Gupt Navratri 2023 Effect: ಈ 5 ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸು ನೀಡಲಿದೆ ಗುಪ್ತ ನವರಾತ್ರಿ

Gupt Navratri 2023 Effect: ಹಿಂದೂ ಧರ್ಮದಲ್ಲಿ ಪ್ರತಿ ಮಾಸಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಇನ್ನೆರಡು ದಿನಗಳಲ್ಲಿ ಅಂದರೆ ಜನವರಿ 22ರಿಂದ ಗುಪ್ತ ನವರಾತ್ರಿ ಆರಂಭವಾಗಲಿದೆ. ಈ ಸಮಯದಲ್ಲಿ ದುರ್ಗಾ ಮಾತೆಯು ಐದು ರಾಶಿಯವರ ಜೀವನದಲ್ಲಿ ಹಣ, ಯಶಸ್ಸು, ಕೀರ್ತಿಯನ್ನು ನೀಡಲಿದ್ದು ಅವರ ಜೀವನವನ್ನು ಬೆಳಗಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jan 20, 2023, 09:20 AM IST
  • ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಜನವರಿ 21ರ ರಾತ್ರಿ ಆರಂಭವಾಗಲಿರುವ ಪ್ರತಿಪಾದ ತಿಥಿಯು ಮರುದಿನ ಅಂದರೆ ಜನವರಿ 22ರ ರಾತ್ರಿ 10.30ರ ಸುಮಾರಿಗೆ ಕೊನೆಗೊಳ್ಳಲಿದೆ.

    ವೈದಿಕ ಜ್ಯೋತಿಷ್ಯದ ಪ್ರಕಾರ, ಈ ವರ್ಷ ಜನವರಿ 22ರಿಂದ ಜನವರಿ 30ರವರೆಗಿನ ಗುಪ್ತ ನವರಾತ್ರಿಯು ಐದು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ
  • ಈ ಸಮಯದಲ್ಲಿ ಈ ಐದು ರಾಶಿಯವರಿಗೆ ಅಪಾರ ಹಣ, ಕೀರ್ತಿ, ಯಶಸ್ಸು ಎಲ್ಲವೂ ಪ್ರಾಪ್ತಿಯಾಗಲಿದೆ.
Gupt Navratri 2023 Effect: ಈ 5 ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸು ನೀಡಲಿದೆ ಗುಪ್ತ ನವರಾತ್ರಿ  title=
Gupt Navratri 2023 Effect

Gupt Navratri 2023 Effect: ವೈದಿಕ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಿಂದ ಗುಪ್ತ ನವರಾತ್ರಿ ಆರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಜನವರಿ 21ರ ರಾತ್ರಿ ಆರಂಭವಾಗಲಿರುವ ಪ್ರತಿಪಾದ ತಿಥಿಯು ಮರುದಿನ ಅಂದರೆ ಜನವರಿ 22ರ ರಾತ್ರಿ 10.30ರ ಸುಮಾರಿಗೆ ಕೊನೆಗೊಳ್ಳಲಿದೆ. ನವರಾತ್ರಿ ಹೆಸರೇ ಸೂಚಿಸುವಂತೆ ಒಂಬತ್ತು ದಿನಗಳ ಕಾಲ ತಾಯಿಯ 9 ಅವತಾರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗುಪ್ತ ನವರಾತ್ರಿಯ ವಿಶೇಷವೆಂದರೆ ಈ ನವರಾತ್ರಿಯನ್ನು ಜನ ಸಾಮಾನ್ಯರಿಗಿಂತ ಹೆಚ್ಚಾಗಿ ಸಾಧು-ಸಂತರು ಆಚರಿಸುತ್ತಾರೆ. 

ವೈದಿಕ ಜ್ಯೋತಿಷ್ಯದ ಪ್ರಕಾರ, ಈ ವರ್ಷ ಜನವರಿ 22ರಿಂದ ಜನವರಿ 30ರವರೆಗಿನ ಗುಪ್ತ ನವರಾತ್ರಿಯು ಐದು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಈ ಐದು ರಾಶಿಯವರಿಗೆ ಅಪಾರ ಹಣ, ಕೀರ್ತಿ, ಯಶಸ್ಸು ಎಲ್ಲವೂ ಪ್ರಾಪ್ತಿಯಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.

ಈ ಬಾರಿಯ ಗುಪ್ತ ನವರಾತ್ರಿಯಲ್ಲಿ ಉಜ್ವಲಿಸಲಿದೆ ಈ ರಾಶಿಯವರ ಅದೃಷ್ಟ :
ಮೇಷ ರಾಶಿ:

ಇನ್ನೆರಡು ದಿನಗಳ ಬಳಿಕ ಆರಂಭವಾಗುವ ಗುಪ್ತ ನವರಾತ್ರಿಯ ಸಮಯದಲ್ಲಿ ಈ ರಾಶಿಯವರಿಗೆ ನಿಮ್ಮ ಇಚ್ಚೆಯ ಉದ್ಯೋಗ ಸಿಗಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಲಭಿಸಲಿದ್ದು, ಪ್ರಮೋಷನ್ ಭಾಗ್ಯವೂ ಇದೆ.

ಇದನ್ನೂ ಓದಿ- Ketu Astrology: ಕೇತುವಿನ ಪ್ರಭಾವದಿಂದ 2023ರಲ್ಲಿ ಈ ರಾಶಿಯವರ ಮೇಲೆ ಅಶುಭ ಪರಿಣಾಮ!

ಕನ್ಯಾ ರಾಶಿ:
ಗುಪ್ತ ನವರಾತ್ರಿಯಲ್ಲಿ ಕನ್ಯಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗಸ್ಥರು ಉನ್ನತ ಹುದ್ದೆಗೇರುವಿರಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮ್ಮ ಬಹುದಿನದ ಆಸೆ ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ.

ವೃಶ್ಚಿಕ ರಾಶಿ: 
ಗುಪ್ತ ನವರಾತ್ರಿಯಲ್ಲಿ ತಾಯಿ ದುರ್ಗಾಪರಮೇಶ್ವರಿಯ ಆಶೀರ್ವಾದದಿಂದ ನಿಮ್ಮ ಸ್ಥಗಿತಗೊಂಡಿರುವ ಕೆಲಸಗಳು ಶೀಘ್ರವಾಗಿ ಮುಗಿಯಲಿವೆ. ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ಹಣದ ಮಳೆಯೇ ಸುರಿಯಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ನೀವು ಕುಟುಂಬದಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸುವಿರಿ.

ಮಕರ ರಾಶಿ: 
ತಾಯಿ ದುರ್ಗೆಯ ಆಶೀರ್ವಾದದಿಂದ ನಿಮ್ಮ ಕಾನೂನು ವ್ಯವಹಾರಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳಲಿವೆ. ವಿತ್ತೀಯ ಲಾಭದಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದ್ದು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯೂ ಇದೆ.

ಇದನ್ನೂ ಓದಿ- Saturn Transit 2023: ಶನಿ ಸಂಕ್ರಮಣದಿಂದ ಶಶ ಮಹಾಪುರುಷ ರಾಜಯೋಗ, 3 ರಾಶಿಯವರಿಗೆ ಜಾಕ್‌ಪಾಟ್

ಮೀನ ರಾಶಿ:
ನಿಮ್ಮ ಬುದ್ದಿ ಸಾಮರ್ಥ್ಯದಿಂದ ಬೆಟ್ಟದಂತಹ ಸಮಸ್ಯೆಯನ್ನೂ ಮಂಜಿನಂತೆ ಕರಗಲಿದೆ. ಆಪ್ತರ ಸಹಕಾರದಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗಲಿದೆ. ಒಟ್ಟಾರೆಯಾಗಿ ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News