ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇವರೇ!? ಈಕೆಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದೇಗೆ ಗೊತ್ತಾ?

kannada actress pavithra gowda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್‌ ಬಂಧಿತರಾಗಿದ್ದಾರೆ.. ಈ ಕೇಸ್‌ನ ಎ1 ಆರೋಪಿ ಎಂದು ಗುರುತಿಸಿಕೊಂಡಿರುವ ಪವಿತ್ರಾ ಗೌಡ ಅವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಇದೀಗ ಹೊರಬೀಳುತ್ತಿವೆ.. 

1 /5

ಕನ್ನಡದ ನಿರ್ದೇಶಕ ಉಮೇಶ್ ಗೌಡ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಪವಿತ್ರಾ ಗೌಡ ಅವರ ಚಿತ್ರರಂಗದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ...ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು ಎಂದು ನಿರ್ದೇಶಕ ಉಮೇಶ್ ಗೌಡ ಹೇಳಿದ್ದಾರೆ..   

2 /5

 2013 ರಲ್ಲಿ ಉಮೇಶ್ ಗೌಡ ಪವಿತ್ರಾ ಗೌಡ ಅವರ ಮೊದಲ ಅಗಮ್ಯ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾದಲ್ಲಿ ನಾಯಕಿ ಆಯ್ಕೆ ವಿಚಾರದಲ್ಲಿ ಪವಿತ್ರಾ ಗೌಡ ಮೊದಲ ಆಯ್ಕೆಯಾಗಿರಲಿಲ್ಲ.. ಆ ಲಿಸ್ಟ್‌ನಲ್ಲಿ ಅವರ ಹೆಸರೂ ಸಹ ಇರಲಿಲ್ಲ ಎಂದು ಉಮೇಶ್‌ ಹೇಳಿದ್ದಾರೆ.   

3 /5

 ಅನೇಕ ನಟಿಯರನ್ನು ಸಂಪರ್ಕಿಸಿದೆ ಆದರೆ ಅವರು ಹೆಚ್ಚು ಸಂಭಾವನೆ ಕೇಳಿದ್ದರು.. ನಮ್ಮದು ಕಡಿಮೆ ಬಜೆಟ್‌ ಸಿನಿಮಾ ಆಗಿದ್ದರಿಂದ ಈ ಸಿನಿಮಾಗೆ ಯಾವ ನಟಿಯರೂ ಗ್ರೀನ್‌ ಸಿಗ್ನಲ್‌ ನೀಡಿರಲಿಲ್ಲ.. ಹೀಗಾಗಿ ಯಾವುದೇ ಬೇರೆ ಆಯ್ಕೆ ಇರದೇ ಪವಿತ್ರಾ ಅವರಿಗೆ ಈ ಸಿನಿಮಾ ಅವಕಾಶ ನೀಡಬೇಕಾಯಿತು ಎಂದು ಉಮೇಶ್‌ ಮಾತನಾಡಿದ್ದಾರೆ.   

4 /5

ಅಲ್ಲದೇ ಪವಿತ್ರಾ ಗೌಡ ಅವರಿಗೆ ಸರಿಯಾಗಿ ನಟನೆ ಬರುವುದಿಲ್ಲ,, ಅಗಮ್ಯ ಸಿನಿಮಾ ಶೂಟಿಂಗ್‌ ವೇಳೆ ಈ ಕಾರಣದಿಂದ ನಾನೇ ಅವರ ಮೇಲೆ ಗದರಿದ್ದೇನೆ.. ಈ ಸಿನಿಮಾದಲ್ಲಿ ನಟಿಸಿದ್ದಾಗಿ ಪವಿತ್ರಾ ಅವರಿಗೆ  20,000 ನೀಡಿರುವುದಾಗಿ ನಿರ್ದೇಶಕ ಉಮೇಶ್ ಹೇಳಿದ್ದಾರೆ.  

5 /5

ಆಗ ಪವಿತ್ರಾ ಗೌಡ ಕೋಣನಕುಂಟೆಯಲ್ಲಿ 1BHK ಮನೆಯಲ್ಲಿ ವಾಸವಿದ್ದರು.. ಮತ್ತು  ಆಟೋ ಅಥವಾ ಬಿಎಂಟಿಸಿ ಬಸ್‌ನಲ್ಲಿ ಶೂಟಿಂಗ್‌ಗೆ ಬರುತ್ತಿದ್ದರು ಎಂದು ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.