ಜನವರಿ 17, 2023 ರಂದು ಸಂಜೆ 5:47 ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಗ್ರಹ ಪ್ರಸ್ತುತ ವಕ್ರ ನಡೆಯಲ್ಲಿದ್ದಾನೆ. ನವೆಂಬರ್ 4ರಿಂದ ಶನಿ ಗ್ರಹ ಮತ್ತೆ ನೇರ ನಡೆಗೆ ಮರಳಲಿದೆ.
ಬೆಂಗಳೂರು : ಶನಿ ದೇವ ನವೆಂಬರ್ 4, 2023 ರಂದು ಕುಂಭ ರಾಶಿಯಲ್ಲಿ ಮತ್ತೆ ನೇರ ನಡೆ ಆರಂಭಿಸಲಿದ್ದಾನೆ. ಶನಿದೇವ ನೇರ ನಡೆಗೆ ಮರಳುವುದು ಕೆಲವು ರಾಶಿಯವರಿಗೆ ಇದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವರ ಜೀವನದಲ್ಲಿ ಸಂತೋಷದ ಹೊನಲು ಹರಿಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಮೇಷ ರಾಶಿಯವರ ಇಷ್ಟಾರ್ಥಗಳು ನೆರವೇರಲಿವೆ. ನಿಮ್ಮ ಆದಾಯವನ್ನು ಹೆಚ್ಚಿಸಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸವನ್ನು ಆರಂಭಿಸುವುದಾದರೆ ಯಶಸ್ಸು ಸಿಗುತ್ತದೆ.
ವೃಷಭ ರಾಶಿ : ತಂದೆಯ ಆರೋಗ್ಯದ ಬಗ್ಗೆ ಗಮನ ಕೊಡಿ. ವೃತ್ತಿಯಲ್ಲಿ ಏರಿಳಿತಗಳು ಉಂಟಾಗಬಹುದು. ನಿಮ್ಮ ಕೆಲಸ ಅಥವಾ ಕೆಲಸದ ಸ್ಥಳದಲ್ಲಿಯೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಿಥುನ ರಾಶಿ : ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದು ಸರಿಯಾದ ಸಮಯ. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ.
ಕರ್ಕ ರಾಶಿ : ಆರೋಗ್ಯ ಕ್ಷೀಣಿಸಬಹುದು. ಶನಿ ದೇವರನ್ನು ಮತ್ತು ಕುಲದೇವತೆಯನ್ನು ಪೂಜಿಸಿದರೆ, ಎಲ್ಲಾ ಸವಾಲುಗಳನ್ನು ಜಯಿಸಿ ಯಶಸ್ಸು ಕಾಣಬಹುದು.
ಸಿಂಹ ರಾಶಿ : ಶನಿಯ ಈ ಸಂಚಾರವು ನಿಮ್ಮ ವೈವಾಹಿಕ ಸಂಬಂಧಗಳನ್ನು ಉತ್ತಮಗೊಳಿಸುತ್ತದೆ. ವೃತ್ತಿಜೀವನದಲ್ಲಿಯೂ ಯಶಸ್ಸು ಸಿಗುವುದು.
ಕನ್ಯಾ ರಾಶಿ : ಶತ್ರುಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಸ್ನೇಹಿತರ ಸಹಾಯದಿಂದ ಶತ್ರುಗಳು ಸೋಲುವುದು ಖಂಡಿತಾ.
ತುಲಾ ರಾಶಿ : ತುಲಾ ರಾಶಿಯವರು ತಮ್ಮ ಊರು ಅಥವಾ ದೇಶದ ಹೊರಗಿನ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.
ವೃಶ್ಚಿಕ ರಾಶಿ : ಭೂಮಿ, ಆಸ್ತಿ ಖರೀದಿಸಲು ಬಯಸಿದರೆ, ಕೆಲವು ದಿನಗಳವರೆಗೆ ಕಾಯಿರಿ. ಇಲ್ಲದಿದ್ದರೆ ಸಮಸ್ಯೆ ಎದುರಾಗಬಹುದು. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ.
ಧನು ರಾಶಿ : ಸಹೋದರ-ಸಹೋದರಿಯರ ಸಂಬಂಧಗಳು ಬಲವಾಗಿರುತ್ತವೆ. ಖ್ಯಾತಿ ಮತ್ತು ಗೌರವವನ್ನು ಕಾಪಾಡಿಕೊಳ್ಳಲು, ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರಬೇಕು
ಮಕರ ರಾಶಿ : ಈ ಅವಧಿಯಲ್ಲಿ ಮಕರ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ.
ಕುಂಭ ರಾಶಿ : ಆರೋಗ್ಯ ಸಂಬಂಧಿ ಸಮಸ್ಯೆಗಳು ಪರಿಹಾರವಾಗಲಿವೆ. ವಿದ್ಯಾರ್ಥಿಗಳು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಅಡೆತಡೆಗಳನ್ನು ನಿವಾರಿಸಬಹುದು.
ಮೀನ ರಾಶಿ : ಮೀನ ರಾಶಿಯವರಿಗೆ ಧನಾತ್ಮಕ ಫಲಿತಾಂಶ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಹುದಿನಗಳ ಚಿಂತೆಯಿಂದ ಮುಕ್ತಿ ಸಿಗಲಿದೆ. ಕೈಗೆತ್ತಿಕೊಂಡ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗಲಿದೆ.