Saturn restrograde creates Sasha Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ರಾಶಿಯ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ಗ್ರಹಗಲಲ್ಲೆಲ್ಲಾ ತುಂಬಾ ನಿಧಾನವಾಗಿ ಚಲಿಸುವ ನ್ಯಾಯದ ದೇವರು, ಕರ್ಮಫಲದಾತ ಎಂದು ಬಣ್ಣಿಸಲ್ಪಡುವ ಶನಿಯ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಸಹ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
2023ರ ಆರಂಭದಲ್ಲಿ ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಗೆ ಪದಾರ್ಪಣೆ ಮಾಡಿರುವ ಶನಿ ದೇವನು 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಆದರೆ, ಈ ನಡುವೆ ಶನಿಯ ಪಥದಲ್ಲಿ ಬದಲಾವಣೆ ಆಗಲಿದೆ. ಇದೀಗ ಇನ್ನೂ 11 ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ನವೆಂಬರ್ 4ರವರೆಗೆ ಶನಿ ಇದೇ ಸ್ಥಿತಿಯಲ್ಲಿಯೇ ಸಾಗಳಿದ್ದು ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಮೂರು ರಾಶಿಯವರಿಗೆ ಇದನ್ನು ಗೋಲ್ಡನ್ ಟೈಮ್ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಚಕ್ರಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- Shani Vakri Surya Gochar: ಇನ್ನು 11 ದಿನಗಳ ಬಳಿಕ ಈ ರಾಶಿಯವರಿಗೆ ಸುವರ್ಣ ದಿನ ಆರಂಭ
ಶನಿಯ ವಕ್ರನಡೆಯಿಂದ ಶಶ ರಾಜಯೋಗ: ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಕುಬೇರನ ಸಂಪತ್ತು:-
ಸಿಂಹ ರಾಶಿ:
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 17ರಿಂದ ಶನಿಯ ವಕ್ರನಡೆ ಆರಂಭವಾಗಲಿದ್ದು, ಇದನ್ನು ಸಿಂಹ ರಾಶಿಯವರಿಗೆ ಮಂಗಳಕರ ಸಮಯ ಎಂದು ಹೇಳಲಾಗುತ್ತಿದೆ. ಈ ವೇಳೆ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಸಿಂಹ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ. ಮಾತ್ರವಲ್ಲ, ಇಷ್ಟು ದಿನ ಮದುವೆಗಾಗಿ ಪ್ರಯತ್ನಿಸುತ್ತಿದ್ದವರಿಗೆ ಈಗ ಕಂಕಣ ಭಾಗ್ಯ ಕೂಡಿ ಬರಲಿದೆ.
ವೃಶ್ಚಿಕ ರಾಶಿ:
ಕುಂಭ ರಾಶಿಯಲ್ಲಿ ಶನಿಯ ವಕ್ರನಡೆಯಿಂದ ರೂಪುಗೊ,ಳ್ಳಲಿರುವ ಶಶ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿದ್ದು, ಭೂಮಿ, ಮನೆ, ವಾಹನ ಖರೀದಿ ಯೋಗವಿದೆ. ಶನಿದೇವನ ಆಶೀರ್ವಾದದಿಂದ ಹಣದ ಮಳೆಯೇ ಸುರಿಯಲಿದ್ದು ಕುಬೇರನ ಸಂಪತ್ತು ನಿಮ್ಮದಾಗಬಹುದು. ಒಟ್ಟಾರೆಯಾಗಿ ಶನಿ ಧೈಯಾ ಪ್ರಭಾವದ ಹೊರತಾಗಿಯೂ ಇದು ನಿಮಗೆ ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Guru Gochar 2023: ಮುಂದಿನ 16 ತಿಂಗಳಿನಲ್ಲಿ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಈ ರಾಶಿಯವರು
ಕುಂಭ ರಾಶಿ:
ಸ್ವ ರಾಶಿಯಲ್ಲಿಯೇ ಶನಿಯು ಹಿಮ್ಮೆಟ್ಟಲಿದ್ದು ಇದರಿಂದ ನೀರ್ಮಾನವಾಗಲಿರುವ ಶಶ ರಾಜಯೋಗವು ಈ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ನಿಮ್ಮ ದೀರ್ಘಾವಧಿಯ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದ್ದು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆಗಳಿವೆ. ಮಾತ್ರವಲ್ಲ, ಹಣಕಾಸಿನ ಹರಿವು ಹೆಚ್ಚಾಗಿ ನಿಮ್ಮ ಸ್ಥಗಿತಗೊಂಡಿರುವ ಕಾಮಗಾರಿಗಳು ವೇಗವನ್ನು ಪಡೆಯಲಿವೆ. ಇದರಿಂದ ನಿಮ್ಮ ಆರೋಗ್ಯವೂ ಸುಧಾರಿಸಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ