ಬೆಂಗಳೂರು : ಯಾವುದೇ ವ್ಯಕ್ತಿಯ ಭವಿಷ್ಯವನ್ನು ಜಾತಕದ ಆಧಾರದ ಮೇಲೆ ತಿಳಿಯಬಹುದು. ವ್ಯಕ್ತಿ ಹುಟ್ಟಿದ ದಿನ ಸಮಯವನ್ನು ಆಧರಿಸಿ ನಕ್ಷತ್ರ-ರಾಶಿ ನಿರ್ಧಾರವಾಗುತ್ತದೆ. ಹೀಗೆ ರಾಶಿಗೆ ಅನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ಅಲ್ಲದೆ ಪ್ರತಿ ರಾಶಿಗೂ ಅಧಿಪತಿ ಗ್ರಹ ಒಂದಿರುತ್ತದೆ. ಗ್ರಹಗಳ ಪೈಕಿ ಗುರು ಮತ್ತು ಶುಕ್ರ ಎರಡೂ ಗ್ರಹಗಳನ್ನು ಮದುವೆಯ ಅಂಶಗಳೆಂದು ಪರಿಗಣಿಸಲಾಗುತ್ತದೆ. ಹುಡುಗರ ಮದುವೆಗೆ ಗುರು ಮತ್ತು ಹುಡುಗಿಯರ ಮದುವೆಗೆ ಶುಕ್ರವು ಕಾರಣ ಎಂದು ಹೇಳಲಾಗುತ್ತದೆ.
ಪತಿಯ ಪಾಲಿಗೆ ಇವರು ಅದೃಷ್ಟದಾತೆ :
ಜಾತಕದಲ್ಲಿ ಯಾವ ಗ್ರಹವು ಬಲಶಾಲಿಯಾಗಿದೆಯೋ ಅವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮದುವೆಯ ನಂತರ ಪತಿಯ ಅದೃಷ್ಟವನ್ನು ಹೆಚ್ಚಿಸುವ ಮೂರು ರಾಶಿಗಳಿವೆ. ಈ ಮೂರು ರಾಶಿಯ ಹುಡುಗಿಯರನ್ನು ಮದುವೆಯಾಗುವ ಹುಡುಗರ ಅದೃಷ್ಟ ಮದುವೆಯಾಗುತ್ತಿದ್ದಂತೆಯೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಪತಿಯ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಈ ಹುಡುಗಿಯರು ಪತಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಸುಖಮಯ ದಾಂಪತ್ಯ ಜೀವನಕ್ಕಾಗಿ ಈ ಮೂರು ರಾಶಿಯ ಹುಡುಗಿಯರನ್ನು ವಿವಾಹವಾದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಮನೆಯ ಈ ದಿಕ್ಕಿನಲ್ಲಿ ಪಾರಿಜಾತ ಗಿಡವಿದ್ದರೆ ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ!
ಈ ರಾಶಿಯ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟ :
ವೃಷಭ ರಾಶಿ :
ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯ ಹುಡುಗಿಯರು ಮದುವೆಯ ನಂತರ ಗಂಡನ ಅದೃಷ್ಟವನ್ನು ಬೆಳಗುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ ಮತ್ತು ಆರಾಧ್ಯ ದೇವತೆ ದುರ್ಗೆ. ಈ ರಾಶಿಯ ಹುಡುಗಿಯರು ನೋಡಲು ಸುಂದರವಾಗಿರುತ್ತಾರೆ. ದುರ್ಗಾ ಮಾತೆಯ ಅನುಗ್ರಹದಿಂದ ಈ ರಾಶಿಯವರು ಅತಿ ಬುದ್ಧಿವಂತರಾಗಿರುತ್ತಾರೆ. ಇದಲ್ಲದೇ ಈ ಹುಡುಗಿಯರನ್ನು ಕಲಾಭಿಮಾನಿಗಳು ಎನ್ನಲಾಗುತ್ತದೆ. ಈ ರಾಶಿಯವರು ತನ್ನ ಗಂಡನ ಪಾಲಿಗೆ ಅದೃಷ್ಟದಾತೆ ಎಂದು ಹೇಳಲಾಗುತ್ತದೆ. ಇವರನ್ನು ವಿವಾಹವಾದ ಬಳಿಕ ಪತಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ ಎನ್ನಲಾಗುತ್ತದೆ.
ಕಟಕ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕಟಕ ರಾಶಿಯ ಅಧಿಪತಿ ಗ್ರಹ ಚಂದ್ರ. ಆರಾಧ್ಯ ದೇವ ಶಿವ. ಈ ರಾಶಿಯ ಹುಡುಗಿಯರು ಸ್ವಭಾವತಃ ಶಾಂತವಾಗಿರುತ್ತಾರೆ. ಜೀವನದಲ್ಲಿ ಎಂಥ ಪರಿಸ್ಥಿತಿಯೇ ಬಂದರೂ ಕಟಕ ರಾಶಿಯ ಹುಡುಗಿಯರು ತಮ್ಮ ಗಂಡನನ್ನು ಬಿಟ್ಟು ಬಿಡುವುದಿಲ್ಲ. ಹೆಜ್ಜೆ ಹೆಜ್ಜೆಗೂ ಸಾಥ್ ನೀಡುತ್ತಾರೆ. ಈ ಕಾರಣದಿಂದ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಕರ್ಕಾಟಕ ರಾಶಿಯ ಹುಡುಗಿಯರು ಪತಿಯ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ.
ಇದನ್ನೂ ಓದಿ : Money Tips: ದಾರಿಯಲ್ಲಿ ಹಣ ಸಿಕ್ರೆ ಏನು ಮಾಡಬೇಕು ಗೊತ್ತಾ?
ಮೀನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯ ಅಧಿಪತಿ ಗುರು. ಮತ್ತು ಆರಾಧ್ಯ ದೇವ ಶ್ರೀ ಹರಿ ವಿಷ್ಣು. ಈ ರಾಶಿಯ ಹುಡುಗಿಯರು ಧಾರ್ಮಿಕ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಮಾತ್ರವಲ್ಲ ಪತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅತ್ತೆಯ ಜೊತೆಗೆ ಕೂಡಾ ಇವರು ಮಧುರ ಸಂಬಂಧ ಹೊಂದಿರುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಪಾಲಿಗೆ ಅದೃಷ್ಟದಾತೆಯರು.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.