ಕುಬೇರ ದೇವನ ಅತಿಯಾದ ಕೃಪೆ ಇವರ ಮೇಲಿರಲಿದೆ.! ಕಷ್ಟ ಇವರ ಬಳಿ ಸುಳಿಯುವುದೇ ಇಲ್ಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಬೇರ ದೇವನ ಅನುಗ್ರಹದಿಂದ, ಈ ರಾಶಿಯವರು  ಹಣದ ವಿಷಯದಲ್ಲಿ ಅತ್ಯಂತ ಅದೃಷ್ಟವಂತರಾಗಿರುತ್ತಾರೆ. ಜೀವನದಲ್ಲಿ ಸಾಕಷ್ಟ ಇವರು ಸಾಕಷ್ಟು ಹಣ ಗಳಿಸುತ್ತಾರೆ.

Written by - Ranjitha R K | Last Updated : Jan 5, 2023, 05:00 PM IST
  • ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳಿವೆ
  • ರಾಶಿಯ ಆಧಾರದ ಮೇಲೆ ಜನರ ಸ್ವಭಾವವನ್ನು ತಿಳಿಯಬಹುದು
  • ರಾಶಿಯವರ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವು ವಿಭಿನ್ನವಾಗಿರುತ್ತದೆ.
ಕುಬೇರ ದೇವನ ಅತಿಯಾದ ಕೃಪೆ ಇವರ ಮೇಲಿರಲಿದೆ.! ಕಷ್ಟ ಇವರ ಬಳಿ ಸುಳಿಯುವುದೇ ಇಲ್ಲ   title=

ಬೆಂಗಳೂರು :  ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳಿದ್ದು, ಎಲ್ಲಾ ರಾಶಿಯವರ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವು ವಿಭಿನ್ನವಾಗಿರುತ್ತದೆ. ರಾಶಿಯ  ಆಧಾರದ ಮೇಲೆ ಜನರ ಸ್ವಭಾವವನ್ನು ತಿಳಿಯಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಗೂ ಒಂದು ಅಧಿಪತಿ ಗ್ರಹ ಇರುತ್ತದೆ.  ರಾಶಿಗನುಗುಣವಾಗಿ ಬೇರೆ ಬೇರೆ ದೇವರುಗಳ ಆಶೀರ್ವಾದವಿರುತ್ತದೆ.   ಅದರಂತೆಯೇ ಕೆಲವು ರಾಶಿಯವರ ಮೇಲೆ ಕುಬೇರ  ದೇವ ವಿಶೇಷ ಕರುಣಾಮಯಿಯಾಗಿರುತ್ತಾನೆ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಬೇರ ದೇವನ ಅನುಗ್ರಹದಿಂದ, ಈ ರಾಶಿಯವರು  ಹಣದ ವಿಷಯದಲ್ಲಿ ಅತ್ಯಂತ ಅದೃಷ್ಟವಂತರಾಗಿರುತ್ತಾರೆ. ಜೀವನದಲ್ಲಿ ಸಾಕಷ್ಟ ಇವರು ಸಾಕಷ್ಟು ಹಣ ಗಳಿಸುತ್ತಾರೆ.

ಇದನ್ನೂ ಓದಿ Astrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ?

ಕಟಕ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರು ತುಂಬಾ ಬುದ್ಧಿವಂತರು, ಶ್ರಮಶೀಲರು ಮತ್ತು ಪ್ರಾಮಾಣಿಕರು. ಈ ರಾಶಿಯವರು ಯಾವುದೇ ಕೆಲಸವನ್ನು ಶುರು ಮಾಡಿದರೆ ಸಂಪೂರ್ಣ ಸಮರ್ಪಣಾ ಭಾವದಿಂದ ಮಾಡುತ್ತಾರೆ.  ಅಷ್ಟು ಮಾತ್ರವಲ್ಲ ಮಾಡುವ ಎಲ್ಲಾ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯುತ್ತದೆ. ಕುಬೇರ ದೇವನ ಕೃಪೆಯಿಂದ ಇವರ ಜೀವನದಲ್ಲಿ ಹಣದ ಕೊರತೆಯಾಗುವುದೇ ಇಲ್ಲ.

ತುಲಾ  ರಾಶಿ :
ಈ ರಾಶಿಯವರ ಮೇಲೆ ಕೂಡಾ ಕುಬೇರ ದೇವನ ವಿಶೇಷ ಆಶೀರ್ವಾದ ಇರುತ್ತದೆ.  ಇವರ ಜೀವನದಲ್ಲಿ ಹಣದ ಕೊರತೆ ಉಂಟಾಗುವುದೇ ಇಲ್ಲ. ಅವರ ಬುದ್ಧಿವಂತಿಕೆಯ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸುತ್ತಾರೆ. ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತಾರೆ. ಈ ಜನರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. 

ಇದನ್ನೂ ಓದಿ : Vastu Tips : ನಿಮ್ಮ ಮನೆಯ ಕನ್ನಡಿಯಲ್ಲಿ ಅಡಗಿದೆ ನೀವು ಶ್ರೀಮಂತರಾಗುವ ರಹಸ್ಯ, ಅದೃಷ್ಟಕ್ಕೆ ಈ ಕೆಲಸ

ವೃಶ್ಚಿಕ ರಾಶಿ :
ಈ ರಾಶಿಯಾ ಜನರು ಜೀವನದಲ್ಲಿ ಬಹಳಷ್ಟು ಹಣವನ್ನು ಗಳಿಸುವ ಇಚ್ಛೆ ಹೊಂದಿರುತ್ತಾರೆ. ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಪಡೆಯುತ್ತಾರೆ. ಅವರಿಗೆ ಜೀವನದಲ್ಲಿ ಮುನ್ನಡೆಯಲು ಯಾರ ಬೆಂಬಲವೂ ಬೇಕಾಗಿರುವುದಿಲ್ಲ. ಹಣದ ವಿಷಯದಲ್ಲಿ ಜೀವನದುದ್ದಕ್ಕೂ ಅದೃಷ್ಟವಂತರು. 

ಮಕರ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಬೇರ ದೇವ ಈ ರಾಶಿಯವರ ಮೇಲೆ ವಿಶೇಷ ಆಶೀರ್ವಾದ ಕರುಣಿಸುತ್ತಾನೆ. ಸಂಪತ್ತಿನ ದೇವ ಕುಬೇರ ಜೀವನದುದ್ದಕ್ಕೂ  ಇವರ ಮೇಲೆ ದಯೆ ತೋರುತ್ತಾನೆ. ಕುಬೇರನ ಕೃಪೆಯಿಂದ ಇವರ ಜೀವನದಲ್ಲಿ ಹಣದ ಕೊರತೆಯಾಗುವುದೇ ಇಲ್ಲ. ಈ  ರಾಶಿಯವರು ತಮ್ಮ ಜೀವನದಲ್ಲಿ ಏನೇ ಸವಾಲು ಬಂದರೂ ಎದುರಿಸುತ್ತಾರೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News