Viral News: 6 ವರ್ಷದ ಹುಡುಗಿ ಖರೀದಿಸಿರುವ ಈ ಭಯಾನಕ ಆಟಿಕೆ ನೋಡಿ

ಭಯಾನಕವಾಗಿರುವ ಆಟಿಕೆಯ ಬಗ್ಗೆ ತನ್ನ ಮಗಳಿಗೆ ಯಾವುದೇ ಹೆದರಿಕೆ ಇಲ್ಲದ್ದನ್ನು ಕಂಡು ತಾಯಿಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗಿದೆ.

ಮಕ್ಕಳು ತಮ್ಮ ಇಷ್ಟದ ಆಟಿಕೆಗಳನ್ನು ಖರೀದಿಸುವುದು ಸಾಮಾನ್ಯ. ಅದೇ ರೀತಿ ಈ 6 ವರ್ಷದ ಹುಡುಗಿ ತನಗೆ ಇಷ್ಟವಾದ ಆಟಿಕೆಯೊಂದಿಗೆ ಮನೆಗೆ ಬಂದಾಗ ಆಕೆಯ ತಾಯಿ ಆಟಿಕೆ ನೋಡಿ ಗಾಬರಿಗೊಂಡಿದ್ದಾರೆ. ಇಷ್ಟು ಭಯಾನಕವಾಗಿರುವ ಆಟಿಕೆಯ ಬಗ್ಗೆ ತನ್ನ ಮಗಳಿಗೆ ಯಾವುದೇ ಹೆದರಿಕೆ ಇಲ್ಲದ್ದನ್ನು ಕಂಡು ತಾಯಿಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗಿದೆ. ವಾರಾಂತ್ಯದಲ್ಲಿ ಈ ಹುಡುಗಿ ತನ್ನ ಅಜ್ಜಿಯನ್ನು ಭೇಟಿ ಮಾಡಲು ಹೋಗಿದ್ದಳು. ಈ ಸಮಯದಲ್ಲಿ ಖರೀದಿಸಿರುವ  ಭಯಾನಕ ಬೊಂಬೆಯ ಆಟಿಕೆಯು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

6 ವರ್ಷದ ಸ್ಕೈ(Sky)ನ ತಾಯಿ ಜೋಡಿ ಲು(Jodie Lu) ತನ್ನ ಮುದ್ದಿನ ಮಗಳನ್ನು ಅಜ್ಜಿಯರ ಮನೆಗೆ ಕಳುಹಿಸಿದ್ದಳು. ಆಕೆಯ ಅಜ್ಜಿಯಂದಿರು ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಆಕೆಗೆ ಇಷ್ಟವಾದ ಎಲ್ಲ ವಸ್ತುಗಳನ್ನು ಕೊಡಿಸಿದ್ದರು. ಈ ವೇಳೆ ಸ್ಕೈ ಒಂದು ಆಟಿಕೆ ಅಂಗಡಿಗೆ ಹೋಗಿದ್ದಳು. ಆಕೆಯೇ ಇಡೀ ಆಟಿಕೆ ಅಂಗಡಿಯನ್ನು ಸುತ್ತಾಡಿ ಹುಡುಕಾಡಿ ಕೊನೆಗೆ ಒಂದು ಗೊಂಬೆಯನ್ನು ಇಷ್ಟಪಟ್ಟು ತೆಗೆದುಕೊಂಡು ಬಂದಿದ್ದಳು. ಅಸ್ಥಿಪಂಜರದಂತೆ ಇರುವ ಈ ಗೊಂಬೆ ತುಂಬಾ ಭಯಾನಕವಾಗಿ ಕಾಣುತ್ತದೆ.

2 /5

ನೋಡಲು ತುಂಬಾ ಭಯಾನಕವಾಗಿ ಕಾಣುವ ಈ ಗೊಂಬೆಗೆ ಕಣ್ಣುಗಳ ಬದಲಾಗಿ ಆಳವಾದ ಕುಳಿಗಳಿವೆ. ಅವುಗಳಿಂದ ಕೆಂಪು ಬೆಳಕು ಹೊರಬರುತ್ತದೆ. ಇದು ಮಾತ್ರವಲ್ಲ ಈ ಅಸ್ಥಿಪಂಜರವು ಕುದುರೆಯ ಮೇಲೆ ಕುಳಿತಿದೆ. ಅದನ್ನು ಸ್ವಿಚ್ ಮಾಡಿದ ತಕ್ಷಣ ಚಲಿಸಲು ಪ್ರಾರಂಭಿಸುತ್ತದೆ ಜೊತೆಗೆ ಭಯಾನಕ ಧ್ವನಿಯಲ್ಲಿ ಹಾಡಲು ಶುರುಮಾಡುತ್ತದೆ.

3 /5

ಸ್ಕೈ ಹ್ಯಾಲೋವೀನ್‌(Halloween)ಗಾಗಿ ಈ ಶಾಪಿಂಗ್ ಮಾಡಿದ್ದಾಳೆ. ಮನೆಗೆ ಬರುವ ಮೊದಲು ಆಕೆ ನನಗೆ ಈ ಆಟಿಕೆಯನ್ನು ವಿಡಿಯೋ ಕಾಲ್ ನಲ್ಲಿ ತೋರಿಸಿದಾಗ ನನಗೆ ಆಘಾತವಾಯಿತು. ಅದನ್ನು ಮನೆಗೆ ತರಬೇಡಿ ಎಂದು ನಾನು ಆಕೆಗೆ ತಿಳಿಹೇಳಿದೆ. ಇದು ನನಗೆ ಹಾರರ್ ಚಿತ್ರದ ಪಾತ್ರವಂತೆ ಕಾಣಿಸುತ್ತಿತ್ತು. ಹೀಗಾಗಿ ನಾನು ಸ್ವಲ್ಪ ಹೆದರಿಕೊಂಡಿದ್ದೆ. ಆದರೆ ಸ್ಕೈ ಆ ಭಯಾನಕ ಆಟಿಕೆ ಮನೆಗೆ ತರುತ್ತೇನೆ, ಏನೂ ತೊಂದರೆಯಾಗುವುದಿಲ್ಲವೆಂದು ನನಗೆ ಮನವರಿಕೆ ಮಾಡಿದಳು ಎಂದು ಆಕೆಯ ತಾಯಿ ಜೋಡಿ ಲು(Jodie Lu) ಹೇಳಿದ್ದಾರೆ.

4 /5

ಜೋಡಿ ಲು(Jodie Lu) ಹೇಳುವ ಪ್ರಕಾರ ಆಕೆಯ ಮುದ್ದು ಮಗಳಾದ ಸ್ಕೈ ತುಂಬಾ ಧೈರ್ಯವಂತೆಯಂತೆ. ಆಕೆ ತನ್ನ ಒಡಹುಟ್ಟಿದ ಸಹೋದರ-ಸಹೋದರಿಯರಲ್ಲಿಯೇ ಅಂತ್ಯಂತ ನಿರ್ಭೀತ ಮತ್ತು ಧೈರ್ಯಶಾಲಿಯಾಗಿದ್ದಾಳೆ. ಆಕೆಯ ಧೈರ್ಯಕ್ಕೆ ಸ್ವತಃ ನಾನೇ ಬೆರಗುಗೊಂಡಿದ್ದೇನೆ. ಮನೆಗೆ ಬಂದಾಗಿನಿಂದ ಸ್ಕೈ ತನ್ನ 9 ವರ್ಷದ ಸಹೋದರಿ ಲೆಕ್ಸಿ ಮತ್ತು 3 ವರ್ಷದ ಸಹೋದರ ರೂ(Roo) ಅವರನ್ನು ಈ ಆಟಿಕೆಯಿಂದ ಬೆದರಿಸುವ ಮೂಲಕ ತನ್ನ ಕೆಲಸವನ್ನು ಅವರಿಂದ ಮಾಡಿಕೊಳ್ಳುತ್ತಿದ್ದಾಳೆ ಅಂತಾ ಹೇಳಿದ್ದಾರೆ.

5 /5

ಅಕ್ಟೋಬರ್ 31ರಂದು ಹ್ಯಾಲೋವೀನ್‌ನಲ್ಲಿ ಕೂಡ ಸ್ಕೈ ಮಾಟಗಾತಿಯಂತೆ ಬಟ್ಟೆ ಧರಿಸಿ ತನ್ನ ಅಜ್ಜಿಯರ ಮನೆಗೆ ಹೋಗಲು ಪ್ಲಾನ್ ಮಾಡಿದ್ದಾಳೆ ಅಂತಾ ಆಕೆಯ ತಾಯಿ ಹೇಳಿದ್ದಾರೆ. ಈ ಬಾರಿ ಮತ್ತೆ ಆಕೆ ಯಾವ ರೀತಿಯ ಭಯಾನಕ ಆಟಿಕೆಯನ್ನು ಮನೆಗೆ ತರುತ್ತಾಳೋ ದೇವರಿಗೆ ಗೊತ್ತು ಅಂತಾ ತಾಯಿ ಹೆದರಿಕೊಂಡಿದ್ದಾರೆ.