ನೀವು ಮಾಡುವ ಈ ಐದು ತಪ್ಪುಗಳು ನಿಮ್ಮನ್ನು ಬೀದಿಗೆ ತರುತ್ತವೆ ಎಚ್ಚರ!

Garud Puran: ವ್ಯಕ್ತಿಗಳು ತಿಳಿಯದೆ ಮಾಡುವ ಕೆಲ ತಪ್ಪುಗಳಿಂದ ಅವರ ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ಮಾಡುವ ಇಂತಹುದೇ ಕೆಲ ತಪ್ಪುಗಳ ಕುರಿತು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ತಪ್ಪುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನುಷ್ಯನ ಜೀವನದಲ್ಲಿ ನಿಧಾನಕ್ಕೆ ಬಡತನ ಮತ್ತು ದಾರಿದ್ರ್ಯದ ಪ್ರವೇಶ ಉಂಟಾಗುತ್ತದೆ (Spiritual News In Kannada).   

Written by - Nitin Tabib | Last Updated : Aug 12, 2023, 10:32 PM IST
  • ಮನುಷ್ಯ ಮಾಡುವ ಕೆಲ ತಪ್ಪುಗಳ ಕುರಿತು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
  • ಈ ತಪ್ಪುಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತವೆ.
  • ಇದರಿಂದ ಮನುಷ್ಯನ ಜೀವನದಲ್ಲಿ ನಿಧಾನಕ್ಕೆ ಬಡತನ ಮತ್ತು ದಾರಿದ್ರ್ಯ ಪ್ರವೇಶಿಸುತ್ತವೇ.
ನೀವು ಮಾಡುವ ಈ ಐದು ತಪ್ಪುಗಳು ನಿಮ್ಮನ್ನು ಬೀದಿಗೆ ತರುತ್ತವೆ ಎಚ್ಚರ! title=

ಬೆಂಗಳೂರು: ನಮ್ಮ ಧರ್ಮ ಶಾಸ್ತ್ರಗಳಲ್ಲಿ ಗರುಡ ಪುರಾಣಕ್ಕೆ ಮಹಾಪುರಾಣದ ಸ್ಥಾನಮಾನ ನೀಡಲಾಗಿದೆ. ಇದರಲ್ಲಿ ಜೀವನ-ಮೃತ್ಯುಗಳನ್ನು ಹೊರತುಪಡಿಸಿ ಸುಖಕರ-ಯಹಸ್ವಿ ಜೀವನವನ್ನು ನಡೆಸಲು ಹಲವು ಸಲಹೆಗಳನ್ನು ನೀಡಲಾಗಿದೆ. ಇದರ ಜೊತೆಗೆ ಕೆಲ ಕೆಲಸಗಳನ್ನು ಎಂದಿಗೂ ಕೂಡ ಮಾಡಬಾರದು ಎಂದು ಹೇಳಲಾಗಿದೆ. ಈ ತಪ್ಪುಗಳು ಮನುಷ್ಯನ ಜೀವನವನ್ನೇ ಹಾಳುಮಾಡುತ್ತವೆ. ಹೀಗಾಗಿ ಸಮಯ ಇರುವಾಗಲೇ ಈ ಕೆಲಸಗಳಿಂದ ಅಂತರ ಕಾಯ್ದುಕೊಳ್ಳಿ. ಇಲ್ಲದಿದ್ದರೆ ಭಾರಿ ದೊಡ್ಡ ಹಾನಿ ಸಂಭವಿಸಲಿದೆ. ಈ ತಪ್ಪುಗಳು ಯಾವುದೇ ಮನುಷ್ಯನನ್ನು ಕ್ಷಣಾರ್ಧದಲ್ಲಿ ಬೀದಿಗೆ ತರಬಹುದು. 

ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ
ಕೊಳೆಯಾದ ಬಟ್ಟೆ ಧರಿಸುವುದು
ಸಾಮಾನ್ಯವಾಗಿ ಶುಚಿಯಾಗಿರುವ ಹಾಗೂ ಸ್ವಚ್ಚವಾಗಿ ವಾಸಿಸುವ ಜನರ ಮೇಲೆ ತಾಯಿ ಲಕ್ಷ್ಮಿ ತನ್ನ ಕೃಪೆ ತೋರುತ್ತಾಳೆ. ಹೀಗಾಗಿ ಸ್ವಚ್ಚವಾದ ಬಟ್ಟೆಗಳನ್ನು ಧರಿಸಿ, ಉಗುರುಗಳನ್ನು ಶುಚಿಯಾಗಿಡಿ. ನಿತ್ಯ ಸ್ನಾನವನ್ನು ಮಾಡಿ. ಹಾಳಾದ ಜೀವನಶೈಲಿ ಹೊಂದಿದವರ ಬಳಿ ಲಕ್ಷ್ಮಿ ಎಂದಿಗೂ ಕೂಡ ಬರುವುದಿಲ್ಲ ಹಾಗೂ ದಾರಿದ್ರ್ಯ ಅವರನ್ನು ಸುತ್ತುವರೆಯಲು ಆರಂಭಿಸುತ್ತದೆ. 

ಅಡುಗೆ ಮನೆಯಲ್ಲಿ ಮುಸುರಿ ಪಾತ್ರೆಗಳು ಇಡುವುದು
ರಾತ್ರಿಯ ಹೊತ್ತು ಅಡುಗೆ ಮನೆಯನ್ನು ಕೊಳೆಯಾಗಿ ಇಡುವುದು. ಮುಸುರಿ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಹಾಗೆಯೇ ಬಿಡುವುದರಿಂದ ಅನ್ನಪೂರ್ಣೆ ಹಾಗೂ ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತೆ. ಇಂತಹ ಮನೆಗಳ ಅಭಿವೃದ್ಧಿ ಎಂದಿಗೂ ಕೂಡ ಸಾಧ್ಯವಿಲ್ಲ ಹಾಗೂ ಸಂಕಷ್ಟಗಳ ಸರಮಾಲೆಯೇ ಎದುರಿಸಬೇಕಾಗುತ್ತದೆ. ಹೀಗಾಗಿ ಮಲಗುವ ಮುನ್ನ ಕಿಚನ್ ಅನ್ನು ಸ್ವಚ್ಛ ಮಾಡಲು ಮರೆಯಬೇಡಿ.

ಬೆಳಗ್ಗೆ ತಡವಾಗಿ ಏಳುವುದು
ಯಾವ ಮನೆಯಲ್ಲಿ ಜನರು ಬೆಳಗ್ಗೆ ದೀರ್ಘಕಾಲದವರೆಗೆ ಮಲಗುತ್ತಾರೋ, ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ಇರುವುದಿಲ್ಲ. ಇಂತಹ ಜನರು ಜೀವನದಲ್ಲಿ ಅಭಿವೃದ್ಧಿಯನ್ನು ಕೂಡ ಹೊಂದುವುದಿಲ್ಲ ಮತ್ತು ಅವರ ಕನಸುಗಳು ಕೂಡ ಈಡೇರುವುದಿಲ್ಲ. ಅಷ್ಟೇ ಅಲ್ಲ ಅವರಿಗೆ ಕಷ್ಟಕ್ಕೆ ತಕ್ಕಂತೆ ಫಲಗಳು ಕೂಡ ಸಿಗುವುದಿಲ್ಲ.

ಅಸಹಾಯಕರು ಮತ್ತು ನಿರ್ಗತಿಕರ ಶೋಷಣೆ
ಅಸಾಹಾಯಕ ಹಾಗೂ ನಿರ್ಗತಿಕರನ್ನು ಶೋಷಣೆಗೆ ಒಳಪಡಿಸುವವರು, ಇತರರ ಹಕ್ಕನ್ನು ಕಸಿದುಕೊಳ್ಳುವವರು, ಮೋಸದಿಂದ ಇತರರ ಆಸ್ತಿಪಾಸ್ತಿಯನ್ನು ಕಬಳಿಸುವವರು ಸ್ವಲ್ಪ ಸಮಯದವರೆಗೆ ಶ್ರೀಮಂತಿಕೆಯನ್ನು ಅನುಭವಿಸಿದರೂ ಕೂಡ ಶೀಘ್ರದಲ್ಲಿಯೇ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಕೆಟ್ಟ ಕೆಲಸಗಳಿಂದ ದೂರವಿರಿ.

ಇದನ್ನೂ ಓದಿ-ಸ್ವರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಮಹಾ ಧನ-ಸಂಪತ್ತು ಪ್ರಾಪ್ತಿ!

ಮಹಿಳೆಯರನ್ನು ಮತ್ತು ವೃದ್ಧರನ್ನು ಅವಮಾನಿಸುವವರು
ಮಹಿಳೆಯರನ್ನು ಹಾಗೂ ವೃದ್ಧರನ್ನು ಅವಮಾನಿಸುತ್ತಾರೋ, ದುರ್ಬಲರ ಜೊತೆಗೆ ಕೆಟ್ಟದಾಗಿ ವರ್ತಿಸುತ್ತಾರೋ ಅವರ ಮೇಲೆ ದುಃಖದ ಪರ್ವತವೆ ಕುಸಿದು ಬೀಳುತ್ತದೆ. ಅವರ ಬಳಿ ಇರುವ ಹಣ, ಘನತೆ-ಗೌರವ ಎಲ್ಲವೂ ಕೂಡ ಹೊರಟುಹೋಗುತ್ತದೆ. 

ಇದನ್ನೂ ಓದಿ-ಭರಣಿ ನಕ್ಷತ್ರಕ್ಕೆ ದೇವಗುರು ಬೃಹಸ್ಪತಿಯ ಪ್ರವೇಶ, ಲಕ್ಷ್ಮಿ ನಾರಾಯಣ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News