Surya Grahan: ಇಂದು ವೈಶಾಖ ಮಾಸದ ಅಮಾವಾಸ್ಯೆಯ ದಿನ ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದೆ. ವೈಜ್ಞಾನಿಕವಾಗಿ ಈ ಗ್ರಹಣ ತುಂಬಾ ವಿಶೇಷವಾಗಿದ್ದು, ವಿಜ್ಞಾನಿಗಳು ಇದನ್ನು ಹೈಬ್ರೀಡ್ ಸೂರ್ಯಗ್ರಹಣ ಎಂದು ಬಣ್ಣಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, ಇಂದು ಮೂರು ಸೂರ್ಯ ಗ್ರಹಣಗಳು ಸಂಭವಿಸುತ್ತಿದೆ. ಶತಮಾನದ ಬಳಿಕ ಇಂತಹ ಕಾಕತಾಳೀಯ ಸಂಭವಿಸುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳನ್ವಯ ಈ ಸೂರ್ಯ ಗ್ರಹಣವು ಕೆಲವು ರಾಶಿಯವರ ಜೀವನದಲ್ಲಿ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಇದನ್ನು ತಪ್ಪಿಸಲು ಗ್ರಹಣ ಮುಗಿದ ತಕ್ಷಣ ತಪ್ಪದೇ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ.
ಸೂರ್ಯಗ್ರಹಣದ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಗ್ರಹಣ ಮುಗಿದ ತಕ್ಷಣ ತಪ್ಪದೇ ಈ ಕೆಲಸ ಮಾಡಿ:
ಮೊದಲು ಸ್ನಾನ ಮಾಡಿ:
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹಣದ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಮೊದಲು ಸ್ನಾನ ಮಾಡಲು ಸೂಚಿಸಲಾಗುತ್ತದೆ. ವಾಸ್ತವವಾಗಿ, ಸೂರ್ಯ ಗ್ರಹಣದ ಸಮಯದಲ್ಲಿ ಸೂಕ್ಷ್ಮ ಜೀವಿಗಳು ಬೆಳೆಯಲು ಪ್ರಾರಂಭಿಸುತ್ತವೆ, ಇದರಿಂದ ಸೋಂಕುಗಳ ಅಪಾಯ ಹೆಚ್ಚಿರುವುದರಿಂದ ಸೂರ್ಯಗ್ರಹಣ ಮುಗಿದ ಕೂಡಲೇ ಸ್ನಾನ ಮಾಡಬೇಕು.
ಇದನ್ನೂ ಓದಿ- ಇಂದು ವರ್ಷದ ಮೊದಲ ಸೂರ್ಯ ಗ್ರಹಣದಂದು 5 ಶುಭ ಯೋಗಗಳ ನಿರ್ಮಾಣ, ಈ ರಾಶಿಯವರಿಗೆ ಬಂಪರ್ ಲಾಭ
ಮನೆಯನ್ನು ಸ್ವಚ್ಛಗೊಳಿಸಿ:
ಗ್ರಹಣದ ಬಳಿಕ ನೀವು ಸ್ನಾನ ಮಾಡಿದ ನಂತರ ಮನೆಯನ್ನು ಸ್ವಚ್ಛಗೊಳಿಸಿ ಗಂಗಾಜಲವನ್ನು ಮನೆಯಲ್ಲಿ ಪ್ರೋಕ್ಷಿಸಿ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ದೇವರ ಸಾಮಾಗ್ರಿಗಳನ್ನು ಶುಚಿಗೊಳಿಸಿ:
ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿದ ಬಳಿಕ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರ ಕೋಣೆಯಲ್ಲಿರುವ ವಿಗ್ರಹಗಳನ್ನು ಗಂಗಾಜಲದಿಂದ ಶುಚಿಗೊಳಿಸಿ. ದೇವರ ಪೂಜೆ ಮಾಡಿ.
ಇದನ್ನೂ ಓದಿ- ವರ್ಷದ ಪ್ರಥಮ ಸೂರ್ಯ ಗ್ರಹಣಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ, ನಿಮ್ಮ ಮೇಲೆ ಏನು ಪರಿಣಾಮ
ದಾನ:
ಹಿಂದೂ ಧರ್ಮದಲ್ಲಿ ದಾನಕ್ಕೆ ತುಂಬಾ ಮಹತ್ವವಿದೆ. ಸೂರ್ಯಗ್ರಹಣ ಮುಗಿದ ನಂತರ ದೇವರ ಪೂಜೆ ಮಾಡಿ, ನಿಮ್ಮ ಕೈಲಾದಷ್ಟೂ ನಿರ್ಗತಿಕರಿಗೆ ದಾನ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.