Shani Dev: ಶನಿದೇವನ ಆರಾಧನೆಯಲ್ಲಿ ಈ ತಪ್ಪು ಮಾಡಿದ್ರೆ ನಷ್ಟ ಗ್ಯಾರಂಟಿ..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನನ್ನು ಪೂಜಿಸಿದ ನಂತರವೂ ವ್ಯಕ್ತಿಗೆ ಅನೇಕ ಬಾರಿ ಫಲ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೂಜೆಯ ವೇಳೆ ಕೆಲವು ತಪ್ಪುಗಳು ನಡೆಯುತ್ತವೆ.

Written by - Puttaraj K Alur | Last Updated : Jul 30, 2022, 07:54 AM IST
Shani Dev: ಶನಿದೇವನ ಆರಾಧನೆಯಲ್ಲಿ ಈ ತಪ್ಪು ಮಾಡಿದ್ರೆ ನಷ್ಟ ಗ್ಯಾರಂಟಿ..! title=
ಶನಿದೇವನ ಪೂಜಾ ನಿಯಮಗಳು

ನವದೆಹಲಿ: ಧರ್ಮಗ್ರಂಥಗಳಲ್ಲಿ ಶನಿ ದೇವನಿಗೆ ಕರ್ಮವನ್ನು ಕೊಡುವ ಮತ್ತು ನ್ಯಾಯದ ದೇವರ ರೂಪವನ್ನು ನೀಡಲಾಗಿದೆ. ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಪ್ರಕಾರ ಶನಿದೇವನು ಅವರಿಗೆ ಫಲ ನೀಡುತ್ತಾನೆ. ಶನಿದೇವನು ಒಬ್ಬ ವ್ಯಕ್ತಿಗೆ ದಯೆ ತೋರಿದರೆ ಆತನ ಜೀವನ ತುಂಬಾ ಸಂತೋಷದಾಯಕವಾಗಿರುತ್ತದೆ. ಅದೇ ರೀತಿ ಶನಿಯ ದುಷ್ಟ ದೃಷ್ಟಿ ಬಿದ್ದರೆ ಯಾವುದೇ ವ್ಯಕ್ತಿ ಬೀದಿಗೆ ಬರಲು ಹೆಚ್ಚು ಸಮಯ ಹಿಡಿಯುವುದಿಲ್ಲ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನನ್ನು ಪೂಜಿಸಿದ ನಂತರವೂ ವ್ಯಕ್ತಿಗೆ ಅನೇಕ ಬಾರಿ ಫಲ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೂಜೆಯ ವೇಳೆ ಕೆಲವು ತಪ್ಪುಗಳು ನಡೆಯುತ್ತವೆ. ಶನಿದೇವನ ಆರಾಧನೆಯ ಸಮಯದಲ್ಲಿ ಏನೆಲ್ಲಾ ಕಾಳಜಿ ವಹಿಸಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಅನ್ನೋದರ ಬಗ್ಗೆ ತಿಳಿಯಿರಿ.

ಕಣ್ಣಿಗೆ ಕಣ್ಣು ಬೆರೆಸಬೇಡಿ

ಜನರು ಪೂಜಿಸುವಾಗ ದೇವರ ಕಣ್ಣಿಗೆ ಕಣ್ಣಿಟ್ಟು ಹಾರೈಸುವುದು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈ ರೀತಿ ಅಪ್ಪಿತಪ್ಪಿಯೂ ಮಾಡಬಾರದು. ಶನಿಯ ಈ ದೃಷ್ಟಿಯಿಂದ ವ್ಯಕ್ತಿಯ ಜೀವನದಲ್ಲಿ ಬಹಳಷ್ಟು ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಶನಿದೇವನ ಕಣ್ಣಿಲ್ಲಿ ಕಣ್ಣಿಟ್ಟು ನೋಡದೆ ಪೂಜಿಸುವುದು ಸೂಕ್ತ.

ಇದನ್ನೂ ಓದಿ: Astro Tips: ದೇವ-ದೇವತೆಗಳ ಲಾಕೆಟ್ ಕೊರಳಲ್ಲಿ ಧರಿಸುವುದು ಎಷ್ಟು ಉಚಿತ? ನೀವೂ ಧರಿಸುತ್ತಿದ್ದರೆ, ಈ ಸಂಗತಿ ನಿಮಗೆ ತಿಳಿದಿರಲಿ

ಕಪ್ಪು ಎಳ್ಳು & ಖಿಚಡಿ

ಪೂಜಾ ಸಮಯದಲ್ಲಿ ಶನಿ ದೇವರಿಗೆ ಏನು ಬೇಕಾದರೂ ಅರ್ಪಿಸಬಹುದು. ಆದರೆ ಶನಿ ದೇವನಿಗೆ ಕಪ್ಪು ಎಳ್ಳು ಮತ್ತು ಖಿಚಡಿಯೊಂದಿಗೆ ವಸ್ತುಗಳನ್ನು ಅರ್ಪಿಸಬೇಕು.

ತಾಮ್ರದ ಪಾತ್ರೆಗಳನ್ನು ಬಳಸಬೇಡಿ

ತಾಮ್ರದ ಪಾತ್ರೆಗಳನ್ನು ದೇವರು ಮತ್ತು ದೇವತೆಗಳ ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಶನಿದೇವನ ಪೂಜೆ ಮಾಡುವಾಗ ತಾಮ್ರದ ಪಾತ್ರೆಗಳನ್ನು ಬಳಸಬಾರದು. ತಾಮ್ರವು ಸೂರ್ಯ ದೇವರಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಶನಿಯು ಸೂರ್ಯದೇವನ ಮಗ. ಇವರಿಬ್ಬರ ನಡುವೆ ಹಗೆತನವಿದೆ. ಆದ್ದರಿಂದ ಶನಿ ದೇವರಿಗೆ ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಉತ್ತಮ.

ಶನಿದೇವನ ಮುಂದೆ ಬೆಳಗಿದ ದೀಪ ಇಡಬೇಡಿ

ಪೂಜೆಯ ಸಮಯದಲ್ಲಿ ಎಲ್ಲಾ ದೇವತೆಗಳ ಮುಂದೆ ದೀಪವನ್ನು ಬೆಳಗಿಸಲಾಗುತ್ತದೆ. ಆದರೆ ಶನಿದೇವನ ಮುಂದೆ ದೀಪ ಹಚ್ಚುವುದು ನಿಷಿದ್ಧ. ಶನಿದೇವನ ವಿಗ್ರಹದ ಮುಂದೆ ದೀಪವನ್ನು ಹಚ್ಚುವ ಬದಲು ಅದನ್ನು ಅರಳಿ ಮರದ ಕೆಳಗೆ ಇರಿಸಬೇಕು. ಹೀಗೆ ಮಾಡುವುದರಿಂದ ಶನಿ ದೇವನು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ.

ಇದನ್ನೂ ಓದಿ: Shravan 2022: ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಇಂದೇ ಈ ಉಪಾಯ ಮಾಡಿ, ಇಂದೇ ನಿರ್ಮಾಣಗೊಂಡಿದೆ ಈ ಶುಭ ಕಾಕತಾಳೀಯ

ಶನಿ ದೇವನನ್ನು ಪೂಜಿಸುವಾಗ ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಇದರೊಂದಿಗೆ ಶನಿದೇವನ ಪೂಜೆಯ ಸಮಯದಲ್ಲಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ಮರೆಯಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News