್ಲಿ ಹಣವಿಲ್ಲವೇ? ಆದಾಯದಲ್ಲಿ ಸುಧಾರಣೆ ಇಲ್ಲವೇ? ಹೀಗಿದ್ದರೆ ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಎಂದರ್ಥ.

3 /5

ನೀವು ವಾಸಿಸುವ ಮನೆ ನಿಮಗೆ ಒಳ್ಳೆಯ ಭಾವನೆ ನೀಡದಿದ್ದರೆ, ಆ ಮನೆಯಲ್ಲಿ ವಾಸ್ತು ದೋಷವಿದೆ ಎಂದರ್ಥ. ನೀವು ಉತ್ತಮ ಆಹಾರ ಸೇವಿಸಿ ಮಲಗಿದರೂ ಚೆನ್ನಾಗಿ ನಿದ್ದೆ ಬರುವುದಿಲ್ಲ. ನಿಮ್ಮ ಮನಸ್ಸು ಸದಾ ಒತ್ತಡದಲ್ಲಿಯೇ ಇರುತ್ತದೆ. ಈ ರೀತಿ ಲಕ್ಷಣಗಳಿದ್ದಲ್ಲಿ ಮನೆಯಲ್ಲಿ ವಾಸ್ತು ದೋಷವಿರುತ್ತದೆ. 

4 /5

ಮನೆಯಲ್ಲಿ ಪ್ರತಿದಿನವೂ ಜಗಳಗಳು ನಡೆಯುತ್ತಿವೆಯೇ? ಇದಕ್ಕೆ ಮುಖ್ಯ ಕಾರಣವೇ ಮನೆಯಲ್ಲಿನ ವಾಸ್ತುದೋಷ. ಇದರಿಂದ ಮನೆಯ ಸದಸ್ಯರ ಮನಸ್ಥಿತಿಯಲ್ಲಿ ಅನಗತ್ಯ ಕಿರಿಕಿರಿ ಉಂಟಾಗಿ ಪರಸ್ಪರ ಜಗಳವಾಡುತ್ತಾರೆ. ಪದೇ ಪದೇ ನಷ್ಟ ಅಥವಾ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಆದರೂ ಸಹ ಮನೆಯಲ್ಲಿ ನೆಗೆಟಿವ್ ಎನರ್ಜಿ ತುಂಬಿದೆ ಎಂದರ್ಥ.

5 /5

ನಿಮ್ಮ ಜೀವನದಲ್ಲಿ ನಿರಾಸಕ್ತಿ ಮತ್ತು ಹತಾಶೆ-ದುಃಖದಿಂದ ಕೂಡಿದೆಯೇ? ಇದು ಸಹ ವಾಸ್ತುದೋಷದ ಸಂಕೇತ. ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ವಿವಿಧ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅದನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)