ಶನಿ ಗೋಚಾರ: ಸುಮಾರು ಎರಡೂವರೆ ವರ್ಷಗಳಿಗೊಮ್ಮೆ ರಾಶಿ ಚಕ್ರವನ್ನು ಬದಲಾಯಿಸುವ ಶನಿಯು 2022ರಲ್ಲಿ ಎರಡು ಬಾರಿ ರಾಶಿಯನ್ನು ಬದಲಾಯಿಸಿದ್ದಾನೆ. ಶನಿಯು 30 ವರ್ಷಗಳ ನಂತರ ಏಪ್ರಿಲ್ 29 ರಂದು ತನ್ನದೇ ಆದ ರಾಶಿ ಚಕ್ರ ಕುಂಭ ರಾಶಿಯನ್ನು ಪ್ರವೇಶಿಸಿತ್ತು. ಬಳಿಕ ಇತ್ತೀಚೆಗಷ್ಟೇ ಜುಲೈ 12 ರಂದು, ಹಿಮ್ಮುಖವಾಗಿ ಚಲಿಸುವ ಮೂಲಕ ಮಕರ ರಾಶಿಯಲ್ಲಿ ಸಾಗಿದ್ದಾನೆ.
ಶನಿಯ ಈ ಹಿಮ್ಮುಖ ಚಲನೆಯ ಪರಿಣಾಮದಿಂದಾಗಿ ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಭಾವ ಆರಂಭವಾಗಿದ್ದರೆ, ಇನ್ನೂ ಕೆಲವು ರಾಶಿಯವರಿಗೆ ಶನಿ ಧೈಯಾ ಪ್ರಭಾವ ಬೀರಲಿದೆ. ಶನಿಯು ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರಲಿದ್ದು ಈ ಸಮಯದಲ್ಲಿ ಕೆಲವು ರಾಶಿಯವರ ತೊಂದರೆಗಳು ಹೆಚ್ಚಾಗಲಿವೆ.
ಇದನ್ನೂ ಓದಿ- ಈ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಶನಿ-ಶುಕ್ರನ ಷಡಷ್ಟಕ ಯೋಗ
ಶನಿಯು ಮಕರ ರಾಶಿಗೆ ಪ್ರವೇಶಿಸಿದ ನಂತರ, ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರಿಗೆ ಶನಿಯ ಸಾಡೇ ಸಾತಿ ಆರಂಭವಾಗಲಿದೆ. ಈ ವೇಳೆ ಧನು ರಾಶಿಯವರ ಮೇಲೆ ಸಾಡೇ ಸತಿಯ ಕೊನೆಯ ಘಟ್ಟ ನಡೆಯುತ್ತಿದ್ದು ಕಷ್ಟಗಳು ಕಡಿಮೆ ಇರಲಿವೆ. ಮತ್ತೊಂದೆಡೆ ಮಕರ ರಾಶಿಯವರಿಗೆ ಅತ್ಯಂತ ಯಾತನಾಮಯ ಎಂಬಂತೆ ಎರಡನೇ ಹಂತದ ಸಾಡೇಸತಿ ನಡೆಯುತ್ತಿದೆ. ಇದಲ್ಲದೇ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಧೈಯಾ ನಡೆಯುತ್ತಿದೆ. ಈ ಸಮಯದಲ್ಲಿ ಈ ಎಲ್ಲಾ ರಾಶಿಯವರು ತಾಳ್ಮೆಯಿಂದ ಇರುವುದರ ಜೊತೆಗೆ ಅನಗತ್ಯ ವಾದ-ವಿವಾದಗಳಲ್ಲಿ ಸಿಲುಕದೇ ಇರುವುದು ಸೂಕ್ತ.
ಇದನ್ನೂ ಓದಿ- ಬುಧ ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿದೆ ಡಬಲ್ ರಾಜಯೋಗ, ಈ ರಾಶಿಯವರಿಗೆ ಶುಭವೋ ಶುಭ
ದೇಹ, ಮನಸ್ಸು ಮತ್ತು ಸಂಪತ್ತಿನ ಮೇಲೆ ಹೆಚ್ಚು ಪ್ರಭಾವ ಬೀರಲಿರುವ ಶನಿ ಮಹಾದಶ:
ಶನಿದೇವನು ಕರ್ಮಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ. ಶನಿಯ ಮಹಾದಶ ಅಂದರೆ ಶನಿ ಸಾಡೇ ಸಾತಿ ಮತ್ತು ಧೈಯಾ ಪ್ರಭಾವ ಹೊಂದಿರುವ ರಾಶಿಗಳ ಮೇಲೆ ಶನಿಯು ವಕ್ರ ದೃಷ್ಟಿಯನ್ನು ಬೀರುತ್ತಾನೆ. ಇದರಿಂದ ಅಂತಹ ರಾಶಿಚಕ್ರದ ಜನರು ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದು ವ್ಯಕ್ತಿಯ ಕರ್ಮ ಸರಿಯಿಲ್ಲದಿದ್ದರೆ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಶನಿಯ ಸಾಡೇ ಸಾತಿ ಮತ್ತು ಧೈಯಾ ಸಮಯದಲ್ಲಿ ಯಾವುದೇ ತಪ್ಪುಗಳಾಗದಂತೆ ಎಚ್ಚರವಹಿಸಬೇಕು. ಕೈಲಾದಷ್ಟು ಅಗತ್ಯವಿರುವವರಿಗೆ ಸಹಾಯ ಮಾಡಬೇಕು ಎಂದು ಹೇಳಲಾಗುತ್ತದೆ. ಇದಲ್ಲದೆ, ಶನಿವಾರದಂದು ಶನಿ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.