Hindu Gods: ಹಿಂದೂ ಧರ್ಮದಲ್ಲಿ ನಿಜವಾಗಿಯೂ 33 ಕೋಟಿ ದೇವತೆಗಳು ಇದ್ದಾರೆಯೇ?

33 Crore Gods and Goddesses: ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳಿವೆ ಅನ್ನೋ ವಿಷಯದಲ್ಲಿ ಬಹಳ ಹಿಂದಿನಿಂದಲೂ ಭಿನ್ನಾಭಿಪ್ರಾಯವಿದೆ. ಅನೇಕ ವಿದ್ವಾಂಸರು ಮತ್ತು ತಜ್ಞರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಜನರು ಇನ್ನೂ ಈ ವಿಷಯದ ಬಗ್ಗೆ ಗೊಂದಲದಲ್ಲಿದ್ದಾರೆ.

Written by - Puttaraj K Alur | Last Updated : Aug 26, 2023, 08:21 AM IST
  • ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳ ವಿಷಯದಲ್ಲಿ ಬಹಳ ಹಿಂದಿನಿಂದಲೂ ಭಿನ್ನಾಭಿಪ್ರಾಯವಿದೆ
  • 33 ಕೋಟಿ ದೇವತೆಗಳೆಂದರೆ 33 ವಿಧದ ದೇವತೆಗಳು ಎಂದು ಅರ್ಥೈಸಿಕೊಳ್ಳಬೇಕು
  • ಪುರಾಣಗಳಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್ತಿನಲ್ಲಿ 33 ದೇವತೆಗಳ ಬಗ್ಗೆ ಉಲ್ಲೇಖವಿದೆ
Hindu Gods: ಹಿಂದೂ ಧರ್ಮದಲ್ಲಿ ನಿಜವಾಗಿಯೂ 33 ಕೋಟಿ ದೇವತೆಗಳು ಇದ್ದಾರೆಯೇ?   title=
33 ಕೋಟಿ ದೇವತೆಗಳು

ನವದೆಹಲಿ: ಹಿಂದೂ ಧರ್ಮವನ್ನು ಪುರಾಣ ಮತ್ತು ರಹಸ್ಯಗಳ ಉಗ್ರಾಣವೆಂದು ಕರೆದರೆ ಅದು ಅತಿಶಯೋಕ್ತಿಯಾಗದು. ಏಕೆಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಇನ್ನೂ ಬಗೆಹರಿಯದೆ ಉಳಿದಿವೆ ಮತ್ತು ಸಂಶೋಧನೆಯೂ ನಡೆಯುತ್ತಿದೆ. ಇದಲ್ಲದೆ ಜನರಲ್ಲಿ ಹಲವಾರು ರೀತಿಯ ತಪ್ಪು ಕಲ್ಪನೆಗಳಿವೆ, ಅಂತಹ ಒಂದು ವಿಷಯವೆಂದರೆ ಹಿಂದೂ ಧರ್ಮದ ದೇವ-ದೇವತೆಗಳ ಸಂಖ್ಯೆ. ಹಿಂದೂ ಧರ್ಮದಲ್ಲಿ 33 ಕೋಟಿ ದೇವ-ದೇವತೆಗಳಿದ್ದಾರೆ ಎಂದು ಹೇಳಲಾಗುತ್ತದೆ. ಕೋಟಿ ಎಂಬ ಪದದ ಅರ್ಥ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.   

ಹಿಂದುಗಳಲ್ಲಿ ಮುಕ್ಕೋಟಿ ದೇವರುಗಳು ಅಥವಾ 33 ಕೋಟಿ ದೇವತೆಗಳಿದ್ದಾರೆಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಎಲ್ಲಾ ದೇವತೆಗಳೂ ಕಾಮಧೇನುವಿನಲ್ಲಿ ನೆಲೆಸಿರುತ್ತವೆಂದು ಎಂತಲೂ ಹೇಳಲಾಗಿದೆ. ಹೀಗಾಗಿ ಕಾಮಧೇನುವನ್ನು ಅತ್ಯಂತ ಭಕ್ತಿ-ಭಾವದಿಂದ ಪೂಜಿಸಲಾಗುತ್ತದೆ. ಯಾವುದೇ ರೀತಿಯ ಕಷ್ಟ ಬಂದರೂ ಈ ಮುಕ್ಕೋಟಿ ದೇವತೆಗಳು ನಮ್ಮನ್ನು ಕಾಪಾಡುತ್ತವೆ ಅನ್ನೋ ನಂಬಿಕೆ ಜನರಲ್ಲಿದೆ.

ಇದನ್ನೂ ಓದಿ: ಕೆಟ್ಟ ಕಾಲವೂ ಕೂಡ ಒಳ್ಳೆಯ ದಿನಗಳಲ್ಲಿ ಬದಲಾಗುತ್ತದೆ ಆಚಾರ್ಯ ಚಾಣಕ್ಯರ ಈ ನೀತಿಗಳು!

ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳಿವೆ ಅನ್ನೋ ವಿಷಯದಲ್ಲಿ ಬಹಳ ಹಿಂದಿನಿಂದಲೂ ಭಿನ್ನಾಭಿಪ್ರಾಯವಿದೆ. ಅನೇಕ ವಿದ್ವಾಂಸರು ಮತ್ತು ತಜ್ಞರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಜನರು ಇನ್ನೂ ಈ ವಿಷಯದ ಬಗ್ಗೆ ಗೊಂದಲದಲ್ಲಿದ್ದಾರೆ. ವಾಸ್ತವವಾಗಿ ಈ ಗೊಂದಲದ ಹಿಂದಿನ ಕಾರಣವೆಂದರೆ ಜನರು ಕೋಟಿ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು. ಕೋಟಿ ಎಂಬ ಪದಕ್ಕೆ 2 ಅರ್ಥಗಳಿದ್ದು, ಮೊದಲನೆಯದು 'ದಯೆ' ಮತ್ತು 2ನೇಯದು 'ಕೋಟಿ'. ಬಹುಪಾಲು ಜನರಿಗೆ ಕೋಟಿ ಎಂದರೆ ಕೋಟಿ ಎಂಬ ಒಂದೇ ಅರ್ಥ ಗೊತ್ತು. ಈ ಅರ್ಥದಿಂದ ಜನರು 33 ಕೋಟಿ ದೇವತೆಗಳೇ ಇದ್ದಾರೆಂದು ತಿಳಿದುಕೊಂಡಿದ್ದಾರೆ. ಆದರೆ ಇಲ್ಲಿ ಕೋಟಿ ಎಂದರೆ ಸಂಖ್ಯೆಯಲ್ಲಿ ಕೋಟಿಯಲ್ಲ. ಇದಕ್ಕೆ ಸಂಸ್ಕೃತದಲ್ಲಿ ವರ್ಗ ಮತ್ತು ವಿಧವೆಂಬ ಅರ್ಥಗಳಿವೆ. 33 ಕೋಟಿ ದೇವತೆಗಳು ಎಂದರೆ 33 ವಿಧದ ದೇವತೆಗಳು ಎಂದರ್ಥ!  

33 ಕೋಟಿ ದೇವರು ಯಾರು..?

33 ಕೋಟಿ ದೇವತೆಗಳೆಂದರೆ 33 ವಿಧದ ದೇವತೆಗಳು. ಪುರಾಣಗಳಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್ತಿನಲ್ಲಿ 33 ದೇವತೆಗಳ ಬಗ್ಗೆ ಉಲ್ಲೇಖವಿದೆ. ಪೃಥ್ವಿ ಸ್ಥಾನದ 8 ವಸುಗಳು, ಮಧ್ಯಸ್ಥಾನದ 11 ರುದ್ರರು, ಸ್ವರ್ಗಸ್ಥಾನದ 12 ಆದಿತ್ಯರು ಜೊತೆಗೆ ಪ್ರಜಾಪತಿ ಬ್ರಹ್ಮ ಮತ್ತು ಶ್ರೀ ಹರಿ ವಿಷ್ಣು ಈ 33 ದೇವತೆಗಳು. 12 ಆದಿತ್ಯರು, 11 ರುದ್ರರು, 8 ವಸುಗಳು, ಪ್ರಜಾಪತಿ ಬ್ರಹ್ಮ, ಶ್ರೀಹರಿ ವಿಷ್ಣು ಇವರುಗಳನ್ನು ಒಟ್ಟಾಗಿ 33 ದೇವಕುಟುಂಬಗಳೆಂದು  ಹೇಳಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಲವ್ ಲೈಫ್ ಕುರಿತು ತಿಳಿದುಕೊಳ್ಳಬೇಕೆ? ಅಂಗೈಯಲ್ಲಿ ಈ ರೇಖೆ ಇದೆಯಾ ನೋಡಿ!

8 ವಸುಗಳು: ದ್ರೋಣ, ಪ್ರಾಣ, ಧ್ರುವ, ಅಕ, ಅಗ್ನಿ, ದೋಷ, ವಸು ಮತ್ತು ವಿಭಾವಸು ಪ್ರಜಾಪತಿ ಬ್ರಹ್ಮ ಮತ್ತು ವಿಷ್ಣು,

11 ರುದ್ರರು: ಮನ್ಯು, ಮನು, ಮಹಿನಸ, ಮಹಾನ್, ಶಿವ, ಋತಧ್ವಜ, ಉಗ್ರರೇತಾ, ಭವ, ಕಾಲ, ವಾಮದೇವ ಮತ್ತು ಧೃತವೃತ

12 ಆದಿತ್ಯರು: ತ್ವಷ್ಟ, ಪೂಷ, ವಿವಸ್ವಾನ್, ಮಿತ್ರ, ಧಾತಾ, ವಿಷ್ಣು, ಭಗ, ವರುಣ, ಸವಿತೃ, ಶಕ್ರ, ಅಂಶ ಮತ್ತು ಅರ್ಯಮ ಇವರುಗಳನ್ನು ದೇವಕುಟುಂಬದವರು ಎಂದು ಕರೆಯಲಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News