Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಬಹಳ ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದ ಕಾರ್ಯ ನೆರವೇರಲಿದೆ. ವೃತ್ತಿ-ವ್ಯವಹಾರದಲ್ಲಿ ಜಾಕ್‌ಪಾಟ್ ಎಂತಲೇ ಹೇಳಬಹುದು. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಆಲೋಚನೆಗಳಿಗಷ್ಟೇ ಅವಕಾಶ ನೀಡುವುದರಿಂದ ಶುಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಜೀವನದ ದೃಷ್ಟಿಕೋನವನ್ನು ಸ್ಪಷ್ಟ ಗುರಿಯೊಂದಿಗೆ ಹೊಂದಿಸಲು ಇದು ಶುಭ ಸಮಯ. ಮುಂದಿನ ಯೋಜನೆಗಳಿಗೆ ಈಗಲೇ ಸಿದ್ಧರಾಗುವುದರಿಂದ ಯಶಸ್ಸು. ನಿಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಕಾರ್ಯೋನುಖರಾಗಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ನಿಮ್ಮ ಜೀವನದಲ್ಲಿ ಕೆಲವು ಜನರು ಪ್ರೀತಿ, ಸಂತೋಷದ ಮೂಲಕ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಆದ್ಯಾತ್ಮದೆಡೆಗೆ ಒಲವು ಹೆಚ್ಚಾಗಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ನಿಮ್ಮ ಕೋಪ, ದ್ವೇಷ ಭಾವನೆಗಳನ್ನು ತೊರೆದು ಮುನ್ನಡೆಯುವ ಸಮಯ. ಹಳೆಯ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಿ. ಯಾವುದೇ ಹೊಸ ವಿಷಯಗಳನ್ನು ಕಲಿಯುವಾಗ ಸೋಮಾರಿತನ ನಿಮ್ಮನ್ನು ಆವರಿಸಲು ಬಿಡಬೇಡಿ.
ಇದನ್ನೂ ಓದಿ- Shukra Dese: ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರದೆಸೆ, ಈ ರಾಶಿಯವರಿಗೆ ಹಣ, ಅಧಿಕಾರದ ಯೋಗ
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿಪರರು ನಿಮ್ಮ ತಂಡದೊಂದಿಗೆ ಮುಂದುವರೆಯುವುದರಿಂದ ಯಶಸ್ಸು ಖಾತ್ರಿಯಾಗುತ್ತದೆ. ಬೇರೆಯವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ. ಮುಕ್ತ ಮನಸ್ಸಿನಿಂದ ಸಮಸ್ಯೆಗಳತ್ತ ಗಮನಹರಿಸುವುದರಿಂದ ಶುಭವಾಗಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದ್ದು ನಿಮ್ಮ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಶಾಂತಿಯನ್ನು ಕಾಪಾಡಿಕೊಳ್ಳಿ. ಮುಖ್ಯ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಜೀವನದಲ್ಲಿ ಏಳು-ಬೀಳುಗಳು ಸಹಜ. ಆದರೆ, ಯಾವುದಕ್ಕೂ ಕುಗ್ಗಬಾರದು. ಧೈರ್ಯ, ಆತ್ಮವಿಶ್ವಾಸದಿಂದ ಮುಂದುವರೆಯುವುದರಿಂದ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿದೆ. ವೃತ್ತಿಯಲ್ಲಿ ಯಶಸ್ಸಿಗಾಗಿ ಕಠಿಣ ಪರಿಶ್ರಮ ಅಗತ್ಯ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಒಳ್ಳೆಯ ಕೆಲಸದಿಂದ ಒಳ್ಳೆಯದೇ ಆಗಲಿದೆ ಎಂಬುದನ್ನೂ ನೆನಪಿನಲ್ಲಿಡಿ. ನಿಮ್ಮ ಕಠಿಣ ಪರಿಶ್ರಮದಿಂದಲೇ ನೀವು ಇಷ್ಟು ಎತ್ತರಕ್ಕೆ ಬೆಳೆದಿದ್ದೀರಿ. ಫಲಾಫಲವನ್ನು ದೇವರಿಗೆ ಬಿಟ್ಟು ನಿಮ್ಮ ಪ್ರಯತ್ನವನ್ನಷ್ಟೇ ಮುಂದುವರೆಸಿ.
ಇದನ್ನೂ ಓದಿ- Surya Grahan 2024: ವರ್ಷದ ಎರಡನೇ ಸೂರ್ಯಗ್ರಹಣ..ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಭಾರತ..!
ಧನು ರಾಶಿಯವರ ಭವಿಷ್ಯ (Sagittarius Horoscope):
ಸಂಬಂಧಗಳನ್ನು ಬಿಗಿಗೊಳಿಸಲು ಭಾವನಾತ್ಮಕತೆ ಜೊತೆಗೆ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳಿ. ನಿಮ್ಮ ಆಸೆ ಮತ್ತು ಆತಂಕಗಳ ಬಗ್ಗೆ ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಮಾತನಾಡಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಆಯಾಸವು ನಿಮ್ಮನ್ನು ಬಾಧಿಸಬಹುದು. ಈ ವೇಳೆ ನಿಮ್ಮ ಆರೈಕೆಗಾಗಿ ಸಮಯ ಮೀಸಲಿಡಿ. ಕುಟುಂಬದೊಂದಿಗೆ ಹೊರಹೋಗಲು ಪ್ರಯತ್ನಿಸುತ್ತಿದ್ದರೆ ಈಗಿನಿಂದಲೇ ಯೋಜನೆಯನ್ನು ರೂಪಿಸಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನಿಮ್ಮಲ್ಲಿರುವ ವಿಶ್ವಾಸದೊಂದಿಗೆ ಸರಿಯಾದ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿ. ಇದರಿಂದ ಎಂತಹುದೇ ಕಠಿಣ ಪರಿಸ್ಥಿತಿಯನ್ನು ನಿಮ್ಮತ್ತ ತಿರುಗಿಸುವ ಶಕ್ತಿ ನಿಮ್ಮಲ್ಲಿದೆ. ಸತ್ಯ ಎದುರಿಸಲು ಸಿಹಿಯಾಗಿಲ್ಲದಿದ್ದರೂ, ಅದನ್ನು ಹೆಚ್ಚು ದಿನ ಮರೆಮಾಚಲು ಸಾಧ್ಯವಿಲ್ಲ.
ಮೀನ ರಾಶಿಯವರ ಭವಿಷ್ಯ (Pisces Horoscope):
ಉದ್ಯೋಗದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡುತ್ತಿದ್ದರೆ ಹಿರಿಯರು, ಅನುಭವ ಹೊಂದಿರುವವರಿಂದ ಮಾರ್ಗದರ್ಶನ ಪಡೆಯಿರಿ. ಯಾವುದಾದರೂ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಬಹುದು. ಈ ವೇಳೆ ಯೋಚಿಸಿ ನಿರ್ಧರಿಸುವುದು ಒಳಿತು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.