ಈ ರಾಶಿಯವರ ಜಾತಕದಲ್ಲಿ ಶನಿನಿರ್ಮಿತ ರಾಜಯೋಗ! ಛಾಯಾಪುತ್ರನ ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುಯೋಗ!

Shasha Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ರೂಪುಗೊಂಡ ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

Written by - Bhavishya Shetty | Last Updated : Jun 3, 2023, 11:39 AM IST
    • ಗ್ರಹಗಳ ಶುಭ ಯೋಗವು ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸನ್ನು ನೀಡುತ್ತದೆ.
    • ಜಾತಕದಲ್ಲಿ ರೂಪುಗೊಂಡ ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.
    • ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ಈ ರಾಶಿಯವರ ಜಾತಕದಲ್ಲಿ ಶನಿನಿರ್ಮಿತ ರಾಜಯೋಗ! ಛಾಯಾಪುತ್ರನ ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುಯೋಗ! title=
Shasha Yoga

Shasha Rajyog: ಜಾತಕದಲ್ಲಿನ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಪರಿಸ್ಥಿತಿಗಳಿಂದ ರೂಪುಗೊಂಡ ಯೋಗವು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಅದು ಶುಭವಾಗಿರಬಹುದು ಅಥವಾ ಅಶುಭವೂ ಆಗಿರಬಹುದು. ಗ್ರಹಗಳ ಶುಭ ಯೋಗವು ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸನ್ನು ನೀಡುತ್ತದೆ. ಒಂದು ವೇಳೆ ವ್ಯಕ್ತಿಯು ಕಠಿಣ ಪರಿಶ್ರಮದ ನಂತರವೂ ಯಶಸ್ಸನ್ನು ಪಡೆಯದಿದ್ದರೆ, ಆಗ ರೂಪುಗೊಂಡ ಅಶುಭ ಯೋಗವು ಅದಕ್ಕೆ ದೊಡ್ಡ ಕಾರಣವಾಗಿರಬಹುದು. ಇಂದು ನಾವು ನಿಮಗೆ ಅಂತಹ ಒಂದು ರಾಜಯೋಗದ ಬಗ್ಗೆ ಹೇಳಲಿದ್ದೇವೆ. ಇದು ಶನಿನಿರ್ಮಿತ ರಾಜಯೋಗವಾಗಿದ್ದು, ಯಾರ ಜಾತಕದಲ್ಲಿ ಇದರ ರಚನೆ ಇದೆಯೋ ಆ ವ್ಯಕ್ತಿಯು ರಾಜನಂತೆ ಬದುಕುತ್ತಾನೆ.

ಇದನ್ನೂ ಓದಿ: ಬಂಗಾರದ ಬೆಲೆ ಭಾರೀ ಏರಿಕೆ! ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ದರ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ರೂಪುಗೊಂಡ ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಜಾತಕದಲ್ಲಿ ಶಶಯೋಗವು ವ್ಯಕ್ತಿಗೆ ಬಹಳ ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇಂಥವರು ಬಡವರ ಮನೆಯಲ್ಲಿ ಹುಟ್ಟಿರಬಹುದು ಆದರೆ ಸ್ವಂತ ಬಲದಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆ ಗಳಿಸಿ ಐಷಾರಾಮಿ ಜೀವನ ನಡೆಸುತ್ತಾರೆ.

ಶಶಯೋಗವು ಹೇಗೆ ರೂಪುಗೊಳ್ಳುತ್ತದೆ?

ಶನಿಯು ಜಾತಕದಲ್ಲಿ ಮೊದಲ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಯಲ್ಲಿ ಲಗ್ನ ಅಥವಾ ಚಂದ್ರನಿಂದ ಅಥವಾ ತನ್ನದೇ ಆದ ರಾಶಿಯಲ್ಲಿ ಅಂದರೆ ಮಕರ,ಕುಂಭ ಅಥವಾ ಉಚ್ಛ ರಾಶಿಯಾದ ತುಲಾ ರಾಶಿಯಲ್ಲಿದ್ದಾಗ ಶಶ ಯೋಗವು ರೂಪುಗೊಳ್ಳುತ್ತದೆ.

- ಶಶ ಯೋಗವಿರುವ ವ್ಯಕ್ತಿ ಸಮಾಜದಲ್ಲಿ ಬಹಳಷ್ಟು ಗೌರವ, ಪ್ರತಿಷ್ಠೆ ಮತ್ತು ಉನ್ನತ ಸ್ಥಾನವನ್ನು ಗಳಿಸುತ್ತಾನೆ. ಅಂತಹ ವ್ಯಕ್ತಿಯು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಈ ವ್ಯಕ್ತಿ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡುವ ಸಂಭವವೂ ಇದೆ. ಶನಿದೇವನು ಜಾತಕದಲ್ಲಿ ಶಶ ಯೋಗವನ್ನು ಹೊಂದಿರುವ ವ್ಯಕ್ತಿಗೆ ದಯೆ ತೋರುತ್ತಾನೆ. ಇವರಿಗೆ ಶನಿಯ ಸಾಡೇಸಾತಿ ಬಾಧಿಸುವುದಿಲ್ಲ.

- ಶಶ ಯೋಗದಲ್ಲಿ ಜನಿಸಿದ ವ್ಯಕ್ತಿಯು ಪ್ರಯಾಣವನ್ನು ಇಷ್ಟಪಡುತ್ತಾನೆ. ಈ ಜನರು ಸುಲಭವಾಗಿ ಏನನ್ನೂ ಬಿಟ್ಟುಕೊಡುವವರಲ್ಲ. ಸತತ ಪರಿಶ್ರಮದಿಂದ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗುವ ಸಂಪೂರ್ಣ ಸಾಮರ್ಥ್ಯ ಅವರಿಗಿದೆ. ಸಹಿಷ್ಣುತೆ ಅವರ ಶ್ರೇಷ್ಠ ಗುಣ. ಆದರೆ ಯಾರಾದರೂ ಅವರಿಗೆ ಕೆಟ್ಟದ್ದನ್ನು ಮಾಡಿದರೆ ಅವರು ಅದನ್ನು ಎಂದಿಗೂ ಮರೆಯುವುದದಿಲ್ಲ.

ಇದನ್ನೂ ಓದಿ: ಇನ್ನೇನು 4 ದಿನಗಳಲ್ಲಿ ಬದಲಾಗಲಿದೆ ಈ ರಾಶಿಗಳ ಭವಿಷ್ಯ: ರಾಜಯೋಗದಿಂದ ಜೇಬು ತುಂಬುವುದು ಜಣಜಣ ಕಾಂಚಾಣ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News