ದಿನಭವಿಷ್ಯ 14-11-2024: ಗುರುವಾರ ಅಶ್ವಿನಿ ನಕ್ಷತ್ರದಲ್ಲಿ ಸಿದ್ಧಿ ಯೋಗ, 6 ರಾಶಿಯವರಿಗೆ ಕೈಗೂಡುವುದು ಹಿಡಿದೆಲ್ಲಾ ಕೆಲಸ!

Today Horoscope 14th November 2024: ಈ ದಿನ ಗುರುವಾರ ಅಶ್ವಿನಿ ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Nov 14, 2024, 08:11 AM IST
  • ಕಾರ್ತಿಕ ಮಾಸ, ಶುಕ್ಲ ಪಕ್ಷ, ತ್ರಯೋದಶಿಯ ಈ ದಿನ ಗುರುವಾರ
  • ಅಶ್ವಿನಿ ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ.
  • ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 14-11-2024:  ಗುರುವಾರ ಅಶ್ವಿನಿ ನಕ್ಷತ್ರದಲ್ಲಿ ಸಿದ್ಧಿ ಯೋಗ, 6 ರಾಶಿಯವರಿಗೆ ಕೈಗೂಡುವುದು ಹಿಡಿದೆಲ್ಲಾ ಕೆಲಸ!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತ್ರಯೋದಶಿಯ ಈ ದಿನ ಗುರುವಾರ ಅಶ್ವಿನಿ ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.  

ಮೇಷ ರಾಶಿಯವರ ಭವಿಷ್ಯ (Aries Horoscope):  
ಆಸ್ತಿ ಸಂಬಂಧಿತ ವಿಷಯಗಳಿಗೆ ಇಂದು ಉತ್ತಮ ದಿನ. ಸಂಕಷ್ಟದ ಸಮಯದಲ್ಲಿ ಸಹೋದರಿಯಿಂದ ಸಲಹೆ ದೊರೆಯಲಿದೆ. ಕಾನೂನು ವಿಷಯಗಳಲ್ಲಿ ದಿನ ನಿಮ್ಮ ಪರವಾಗಿಡೇ. ಹೊಸ ಕೆಲಸಗಳನ್ನು ಆರಂಭಿಸಲು ಒಳ್ಳೆಯ ದಿನ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಶಕ್ತಿಯುತವಾದ ದಿನ. ನಿಮ್ಮ ಸಂಗಾತಿಯೊಂದಿಗೆ ಶಾಪಿಂಗ್ ಗೆ ಹೋಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಮನ್ನಣೆ ದೊರೆಯಲಿದೆ. ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ವಿವಾದಗಳು ಬಗೆಹರಿಯಲಿವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮಗಿಂದು ಲಾಭದಾಯಕವಾದ ದಿನ. ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ಕೆಲಸದಲ್ಲಿ ತಲೆದೂರಿದ್ದ ಅಡೆತಡೆಗಳು ಒಂದೊಂದಾಗಿ ಬಗೆಹರಿಯಲಿವೆ. ಸಂಜೆ ವೇಳೆಗೆ ಸ್ನೇಹಿತರಿಂದ ಶುಭ ಸುದ್ದಿಯೊಂದನ್ನು ಸ್ವೀಕರಿಸುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಗಮನ ಹರಿಸಿ. ಪಾಲುದಾರಿಕೆ ವ್ಯಾಪಾರಗಳಲ್ಲಿ ಇಂದು ಜಾಗರೂಕರಾಗಿರಬೇಕು. ಮನೆಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯಬಹುದು ಈ ಬಗ್ಗೆ ಮಾನಸಿಕವಾಗಿ ಸಿದ್ದರಾಗಿರಿ. 

ಇದನ್ನೂ ಓದಿ- ಬರೋಬ್ಬರಿ 64 ವರ್ಷಗಳ ಬಳಿಕ ಕುಬೇರ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ, ರಾಜವೈಭೋಗ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇದು ನಿಮಗೆ ಸಮಸ್ಯೆಗಳಿಂದ ಕೂಡಿದ ದಿನ. ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಯಾವುದೇ ಪ್ರತೀಕೂಲ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಮುಂದುವರೆಯುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಹೊಸ ವ್ಯವಹಾರದತ್ತ ಹೆಜ್ಜೆಹಾಕಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮಗಿಂದು ಲಾಭದಾಯಕವಾದ ದಿನ. ನಿಮ್ಮ ದಿನ ಚೈತನ್ಯದಿಂದ ತುಂಬಿರಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಯೋಜನಕಾರಿಯಾದ ದಿನ. ಮಕ್ಕಳ ಪ್ರಗತಿಯಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗೆ ಆಹ್ಲಾದಕರ ಫಲಿತಾಂಶಗಳನ್ನು ತರುವ ದಿನ. ಸಂಭಾಷಣೆಗಳಿಂದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಕೋಪದಿಂದ ವರ್ತಿಸುವುದರಿಂದ ಅನಗತ್ಯ ಸಮಸ್ಯೆಗಳು ಉಂಟಾಗಬಹುದು. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವವರು ಇಂದು ಬಂಪರ್ ಲಾಭವನ್ನು ಗಳಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇದ್ದಕ್ಕಿದ್ದಂತೆ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ವ್ಯವಹಾರದಲ್ಲಿ ಕೆಲವು ಹೊಸ ಜನರನ್ನು ಭೇಟಿಯಾಗಬಹುದು. ನಿಮ್ಮ ಕುಟುಂಬದಲ್ಲಿ ಹಿರಿಯ ಸದಸ್ಯರ ಮಾತಿಗೆ ಮನ್ನಣೆ ಈಡಿ. ವ್ಯಾಪಾರದಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಯಿಂದ ಲಾಭವನ್ನು ಕಾಣಬಹುದು. 

ಇದನ್ನೂ ಓದಿ- ಇನ್ನೆರಡು ದಿನಗಳ ಬಳಿಕ ಕಷ್ಟಕೊಡುವಾತನೇ ನೀಡಲಿದ್ದಾನೆ ಅಪಾರ ಸುಖ-ಸಂಪತ್ತು, ಅದೃಷ್ಟದ ಸಂಪೂರ್ಣ ಬೆಂಬಲ!

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮಗಿಂದು ವಿಶೇಷವಾದ ದಿನ. ನಿಮ್ಮ ಸುತ್ತಮುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಕೆಟ್ಟ ಆಲೋಚನೆಗಳಿಂದ ದೂರವಿದ್ದರೆ ಒಳ್ಳೆಯ ಸಮಯವನ್ನು ಆನಂದಿಸಬಹುದು. ವ್ಯವಹಾರದಲ್ಲಿ ಪರಿಸ್ಥಿತಿಗಳು ಮೊದಲಿಗಿಂತ ಉತ್ತಮವಾಗಿರುತ್ತದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಕೆಲಸಗಳಲ್ಲಿ ಇಂದು ತೊಡಕುಗಳು ಹೆಚ್ಚಾಗಬಹುದು. ನಿರ್ಗತಿಕರಿಗೆ ಸಹಾಯ ಮಾಡಲು ಅವಕಾಶ ಸಿಕ್ಕರೆ ತಪ್ಪದೆ ಈ ಕೆಲಸ ಮಾಡಿ. ತಾಳ್ಮೆ ಮತ್ತು ಧೈರ್ಯದಿಂದ ಕಾರ್ಯಗಳನ್ನು ಪೂರ್ಣಗೊಳಿಸಿ. ಸಹೋದರ ವರ್ಗದಿಂದ ಶುಭ ಸುದ್ದಿ ನಿರೀಕ್ಷಿಸಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ದಿನ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳುವುವು. ಕೆಲಸದಲ್ಲಿ ದಕ್ಷತೆಯು ಉತ್ತಮವಾಗಿರುತ್ತದೆ. ಯಾವುದೇ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನೀವಿಂದು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಶುಭ ಫಲಗಳನ್ನು ನಿರೀಕ್ಷಿಸಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ನಿವಾರಣೆಯಾಗುವ ಸಂಭವವಿದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ಒಳಿತು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News