• Aug 01, 2023, 14:10 PM IST
1 /5

Shukra Ast 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನ-ವೈಭವ ಕರುಣಿಸುವಾತ ಶುಕ್ರನ ಅಸ್ತ ನೆರವೇರಲಿದ್ದು, ಇದು ಮೂರು ರಾಶಿಗಳ (Spiritual News In Kannada) ಜಾತಕದವರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದೆ. ಬನ್ನಿ ಆ ದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಕರ್ಕ ರಾಶಿ: ನಿಮ್ಮ ಪಾಲಿಗೆ ಶುಕ್ರಾಸ್ತ ಶುಭ ಸಾಬೀತಾಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಳಿದ್ದು ವ್ಯಕ್ತಿತ್ವದಲ್ಲಿಯೂ ಕೂಡ ಹೊಸ ಹೊಳಪು ನೋಡಲು ಸಿಗಲಿದೆ. ಹಳೆ ಹೂಡಿಕೆಯಿಂದ ಲಾಭ ಸಿಗಲಿದೆ. ನಿಂತುಹೋದ ಹಣ ನಿಮ್ಮತ್ತ ಮರಳಲಿದೆ. ನಿಮ್ಮ ಎಲ್ಲಾ ಯೋಜನೆಗಳು ಕೈಗೂಡಲಿವೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಲಾಭ ನಿಮ್ಮದಾಗಲಿದೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ.  

3 /5

ವೃಷಭ ರಾಶಿ: ಶುಕ್ರನ ಅಸ್ತ ಸ್ಥಿತಿ ನಿಮಗೆ ಅನುಕೂಲಕರ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಎಲ್ಲ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಐಷಾರಾಮಿ ವಸ್ತುಗಳನ್ನು ಖರೀದಿಸುವ ಭಾಗ್ಯ ಬರಲಿದೆ. ಜೀವನದಲ್ಲಿ ಪ್ರೇಮ ಹಾಗೂ ಆಕರ್ಷಣೆ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ಒಂಟಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.   

4 /5

ಸಿಂಹ ರಾಶಿ: ವಕ್ರಾವಸ್ಥೆಯಲ್ಲಿ ಶುಕ್ರನ ಅಸ್ತ ಸ್ಥಿತಿ ನಿಮಗೆ ಲಾಭ ತಂದು ಕೊಡಲಿದೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ನಿಮಗೆ ಬರಬೇಕಾದ ಹಣ ಕೈಸೇರಲಿದೆ ಮತ್ತು ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಲ್ಲಲ್ಲಿವೆ. ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಲ್ಲಿ ಧನಲಾಭ ನಿಮ್ಮದಾಗಲಿದೆ. ವೆಚ್ಚದ ಮೇಲೆ ಮೊದಲಿಗಿಂತ ಹೆಚ್ಚಿನ ನಿಯಂತ್ರನಾದ ಅವಶ್ಯಕತೆ ಇದ್ದು, ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)