Winter Health tips : ನಾವು ಯಾವ ಋತುಮಾನಗಳಲ್ಲಿ ಯಾವ ರೀತಿಯ ಪದಾರ್ಥಗಳನ್ನು ತಿನ್ನಬೇಕು ಎಂಬುದು ಮುಖ್ಯವಾಗುತ್ತದೆ. ನಮ್ಮ ದೈಹಿಕ ಸ್ಥಿತಿಯು ಆ ಸಮಯ ಮತ್ತು ಆಹಾರಕ್ಕೆ ಹೊಂದಿಕೊಳುತ್ತದೇಯೆ ಇಲ್ಲವೇ ಎಂದು ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ರುಚಿಯಾಗಿವೆ ಅಂತ ಸಿಕ್ಕ ಸಿಕ್ಕ ಆಹಾರಗಳನ್ನೇಲ್ಲಾ ತಿನ್ನುವುದರಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೆವೆ.
ಸಾಧ್ಯವಾದಷ್ಟು ಚಳಿಗಾಲದಲ್ಲಿ ನೈಸರ್ಗಿಕ ಮತ್ತು ಸಾವಯುವ ಆಹಾರಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಲಾಭ ಜಾಸ್ತಿ. ಇಲ್ಲಿ ನಾವು ತಿಳಿದು ಕೊಳಲು ಹೊರಟಿರುವ ಅಂಶವೆಂದರೆ ನಿಸರ್ಗದ ಮಡಿಲಿನಿಂದ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥವಾಗಿರುವ ʼಮೆಂತ್ಯೆಸೊಪ್ಪುʼ ಆರೋಗ್ಯ ಗುಣಗಳು..
ಮಂತ್ಯೆ ಸೊಪ್ಪು ಭಾರತೀಯಾ ಅಡಿಗೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥ. ಈ ಸೊಪ್ಪು ಕಡಿಮೆ ಕ್ಯಾಲೋರಿಗಳ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಕರಗುವಂತಹ ನಾರಿ ಅಂಶವನ್ನು ಹೊಂದಿದೆ. ಇದು ಡಯಟ್ ಮಾಡುವ ಅಥವಾ ಕ್ಯಾಲೋರಿ ಸೇವನೆಯ ಬಗ್ಗೆ ಹೆಚ್ಚು ಗಮನ ನೀಡುವವರಿಗೆ ಅತ್ಯಂತ ಪ್ರಯೋಜನಕಾರಿ.
ಮೆಂತ್ಯೆ ಸೊಪ್ಪನ್ನು ತಿಂದಾಗ ಹೆಚ್ಚಿನ ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಆದ್ದರಿಂದ ಅನಗತ್ಯ ಆಹಾರ ಸೇವನೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಹಾಗೇಯೆ ಎದೆಯುರಿಯಂತಹ ಲಕ್ಷಣಗಳನ್ನು ಹೊಂದಿದ್ದಲ್ಲಿ ಅದನ್ನೂ ಸಹ ನಿವಾರಿಸುತ್ತದೆ.
ಚಳಿಗಾಲದಲ್ಲಿ ನಮ್ಮ ದೇಹವನ್ನು ಉಷ್ಣಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ತುಂಬಾ ಅವಶ್ಯಕ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹುಮುಖ್ಯ. ಅದರಂತೆ ನಮ್ಮ ದೇಹಕ್ಕೆ ಶಕ್ತಿ ನೀಡಲು ಸಾತ್ ನೀಡುವ ಹಸಿರು ಎಲೆ ತರಕಾರಿ ಎಂದರೆ ಅದು ಮೆಂತ್ಯೆಸೊಪ್ಪು. ಇದು ನಮಗೆ ಬೇಕಾಗುವಂತಹ ಸಂಪೂರ್ಣ ಪೋಷಕಾಂಶಳನ್ನುಕೊಡುತ್ತದೆ.
ಉತ್ತಮ ಆರೋಗ್ಯಕ್ಕೆ ಸಮೃದ್ಧ ಆಟಿಂಆಕ್ಸಿಡೆಂಟ್ಗಳನ್ನು ನೀಡುತ್ತದೆ : ನಮ್ಮ ಶರೀರ ಆಟಿಂಆಕ್ಸಿಡೆಂಟ್ ಆಹಾರ ಪದರ್ಥಾಗಳನ್ನು ಹೆಚ್ಚು ಬಯಸುತ್ತದೆ. ಮೆಂತ್ಯೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಬೀಟಾ ಕೆರೋಟಿನ್ ಅತ್ಯಧಿಕವಾಗಿವೆ. ರೋಗನಿರೋಧಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಸಾಮಾನ್ಯ ಖಾಯಿಲೆಗಳ ವಿರುದ್ಧ ಹೋರಾಡಲು ಇವು ನೆರವಾಗುತ್ತದೆ. ಜೊತೆಗೆ ಆಟಿಂಆಕ್ಸಿಡೆಂಟ್ ಗುಣಲಕ್ಷಣಗಳು ಚರ್ಮಕ್ಕೆ ಹೊಳಪು ಮತ್ತು ಯೌವ್ವನ ನೀಡುವಲ್ಲಿ ಸಹಾಯ ಮಾಡುತ್ತವೆ..
ಕೊಲೆಸ್ಟ್ರಾಲ್ ಮತ್ತು ಮಧುಮೇಹದ ವಿರುದ್ಧ ಹೋರಾಡುತ್ತದೆ : ಈ ಸೊಪ್ಪಿನ ಎಲೆಗಳು ಚಯಾಪಚಾಯ ಕ್ರಿಯೆಗೆ ನೆರವಾಗುತ್ತದೆ, ಒಂದು ಅಧ್ಯಯನದ ಪ್ರಕಾರ ಟೈಪ್1 ಮತ್ತು ಟೈಪ್ 2 ಮದುಮೇಹದಿಂದ ಬಳಲುವ ವ್ಯಕ್ತಿಗಳು ಮೆಂತ್ಯೆಸೊಪ್ಪು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಶರೀರದಲ್ಲಿ ಕಾರ್ಬೋಹೈಡ್ರೇಟ್ ಮಟ್ಟವನ್ನು ಹೆಚ್ಚಿಸುವ ಮತ್ತು ಇನ್ಸುಲಿನ್ ಕಾರ್ಯವಿಧಾನ ಸುಧಾರಿಸುವ ಮೂಲಕ ನಿಮ್ಮ ಶರೀರಕ್ಕೆ ಇದು ನೆರವಾಗುತ್ತದೆ.
ಚರ್ಮದ ಮೇಲಿನ ಕಲೆಗಳನ್ನ ಮಯಾ ಮಾಡುತ್ತದೆ : ಮುಖದ ಮೇಲಿನ ಮೊಡವೆ ಮತ್ತು ಕಲೆಗಳ ಸಮಸ್ಯೆಯಿಂದ ಹೊರಬರಲು ಮೆಂತ್ಯಸೊಪ್ಪು ನೆರವಾಗುತ್ತದೆ. ನೀವು ಸ್ವಲ್ಪ ಮೆಂತ್ಯೆ ಪುಡಿ ಮತ್ತು ನೀರನ್ನು ತೆಗೆದುಕೊಂಡು ಹೆಚ್ಚಿರುವ ಮುಖದ ಕಲೆಗಳ ಮೇಲೆ ಈ ಮಿಶ್ರಣವನ್ನು ಹಚ್ಚಿ ಹದಿನೈದಿ ನಿಮಿಷದ ನಂತರ ಮುಖ ತೊಳೆಯಬೇಕು. ಹಚ್ಚಿದ ಪ್ರತಿ ಸಲವೂ ನಿಮ್ಮ ಮುಖದಲ್ಲಿನ ವ್ಯತ್ಯಾಸ ನೀವೇ ಗಮನಿಸಿ!
ಉದ್ದನೆಯ ಮತ್ತು ಆರೋಗ್ಯಕರ ಕೂದಲಿಗೆ ಮದ್ದು : ಉದ್ದನೆಯ ದಟ್ಟ ಕೂದಲಿಗೆ ಆಯುರ್ವೇದದಲ್ಲಿ ಸೂಚಿಸಿರುವಂತೆ ಮೆಂತ್ಯೆಸೊಪ್ಪು ನಿಮ್ಮ ನೆತ್ತಿ ಹಾಗೂ ಕೂದಲಿಗೆ ಅತ್ಯುತ್ತಮವಾಗಿದೆ. ಮೆಂತ್ಯೆ ಪುಡಿ, ಮೆಂತ್ಯೆಸೊಪ್ಪು, ಮೆಂತ್ಯೆಬೀಜದ ಪುಡಿಯನ್ನು ನಿಮ್ಮ ಕೂದಲಿಗೆ ಹಚ್ಚಿ ನಿಯಮಿತವಾಗಿ ಬಳಸುವುದರಿಂದ ದಪ್ಪನೆಯ ಮತ್ತು ದಟ್ಟವಾದ ಕೂದಲು ಬೆಳೆಯುವುದನ್ನು ನಾವು ಗಮನಿಸಬಹುದು.
ಹಾರ್ಮೋನ್ ಸಮತೋಲನ ಮಾಡುತ್ತದೆ : ಮನುಷ್ಯನಿಗೆ ದೇಹದಲ್ಲಿ ಹಾರ್ಮೋನ್ ಸಮತೋಲನ ಬಹಳ ಮುಖ್ಯ, ಇಲ್ಲದಿದ್ದರೆ ಮಾನಸಿಕವಾಗಿ ಬದಲಾವಣೆ ಕಂಡು ಬರುತ್ತದೆ. ಹೀಗಾಗಿ ಗಿಡ ಮೂಲಿಕೆಗಳಿಂದ ಈ ಒಂದು ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಅದರಲ್ಲಿ ಮೆಂತ್ಯೆಸೊಪ್ಪು ಆಗ್ರಸ್ಥಾನದಲ್ಲಿರುತ್ತದೆ. ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಹಾರ್ಮೋನ್ ಸಮತೋಲನ ಮಾಡುವಲ್ಲಿ ಮೆಂತ್ಯೆಸೊಪ್ಪಿನ ಪ್ರಭಾವ ಇದ್ದೇ ಇರುತ್ತದೆ.