ಶೀಘ್ರದಲ್ಲಿಯೇ ಗ್ರಹಗಳ ರಾಜ ಆದಿತ್ಯನ ನಕ್ಷತ್ರ ಪರಿವರ್ತನೆ, ಲಕ್ಷ್ಮಿ ನಾರಾಯಣನ ಕೃಪೆಯಿಂದ ಈ ಜನರ ಜೀವನದಲ್ಲಿ ಹಣವೋ ಹಣ ಹರಿದು ಬರಲಿದೆ!

Surya Nakshatra Parivartan 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಶೀಘ್ರದಲ್ಲಿಯೇ ಪೂರ್ವಾಫಾಲ್ಗುನಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರಿಂದ ಹಲವು ಜಾತಕದವರ ಭಾಗ್ಯ ಸಂಪೂರ್ಣ ಬದಲಾಗಲಿದೆ. ಈ ಜನರ ಮನೆಯಲ್ಲಿ ಧನ ಧಾನ್ಯ ವೃದ್ಧಿಯ ಜೊತೆಗೆ ಸಮಾಜದಲ್ಲಿ ಇವರಿಗೆ ಅಪಾರ ಘನತೆ ಗೌರವ ಪ್ರಾಪ್ತಿಯಾಗಲಿದೆ. 
 

ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಹೇಗೆ ಬದಲಾಯಿಸುತ್ತವೆಯೋ ಹಾಗೆಯೇ ತಮ್ಮ ನಕ್ಷತ್ರಗಳನ್ನು ಕೂಡ ಪರಿವರ್ತಿಸುತ್ತವೆ. ಒಟ್ಟು 27 ನಕ್ಷತ್ರಗಳಲ್ಲಿ ಯಾವುದಾದರೊಂದು ನಕ್ಷತ್ರದಲ್ಲಿ ಗ್ರಹಗಳ ಸಂಚಾರ ಇದ್ದೇ ಇರುತ್ತದೆ. ಹೀಗಿರುವಾಗ ಗ್ರಹಗಳ ರಾಜ ಎಂದೇ ಕರಾಯಲಾಗುವ ಸೂರ್ಯ ದೇವ ಪೂರ್ವಾಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಸೂರ್ಯ ಆಗಸ್ಟ್ 31 ಅಂದರೆ ಇಂದೇ ರಾತ್ರಿ 9 ಗಂಟೆ 44 ನಿಮಿಷಕ್ಕೆ ಪೂರ್ವಾ ಫಾಲ್ಗುಣಿ ನಕ್ಷತ್ರದಲ್ಲಿ ಪ್ರವೇಶಿಸಲಿದ್ದಾನೆ. ಈ ನಕ್ಷತ್ರದಲ್ಲಿ ಆತ ಸೆಪ್ಟೆಂಬರ್ 14 ಬೆಳಗ್ಗೆ 3 ಗಂಟೆ 38 ನಿಮಿಷಗಳ ವರೆಗೆ ಇರಲಿದ್ದಾನೆ ಮತ್ತು ನಂತರ ಉತ್ತರಾ ಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ನಕ್ಷತ್ರ ಪರಿವರ್ತನೆ ಹಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಆದರೆ, ಇದರಿಂದ ಕೆಲ ಜಾತಕದವರು ವಿಶೇಷ ಜಾಗರೂಕರಾಗಿರಬೇಕಾದ ಕಾಲ ಕೂಡ ಬರಲಿದೆ. ಬನ್ನಿ ಯಾವ ಅದೃಷ್ಟವಂತ ರಾಶಿಗಳ ಪಾಲಿಗೆ ಸೂರ್ಯನ ಈ ನಕ್ಷತ್ರ ಪರಿವರ್ತನೆ ಲಾಭ ತಂದು ಕೊಡಲಿದೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ವಕ್ರ ಭಾವದಲ್ಲಿ 'ಮಹಾ ವಿಪರೀತ ರಾಜಯೋಗ' ರೂಪಿಸಿದ ಗ್ರಹಗಳ ರಾಜಕುಮಾರ, ಈ ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಪಂಚಮ ಭಾವದ ಅಧಿಪತಿ ಹಾಗೂ ಆತ ಪಂಚಮ ಭಾವದಲ್ಲಿಯೇ ತನ್ನ ನಕ್ಷತ್ರ ಪರಿವರ್ತನೆಯನ್ನು ನಡೆಸಲಿದ್ದಾನೆ. ಹೀಗಿರುವಾಗ ಮೇಕ್ಷ ರಾಶಿಯ ಜಾತಕದವರಿಗೆ ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಲಾಭ ಸಿಗಲಿದೆ. ನಿಮ್ಮ ಬುದ್ಧಿ ಚುರುಕಾಗಿರುವ ಕಾರಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆ ಇದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ.   

2 /5

ಸಿಂಹ ರಾಶಿ: ಪ್ರಸ್ತುತ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸೂರ್ಯ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಪೂರ್ವಾಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶದಿಂದ ನಿಮ್ಮ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. ಮನೆಯಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ನೌಕರಿಯ ಹೊಸ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಇದಲ್ಲದೆ ನಿಮಗಾಗಿ ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ.   

3 /5

ವೃಶ್ಚಿಕ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವಕ್ಕೆ ಸೂರ್ಯ ಅಧಿಪತಿ ಹಾಗೂ ಆತ ನಿಮ್ಮ ಜಾತಕದ ದಶಮ ಭಾವದಲ್ಲಿಯೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಈ ಭಾವವನ್ನು ವೃತ್ತಿ ಹಾಗೂ ಕಚೇರಿಗೆ ಸಂಬಂಧಿಸಿದ ಜಾಗ ಎಂದು ಕರೆಯಲಾಗಿದೆ. ಹೀಗಿರುವಾಗ ಈ ಜಾತಕದವರ ವೃತ್ತಿ ಜೀವನ ಉತ್ತಮವಾಗಲಿದೆ. ಅತ್ಯುತ್ತಮ ಅವಕಾಶಗಳು ಒದಗಿ ಬರಲಿವೆ. ಸರ್ಕಾರಿ ಕ್ಷೇತ್ರದಲ್ಲಿ ನಿರತರಾದವರಿಗೆ ಹಲವು ಪಟ್ಟು ಹೆಚ್ಚು ಶುಭಫಲಗಳು ಪ್ರಾಪ್ತಿಯಾಗಲಿವೆ. ಇದರ ಜೊತೆಗೆ ಕುಟುಂಬದ ಸಂಪೂರ್ಣ ಬೆಂಬಲ ಸಿಗಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ.  

4 /5

ತುಲಾ ರಾಶಿ: ನಿಮ್ಮ ಗೋಚರ ಜಾತಕದ ಹನ್ನೊಂದನೆ ಮನೆಗೆ ಸೂರ್ಯ ಅಧಿಪತಿ ಮತ್ತು ಆ ಈ ಭಾವದಲ್ಲಿಯೇ ತನ್ನ ನಕ್ಷತ್ರ ಪರಿವರ್ತನೆಯನ್ನು ನಡೆಸಲಿದ್ದಾನೆ. ಹೀಗಿರುವಾಗ ಈ ಜಾತಕದ ಜನರಿಗೆ ಆಕಷ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಧನಧಾನ್ಯ ವೃದ್ಧಿಯಾಗಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸಗಳಿಗೆ ಪುನಃ ಚಾಲನೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಫಲ ಪ್ರಾಪ್ತಿಯಾಗಲಿದೆ.   

5 /5

ಧನು ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವಕ್ಕೆ ಸೂರ್ಯ ಅಧಿಪತಿ. ಇದೇ ಭಾವದಲ್ಲಿದ್ದುಕೊಂಡು ಆತ ಪೂರ್ವಾ ಫಾಲ್ಗುಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಹೀಗಿರುವಾಗ ಈ ಜಾತಕದ ಜನರಿಗೂ ಕೂಡ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ದೀರ್ಘಕಾಲದಿಂದ ನಿಂತುಹೋದ ಕೆಲಸಗಳು ಪುನಾರಂಭಗೊಳ್ಳಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣ ಮನೆಮಾಡಲಿದೆ. ನೀವು ಪರಸ್ಪರರಿಗೆ ಪ್ರೇರಣೆಯನ್ನು ನೀಡುವಿರಿ. ದೂರದ ಪ್ರವಾಸ ಸಂಭವಿಸುವ ಸಾಧ್ಯತೆ ಇದೇ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)