Work From Home: ವರ್ಕ್ ಫ್ರಮ್ ಹೋಂ ಮಾಡುವಾಗ ಈ ರೀತಿ ಹೆಚ್ಚಿಸಿ ನಿಮ್ಮ ವೈ-ಫ್ಗೈ ವೇಗ

Work From Home: ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ.

ನವದೆಹಲಿ:  Work From Home - ಪ್ರಸ್ತುತ ಸಮಯದಲ್ಲಿ ದೇಶಾದ್ಯಂತ ಕೊರೊನಾ ಮಹಾಮರಿಯ ಕಾರಣ ದೇಶಾದ್ಯಂತ ವರ್ಕ್ ಫ್ರಮ್ ಹೋಂ ಕಲ್ಚರ್ ಹೆಚ್ಚಾಗತೊಡಗಿದೆ. ಕಚೇರಿಯ ಎಲ್ಲಾ ಚಟುವಟಿಕೆಗಳು ಆನ್ಲೈನ್ ಆಗಿರುವ ಕಾರಣ ಸಂವಹನ ನಡೆಸಲು ಮತ್ತು ತಮ್ಮ ಕಾರ್ಯಗಳನ್ನು ಮಾಡಲು ಜನರಿಗೆ ವೈ-ಫೈ (Wi-Fi) ಅವಶ್ಯಕತೆ ಹೆಚ್ಚಾಗಿ ಬೀಳತೊಡಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಟರ್ ನೆಟ್ ಬಳಕೆ ಕೂಡ ಹೆಚ್ಚಾಗತೊಡಗಿದೆ. ಹೀಗಿರುವಾಗ ನೀವೂ ಕೂಡ ನಿಮ್ಮ ಇಂಟರ್ನೆಟ್ (Internet Speed) ವೇಗವನ್ನು ಹೆಚ್ಚಿಸಲು ಕೆಲ ಕ್ರಮಗಳನ್ನು ಅನುಸರಿಸಬಹುದು. ಎಲ್ಲಕ್ಕಿಂತ ಮೊದಲು ನೀವು ನಿಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಲ್ಲಿ ಇಂಟರ್ ನೆಟ್ ವೇಗವನ್ನು ಪರಿಶೀಲಿಸಿಕೊಳ್ಳಿ. ಇದಕ್ಕಾಗಿ ನೀವು ನಿಮ್ಮ ಬ್ರೌಸರ್ ಮೂಲಕ ಯಾವುದೇ ಒಂದು ವೇಗ ಪರಿಶೀಲಿಸುವ ವೆಬ್ ಸೈಟ್ ಅಂದರೆ ಉದಾಹರಣೆಗಾಗಿ speedtest.net ಅಥವಾ fast.com ಗಳಂತಹ ತಾಣಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ ಡೌನ್ ಲೋಡ್ ಹಾಗೂ ಅಪ್ಲೋಡ್ ಸ್ಪೀಡ್ ಕಾಣಿಸಿಕೊಳ್ಳಲಿದೆ.

 

ಇದನ್ನೂ ಓದಿ-ಸಿಂಪಲ್ ಇಷ್ಟು ಮಾಡಿ.. ಮೂರನೇ ವ್ಯಕ್ತಿಗೆ ನಿಮ್ಮ ವಾಟ್ಸಾಪ್ ಚ್ಯಾಟ್ ಓದಲು ಸಾಧ್ಯವೇ ಆಗುವುದಿಲ್ಲ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

1. ರೌಟರ್ ಅನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸಿ - ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ. ಇದರಿಂದ ನಿಮ್ಮ ರೌಟರ್ (Router) ಸರಿಯಾಗಿ ಕಾರ್ಯನಿರ್ವಹಣೆ ಆರಂಭಿಸಿ, ನಿಮ್ಮ ಇಂಟರ್ನೆಟ್ ಸ್ಪೀಡ್ ಕೂಡ ಹೆಚ್ಚಾಗಲಿದೆ. ಈ ಪದ್ಧತಿಯನ್ನು ನೀವು ಯಾವಾಗ ಬೇಕಾದರೂ ಅನುಸರಿಸಬಹುದಾಗಿದೆ. 

2 /5

2. ರೌಟರ್ ಅಪ್ಡೇಟ್ ಮಾಡಿ - ರೌಟರ್ ಅಪ್ಡೇಟ್ ಗಾಗಿ ಫರ್ಮ್ ವೇರ್ ಗಳನ್ನು ಬಿಡಲಾಗುತ್ತದೆ. ಆದರೆ ಬಹುತೇಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಹೀಗಾಗಿ ಕೂಡಲೇ ನಿಮ್ಮ ರೌಟರ್ ಗಾಗಿ ಬಿಡಲಾಗಿರುವ ಹೊಸ ಅಪ್ಡೇಟ್ ಗಳನ್ನೂ ಚೆಕ್ ಮಾಡಿ, ಕೂಡಲೇ ನಿಮ್ಮ ಡಿವೈಸ್ ಅಪ್ಡೇಟ್ ಮಾಡಿ. ಇದರಿಂದ ನಿಮ್ಮ ಡಿವೈಸ್ ಪುನಃ ಹೊಸ ಡಿವೈಸ್ ನಂತೆ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.

3 /5

3. ರೌಟರ್ ಅನ್ನು ಸರಿಯಾದ ಜಾಗದಲ್ಲಿಡಿ- ಸರಿಯಾದ ನೆಟ್ವರ್ಕ್ (Internet) ಪಡೆಯಲು ನೀವು ನಿಮ್ಮ ಮನೆಯಲ್ಲಿ  ರೌಟರ್ ಅನ್ನು ಯಾವ ಸ್ಥಳದಲ್ಲಿ ಅಳವಡಿಸಿದ್ದೀರಿ ಎಂಬುದು ತುಂಬಾ ಮಹತ್ವವಾಗಿದೆ. ಅತಿ ಹೆಚ್ಚು ಸಿಗ್ನಲ್ ಬರುವ ಜಾಗದಲ್ಲಿ ನೀವು ನಿಮ್ಮ ವೈ-ಫೈ ರೌಟರ್ ಅನ್ನು ಅಳವಡಿಸಬೇಕು. ನಿಮ್ಮ ವೈ-ಫೈಗೆ ಸಿಗ್ನಲ್ ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಶನ್ ಗಳ ಮೂಲಕ ಪ್ರವೇಶಿಸುತ್ತದೆ. ಕೆಲ ಆಬ್ಜೆಕ್ಟ್ ಗಳು ಈ ರೇಡಿಯೇಶನ್ ಅನ್ನು ತಡೆಹಿಡಿಯುತ್ತವೆ ಮತ್ತು ಕೆಲ ಆಬ್ಜೆಕ್ಟ್ ಗಳು ಬಿಟ್ಟುಕೊಡುತ್ತವೆ.

4 /5

4. ಆಂಟಿನಾದಿಂದ ಹೆಚ್ಚಿನ ಸಪೋರ್ಟ್ ಸಿಗುತ್ತದೆ - ನೀವು ನಿಮ್ಮ ಮನೆಯಲ್ಲಿ ಅಳವಡಿಸಿರುವ ರೌಟರ್ಗೆ ಹೊರಭಾಗದ ಅಂಟಿನಗಳಿವೆಯೇ ಎಂಬುದನ್ನು ಎಂದಾದರೂ ಪರಿಶೀಲಿಸಿದ್ದೀರಾ? ಉತ್ತಮ ಸಿಗ್ನಲ್ ಪಡೆಯಲು ನೀವು ಒಂದು ಎಕ್ಸ್ಟರ್ನಲ್ ಆಂಟಿನಾ ಖರೀದಿಸಿ ಅಳವಡಿಸಬಹುದು. ಹಲವು ಕಂಪನಿಗಳು ಆಂಟಿನಾಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತವೆ. ಯಾವ ದಿಕ್ಕಿನಲ್ಲಿ ಆಂಟಿನಾಗಳಿವೆಯೋ ಅದೇ ದಿಕ್ಕಿನಲ್ಲಿ ರೌಟರ್ ಸಿಗ್ನಲ್ ರವಾನಿಸುತ್ತದೆ.

5 /5

5. ಇತರೆ ಡಿವೈಸ್ ಗಳನ್ನು ಡಿಸ್ಕನೆಕ್ಟ್ ಮಾಡಿ - ಒಂದು ವೇಳೆ ನಿಮಗೆ ಲ್ಯಾಪ್ ಟಾಪ್ ನಲ್ಲಿ ವೇಗದ ಇಂಟರ್ನೆಟ್ ಬೇಕಿದ್ದರೆ, ನೀವು ಬಳಕೆ ಮಾಡದ ಡಿವೈಸ್ ನಲ್ಲಿ ವೈ-ಫೈ ಸ್ಥಗಿತಗೊಳಿಸಿ. ಇದರಿಂದ ಕಡಿಮೆ ಉಪಕರಣಗಳ ಮೇಲೆ ಬ್ಯಾಂಡ್ ವಿಡ್ತ್ ಖರ್ಚಾಗುವ ಕಾರಣ ಇಂಟರ್ನೆಟ್ ಸ್ಪೀಡ್ ಕೂಡ ಹೆಚ್ಚಾಗಲಿದೆ.