ಬುಧ ಗ್ರಹವು 23 ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಬುಧ ಸಂಕ್ರಮಿಸಿದಾಗಲೆಲ್ಲಾ ಅದು ಜನರ ಬುದ್ಧಿವಂತಿಕೆ, ಮಾತು, ಆರ್ಥಿಕ ಸ್ಥಿತಿ ಮತ್ತು ವ್ಯವಹಾರದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ಬಾರಿ ಬುಧ ಗ್ರಹವು ಮಾರ್ಚ್ 16, 2023 ರಂದು ಸಾಗಲಿದೆ. ಬುಧವು ಮೀನ ರಾಶಿಗೆ ಸಾಗಲಿದೆ ಮತ್ತು ಗುರು ಈಗಾಗಲೇ ಮೀನ ರಾಶಿಯಲ್ಲಿದೆ. ಈ ರೀತಿಯಾಗಿ, ಮೀನದಲ್ಲಿ ಬುಧ ಮತ್ತು ಗುರುಗಳ ಸಂಯೋಗ ಇರುತ್ತದೆ. ಈ ಗ್ರಹ ಸ್ಥಾನವು ಕೆಲವು ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಬೆಂಗಳೂರು : ಬುಧ ಗ್ರಹವು 23 ದಿನಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಬುಧ ಸಂಕ್ರಮಿಸಿದಾಗಲೆಲ್ಲಾ ಅದು ಜನರ ಬುದ್ಧಿವಂತಿಕೆ, ಮಾತು, ಆರ್ಥಿಕ ಸ್ಥಿತಿ ಮತ್ತು ವ್ಯವಹಾರದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ಬಾರಿ ಬುಧ ಗ್ರಹವು ಮಾರ್ಚ್ 16, 2023 ರಂದು ಸಾಗಲಿದೆ. ಬುಧವು ಮೀನ ರಾಶಿಗೆ ಸಾಗಲಿದೆ ಮತ್ತು ಗುರು ಈಗಾಗಲೇ ಮೀನ ರಾಶಿಯಲ್ಲಿದೆ. ಈ ರೀತಿಯಾಗಿ, ಮೀನದಲ್ಲಿ ಬುಧ ಮತ್ತು ಗುರುಗಳ ಸಂಯೋಗ ಇರುತ್ತದೆ. ಈ ಗ್ರಹ ಸ್ಥಾನವು ಕೆಲವು ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಬುಧ ಸಂಕ್ರಮಣವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ಜನರ ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರಲಿದೆ. ಯಾವುದೇ ದೊಡ್ಡ ಮಟ್ಟದ ಸಾಧನೆಯನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಸರಿಯಾದ ಪ್ಲಾನಿಂಗ್ ಮಾಡಿದರೆ ಹಣ ಉಳಿಸುವುದು ಸಾಧ್ಯವಾಗುತ್ತದೆ.
ಕರ್ಕಾಟಕ ರಾಶಿ : ಬುಧಗ್ರಹದ ಸಂಕ್ರಮಣವು ಕರ್ಕಾಟಕ ರಾಶಿಯವರ ವೃತ್ತಿಜೀವನದಲ್ಲಿ ಲಾಭವನ್ನು ನೀಡುತ್ತದೆ. ಉತ್ಸಾಹ ಹೆಚ್ಚಾಗಲಿದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಮಾತೇ ಬಂಡವಾಳ ಎನ್ನುವಂತಿರುವ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜನರು ವಿಶೇಷ ಲಾಭವನ್ನು ಪಡೆಯುತ್ತಾರೆ. ಗೌರವ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ : ಬುಧ ರಾಶಿಯ ಬದಲಾವಣೆಯು ವೃಶ್ಚಿಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಲಾಭವನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಮಾತಿನಲ್ಲಿ ಮಾಧುರ್ಯ ಇಟ್ಟುಕೊಂಡರೆ ಕೈತಪ್ಪುವ ಕೆಲಸದಲ್ಲಿ ಕೂಡಾ ಯಶಸ್ಸು ಸಿಗಬಹುದು. ವೈಯಕ್ತಿಕ ಜೀವನಕ್ಕೆ ಸಮಯ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಮಿಥುನ ರಾಶಿ : ಬುಧ ಸಂಚಾರವು ಮಿಥುನ ರಾಶಿಯವರಿಗೆ ಗರಿಷ್ಠ ಲಾಭವನ್ನು ನೀಡುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ. ಈ ರಾಶಿಯವರು ತಮ್ಮ ವೃತ್ತಿ ಬದುಕಿನಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದಾರೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಏನೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)