ಲಕ್ಷ್ಮೀ ಕೃಪೆಯಿಂದ ಜೀವನ ಪೂರ್ತಿ ಐಶಾರಾಮಿ ಜೀವನ ನಡೆಸುತ್ತಾರೆ ಈ ರಾಶಿಯವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ 12 ರಾಶಿಗಳ ಮೇಲೆ  ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಹಾಗೆಯೇ ಕೆಲವೊಂದು ರಾಶಿಯವರ ಮೇಲೇ ಲಕ್ಷ್ಮೀ ದೇವಿಯ ಕೃಪೆ ಅಧಿಕವಾಗಿರುತ್ತದೆ. ಅವರು ಕಷ್ಟಪಟ್ಟು ಕೆಲಸ ಮಾಡದೆಯೂ ಜೀವನದಲ್ಲಿ ಸಂಪೂರ್ಣ ಆನಂದವನ್ನು ಪಡೆಯುತ್ತಾರೆ. ಎಲ್ಲಾ ಭೌತಿಕ ಸುಖವನ್ನೂ ಅನುಭವಿಸುತ್ತಾರೆ. ಈ ಮೂರು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರೀತಿಯಂತೆ. 

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ 12 ರಾಶಿಗಳ ಮೇಲೆ  ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಹಾಗೆಯೇ ಕೆಲವೊಂದು ರಾಶಿಯವರ ಮೇಲೇ ಲಕ್ಷ್ಮೀ ದೇವಿಯ ಕೃಪೆ ಅಧಿಕವಾಗಿರುತ್ತದೆ. ಅವರು ಕಷ್ಟಪಟ್ಟು ಕೆಲಸ ಮಾಡದೆಯೂ ಜೀವನದಲ್ಲಿ ಸಂಪೂರ್ಣ ಆನಂದವನ್ನು ಪಡೆಯುತ್ತಾರೆ. ಎಲ್ಲಾ ಭೌತಿಕ ಸುಖವನ್ನೂ ಅನುಭವಿಸುತ್ತಾರೆ. ಈ ಮೂರು ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಬಹಳ ಪ್ರೀತಿಯಂತೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಲಾ ರಾಶಿಯವರೆಂದರೆ ಲಕ್ಷ್ಮೀ ದೇವಿಗೆ ಅಚ್ಚು ಮೆಚ್ಚು ಎಂದು ಹೇಳಲಾಗುತ್ತದೆ. ಇವರ ಮೇಲೆ  ಲಕ್ಷ್ಮೀಯ ವಿಶೇಷ ಆಶೀರ್ವಾದವಿರುತ್ತದೆ. ಐಶ್ವರ್ಯ ದೇವತೆಯ ಕೃಪೆಯಿಂದ ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ. ತಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವುದಿಲ್ಲ. ಒಂದೊಮ್ಮೆ ಜೀವನದಲ್ಲಿ ಸಮಸ್ಯೆಗಳು ಎದುರಾದರೂ ಲಕ್ಷ್ಮೀ ಕೃಪೆಯಿಂದ ಆ ಸಮಸ್ಯೆ ಬಗೆಹರಿದು ಬಿಡುತ್ತದೆ. ಇವರು ಹಣಕಾಸಿನ ವಿಷಯದಲ್ಲಿ ಬಹಳ ಅದೃಷ್ಟವಂತರಂತೆ.

2 /3

ವೃಷಭ ರಾಶಿಯವರ ಮೇಲೆ ಕೂಡಾ ಲಕ್ಷ್ಮೀ ದೇವಿಯ ಆಶೀರ್ವಾದ ಹೆಚ್ಚೇ ಇರುತ್ತದೆ.  ಇವರ ಜೀವನದಲ್ಲಿ ಕೂಡಾ ಯಾವುದಕ್ಕೂ ಕೊರತೆಯಿರುವುದಿಲ್ಲ.  ಅವರು ಆರ್ಥಿಕವಾಗಿ ತುಂಬಾ ಸಬಲರಾಗಿರುತ್ತಾರೆ. ಇಷ್ಟೇ ಅಲ್ಲ, ಎಲ್ಲಾ ರೀತಿಯ ಸಂತೋಷವನ್ನು ಅನುಭವಿಸುತ್ತಾರೆ.   ಈ ರಾಶಿಯವರು ಬುದ್ಧಿವಂತರು ಮತ್ತು ಶ್ರಮಜೀವಿಗಳು. 

3 /3

ಎಲ್ಲಾ 12 ರಾಶಿಗಳ ಪೈಕಿ ಸಿಂಹ ರಾಶಿಯವರ ಮೇಲೆ ಲಕ್ಷ್ಮಿಯ ಆಶೀರ್ವಾದ ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ. ಇವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಇವರು ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾರೆ. ಅಪಾರ ಲಾಭವನ್ನು ಪಡೆಯುತ್ತಾರೆ. ಈ ಮೇಲೆ ಲಕ್ಷ್ಮೀಯ  ಆಶೀರ್ವಾದ ಜೀವನ ಪರ್ಯಂತ ಇರುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)