Yahoo ತನ್ನ ಜನಪ್ರಿಯ ಸೇವೆಗಳಲ್ಲಿ ಒಂದಾದ Yahoo Answers ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ನವದೆಹಲಿ : Yahoo ತನ್ನ ಅತ್ಯಂತ ಜನಪ್ರಿಯ ಸೇವೆಗಳಲ್ಲಿ ಒಂದನ್ನು ಸ್ಥಗಿತಗೊಳಿಸಲಿದೆ. ಸುಮಾರು 16 ವರ್ಷಗಳ ಹಿಂದೆ ಪ್ರಾರಂಭವಾದ ಈ ಸೇವೆಯನ್ನು ಜನರು ವ್ಯಾಪಕವಾಗಿ ಬಳಸುತ್ತಿದ್ದರು. ಆದರೆ ಈಗ ಈ ಸೇವೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Yahoo ತನ್ನ ಜನಪ್ರಿಯ ಸೇವೆಗಳಲ್ಲಿ ಒಂದಾದ Yahoo Answers ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಸೇವೆಯನ್ನು ಶಾಶ್ವತವಾಗಿ ನಿಲ್ಲಿಸಲಾಗುವುದು ಎಂದು ಕಂಪನಿ ಹೇಳಿದೆ.
ವರದಿಯ ಪ್ರಕಾರ, ಮೇ 4 ರ ನಂತರ Yahoo Answers ಅನ್ನು ಮುಖ್ಯ ಸರ್ವರ್‌ನಿಂದ ತೆಗೆದುಹಾಕಲಾಗುತ್ತದೆ. ಇದರ ನಂತರ, ಬಳಕೆದಾರರಿಗೆ ಈ ಪೇಜ್ ಆಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ.
ಕಂಪನಿಯು Yahoo Answers ಅಪ್ಡೇಟ್ ಮಾಡುವುದನ್ನು ನಿಲ್ಲಿಸಿದೆ. ಈಗ ಬಳಕೆದಾರರು ಈ ಸೇವೆಯಲ್ಲಿ ಯಾವುದೇ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಏಪ್ರಿಲ್ 20ರಿಂದ Yahoo Answers ವೆಬ್‌ಸೈಟ್ ಕೇವಲ ಓನ್ಲಿ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ
ನೀವು ಈ ಮೊದಲು Yahoo Answersನಲ್ಲಿ ಪ್ರಶ್ನೆಗೆ ಉತ್ತರಿಸಿದ್ದರೆ, ಬ್ಯಾಕಪ್ ತೆಗೆದುಕೊಳ್ಳಲು ಇದು ಕೊನೆಯ ಅವಕಾಶವಾಗಿದೆ. ಬಳಕೆದಾರರು ತಮ್ಮ ಬ್ಯಾಕಪ್ ಅನ್ನು ಜೂನ್ 30 ರವರೆಗೆ ಪಡೆದುಕೊಳ್ಳಬಹುದು.
2005 ರಲ್ಲಿ Yahoo Answers ಅನ್ನು ಪ್ರಾರಂಭಿಸಲಾಯಿತು. ಆದರೆ ಬಳಕೆದಾರರ ವಿಚಿತ್ರ ಪ್ರಶ್ನೆಗಳು ಮತ್ತು ಅಷ್ಟೇ ವಿಚಿತ್ರವಾದ ಉತ್ತರಗಳ ಕಾರಣದಿಂದಾಗಿ , ಈ ಸೇವೆಯು ಹೆಚ್ಚು ಜನಪ್ರಿಯವಾಗಿರಲಿಲ್ಲ.