Maha Shivratri 2023 : ಈ ರೀತಿ ವೃತ ಪಾಲಿಸಿದ್ರೆ ಮಾತ್ರ ಪರಶಿವನ ಕೃಪಾಕಟಾಕ್ಷ ಪ್ರಾಪ್ತಿ..!

ಮಹಾ ಶಿವರಾತ್ರಿ ಎಂಬುದು ಶಿವನನ್ನು ಪೂಜಿಸುವ ಹಿಂದೂಗಳ ಪವಿತ್ರ ಹಬ್ಬವಾಗಿದೆ. ಶಿವರಾತ್ರಿಯನ್ನು ಪರಶಿವನ ಭಕ್ತರು ಬಹಳ ಶದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಭಾರತದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಿಭಿನ್ನ ಸಂಸ್ಕೃತಿಗಳಿದ್ದು, ತಮ್ಮದೆ ಸಂಪ್ರದಾಯದ ಪ್ರಕಾರ ಮುಕ್ಕಣ್ಣನ ಜಪ ಮಾಡುತ್ತಾರೆ.ಅಲ್ಲದೆ, ಅಂದು ಶಿವಲಿಂಗಕ್ಕೆ ಜಲ ಹಾಗೂ ಹಾಲು, ತುಪ್ಪ ದಿಂದ ಅಭಿಷೇಕ ಮಾಡಲಾಗುತ್ತದೆ. ಶಿವರಾತ್ರಿ ಪವಿತ್ರ ದಿನವಾದ ಹಿನ್ನೆಲೆ ಅತ್ಯಂತ ಜಾಗರೂಕತೆಯಿಂದ ಉಪವಾಸ ವೃತವನ್ನು ಆಚರಿಸಬೇಕಾಗುತ್ತದೆ.

Written by - Krishna N K | Last Updated : Feb 17, 2023, 09:21 PM IST
  • ಮಹಾ ಶಿವರಾತ್ರಿ ಎಂಬುದು ಶಿವನನ್ನು ಪೂಜಿಸುವ ಹಿಂದೂಗಳ ಪವಿತ್ರ ಹಬ್ಬ.
  • ಶಿವರಾತ್ರಿ ಪವಿತ್ರ ದಿನವಾದ ಹಿನ್ನೆಲೆ ಅತ್ಯಂತ ಜಾಗರೂಕತೆಯಿಂದ ಉಪವಾಸ ವೃತವನ್ನು ಆಚರಿಸಬೇಕಾಗುತ್ತದೆ.
  • ಪೂಜೆ ಮತ್ತು ಉಪವಾಸವನ್ನು ಮಾಡುವಾಗ ಈ ಕೆಳಗೆ ಹೇಳಿರುವ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
Maha Shivratri 2023 : ಈ ರೀತಿ ವೃತ ಪಾಲಿಸಿದ್ರೆ ಮಾತ್ರ ಪರಶಿವನ ಕೃಪಾಕಟಾಕ್ಷ ಪ್ರಾಪ್ತಿ..! title=

Maha Shivratri 2023 : ಮಹಾ ಶಿವರಾತ್ರಿ ಎಂಬುದು ಶಿವನನ್ನು ಪೂಜಿಸುವ ಹಿಂದೂಗಳ ಪವಿತ್ರ ಹಬ್ಬವಾಗಿದೆ. ಶಿವರಾತ್ರಿಯನ್ನು ಪರಶಿವನ ಭಕ್ತರು ಬಹಳ ಶದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಭಾರತದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಿಭಿನ್ನ ಸಂಸ್ಕೃತಿಗಳಿದ್ದು, ತಮ್ಮದೆ ಸಂಪ್ರದಾಯದ ಪ್ರಕಾರ ಮುಕ್ಕಣ್ಣನ ಜಪ ಮಾಡುತ್ತಾರೆ.ಅಲ್ಲದೆ, ಅಂದು ಶಿವಲಿಂಗಕ್ಕೆ ಜಲ ಹಾಗೂ ಹಾಲು, ತುಪ್ಪ ದಿಂದ ಅಭಿಷೇಕ ಮಾಡಲಾಗುತ್ತದೆ. ಶಿವರಾತ್ರಿ ಪವಿತ್ರ ದಿನವಾದ ಹಿನ್ನೆಲೆ ಅತ್ಯಂತ ಜಾಗರೂಕತೆಯಿಂದ ಉಪವಾಸ ವೃತವನ್ನು ಆಚರಿಸಬೇಕಾಗುತ್ತದೆ.

ಭಕ್ತರು ಶಿವರಾತ್ರಿಯಂದು ಉಪವಾಸ ಮಾಡುತ್ತಾರೆ. ತ್ರಿನೇತ್ರನ ಮಂತ್ರಗಳನ್ನು ಪಠಿಸುತ್ತಾರೆ. ಭೋಲಾ ಶಂಕರನನ್ನು ಭಕ್ತ ಭಾವದಿಂದ ಪೂಜಿಸುತ್ತಾರೆ. ಪರಶಿವನಿಗೆ ಕೇವಲ ಮುಗ್ಧ ಭಕ್ತಿಯಿಂದ ಒಂದು ಬಿಲ್ವಪತ್ರೆ ಇಟ್ಟರೆ ಸಾಕು ಮಹಾದೇವ ಸಂಪೂರ್ಣವಾಗಿ ಒಲಿಯುತ್ತಾನೆ. ಅಂದಹಾಗೆ ಶಿವರಾತ್ರಿಯಂದು ಯಾವ ರೀತಿ ಉಪವಾಸ ವೃತ ಮಾಡಬೇಕು, ಏನನ್ನು ಮಾಡಬಾರದು ಎಂಬುವುದರ ನೆನೆಪು ನಿಮಗಿರಬೇಕು. ಪೂಜೆ ಮತ್ತು ಉಪವಾಸವನ್ನು ಮಾಡುವಾಗ ಈ ಕೆಳಗೆ ಹೇಳಿರುವ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. 

ಏನನ್ನು ಮಾಡಬೇಕು 

  • ಉಪವಾಸಕ್ಕಾಗಿ, ನೀವು ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಥವಾ ಸೂರ್ಯೋದಯಕ್ಕೆ ಮುಂಚಿತವಾಗಿ ಬೆಳಿಗ್ಗೆ ಬೇಗನೆ ಏಳುವುದು ಅತ್ಯಗತ್ಯ.
  • ‘ಓಂ ನಮಃ ಶಿವಾಯ’ ಎಂಬ ಶಿವ ಸ್ತೋತ್ರವನ್ನು ಪಠಿಸುವಾಗ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ ಸ್ನಾನ ಮಾಡುವುದರೊಂದಿಗೆ ಉಪವಾಸ ಪ್ರಾರಂಭವಾಗುತ್ತದೆ.
  • ಭಗವಾನ್ ಶಿವನ ಸ್ತುತಿಯನ್ನು ಪಠಿಸುವುದು ಅಥವಾ ಆತನ ಹೆಸರನ್ನು ತೆಗೆದುಕೊಳ್ಳುವುದು ಮಂಗಳಕರ. 
  • ಮಹಾ ಶಿವರಾತ್ರಿಯ ಮುಖ್ಯ ಆಚರಣೆಯನ್ನು ಮಧ್ಯರಾತ್ರಿ ಅಥವಾ ಮರುದಿನ ಮುಂಜಾನೆ ನಡೆಸಲಾಗುತ್ತದೆ.
  • ಭಕ್ತರು ಮರುದಿನ ಬೆಳಿಗ್ಗೆ ವಿಧಿವಿಧಾನಗಳ ನಂತರ ತಮ್ಮ ಉಪವಾಸವನ್ನು ಮುರಿದು ಸ್ನಾನ ಮಾಡಬೇಕು.
  • ಶಿವನಿಗೆ ಪೂಜಾ ನೈವೇದ್ಯ ಇಡಬೇಕು. ಹಾಲು, ಪವಿತ್ರ ನೀರು, ಸಿಹಿತಿಂಡಿಗಳಿಂದ ಮಾಡಿದ ಪ್ರಸಾದ, ಬಿಲ್ವಪತ್ರೆ ಮತ್ತು ಧಾತುರ ಎಲೆಗಳು ಇಟ್ಟರೆ ಸಾಕು.

ಏನನ್ನು ಮಾಡಬಾರದು 

  • ಉಪವಾಸದ ಸಮಯದಲ್ಲಿ ಮತ್ತು ಉಪವಾಸವನ್ನು ಅಂತ್ಯಗೊಳಿಸುವಾಗ ಗೋಧಿ, ಅಕ್ಕಿ, ಉಪ್ಪು, ಬೇಳೆಕಾಳುಗಳು ಮತ್ತು ಇತರ ಧಾನ್ಯಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು.
  • ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಮತ್ತು ಮೊಟ್ಟೆ ಮತ್ತು ಇತರ ತಾಮಸಿಕ ಆಹಾರಗಳನ್ನು ಮುಟ್ಟಲೇಬಾರದು.
  • ಗಂಗಾಜಲವನ್ನು ತೆಂಗಿನ ನೀರು ಅಥವಾ ಶುದ್ಧವಾದ ಜಲ್ ಮತ್ತು ಹಾಲನ್ನು ಹೊರತುಪಡಿಸಿ ಯಾವುದೇ ವಸ್ತುಗಳೊಂದಿಗೆ ಬೆರೆಸಬಾರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News