ದೇವದೇವತೆ-ಋಷಿಮುನಿಗಳ ಈ ಸಮಯಕ್ಕೆ ಯಾಕೆ ಇಷ್ಟೊಂದು ಮಹತ್ವ?

ಹಿಂದೂ ಧರ್ಮ ಶಾಸ್ತ್ರದಲ್ಲಿ ಬ್ರಹ್ಮ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಮುಹೂರ್ತದಲ್ಲಿ ಬುದ್ಧಿ  ಚುರುಕಾಗುತ್ತದೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಗುರಿ-ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಇದನ್ನು ದೇವ-ದೇವತೆಗಳ ಸಮಯ ಎಂದೂ ಕೂಡ ಭಾವಿಸಲಾಗುತ್ತದೆ.  

Written by - Nitin Tabib | Last Updated : Jul 18, 2023, 10:27 PM IST
  • ಶಾಸ್ತ್ರಗಳ ಪ್ರಕಾರ, ಪ್ರಾಚೀನ ಕಾಲದಿಂದಲೂ ಋಷಿಗಳು ಈ ಸಮಯದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ,
  • ದೇವರ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
  • ಈ ಸಮಯವನ್ನು ದೇವತೆಗಳ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ದೇವರು ಮತ್ತು ಪೂರ್ವಜರ ಆಗಮನವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ದೇವದೇವತೆ-ಋಷಿಮುನಿಗಳ ಈ ಸಮಯಕ್ಕೆ ಯಾಕೆ ಇಷ್ಟೊಂದು ಮಹತ್ವ? title=

ನಮ್ಮಲ್ಲಿ ಬಹುತೇಕ ಜನರು ಬ್ರಹ್ಮ ಮುಹೂರ್ತದ ಬಗ್ಗೆ ಕೇಳಿರಬಹುದು. ಹಿಂದೂ ಧರ್ಮ ಶಾಸ್ತ್ರದಲ್ಲಿ ಈ ಸಮಯಕ್ಕೆ ವಿಎಶೆಶ ಮಹತ್ವವನ್ನು ಕಲ್ಪಿಸಲಾಗಿದೆ. ಧಾರ್ಮಿಕ ಗ್ರಂಥಗಳಿಂದ ಹಿಡಿದು ಋಷಿಮುನಿಗಳು ಮತ್ತು ಹಿರಿಯರವರೆಗೂ ಈ ಮುಹೂರ್ತವನ್ನು ಅತ್ಯಂತ ಪ್ರಯೋಜನಕಾರಿ ಎಂದು ವಿವರಿಸಲಾಗಿದೆ. ಇದನ್ನು ದೇವತೆಗಳ ಸಮಯವೆಂದು ಕೂಡ ಕರೆಯಲಾಗುತ್ತದೆ. ಈ ಸಮಯದಲ್ಲಿ ಎದ್ದೇಳುವುದು ವ್ಯಕ್ತಿಗಳಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಯ ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಅವನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇವರನ್ನು ಪೂಜಿಸುವುದು ಅಥವಾ ಸ್ಮರಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಬ್ರಹ್ಮ ಮುಹೂರ್ತದ ನಿರ್ಧಿಷ್ಟ ಸಮಯ ಯಾವುದು
ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತ ಎಂದರೆ ಬೆಳಗಿನ ಜಾವದ ಸಮಯ. ಹಿಂದೂ ಧರ್ಮದಲ್ಲಿ, ಈ ಸಮಯವನ್ನು ಬೆಳಗ್ಗೆ ಏಳಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ರಾತ್ರಿ ಅಂತ್ಯವಾಗುತ್ತದೆ ಮತ್ತು ಹಗಲು ಪಾರಂಭಗೊಳ್ಳುತ್ತದೆ. ಆಮಾನ್ಯವಾಗಿ ಬೆಳಗ್ಗೆ  4 ರಿಂದ 5.30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಎಂದು ಪರಿಗಣಿಸಲಾಗುತ್ತದೆ. ಇದರ ಅವಧಿ ಒಂದೂವರೆ ಗಂಟೆಯದ್ದಾಗಿರುತ್ತದೆ.

ಪೂಜೆ
ಧರ್ಮಗ್ರಂಥಗಳ ಪ್ರಕಾರ, ಇದನ್ನು ಮನುಷ್ಯರು ಎದ್ದೇಳಬೇಕಾದ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಏಳುವುದರಿಂದ ಕಾಯಿಲೆಗಳು ಬರುವುದಿಲ್ಲ ಮತ್ತು ಆರೋಗ್ಯ ಸುಧಾರಿಸುತ್ತದೆ ಎನ್ನಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಪೂಜೆ ಮಾಡುವುದರಿಂದ ದೇವರು ಪ್ರಸನ್ನನಾಗಿ ಭಕ್ತಾದಿಗಳ ಮೇಲೆ ತನ್ನ ಕೃಪಾ ದೃಷ್ಟಿ ಬೀರುತ್ತಾನೆ ಎಂದು ಭಾವಿಸಲಾಗುತ್ತದೆ.

ಇದನ್ನೂ ಓದಿ-ಕರ್ಕ ರಾಶಿಗೆ ಸೂರ್ಯನ ಪ್ರವೇಶ, ಪಾಶ್ವಿಕ ಯೋಗ ನಿರ್ಮಾಣ, ಯಾರ ಮೇಲೆ ಹೇಗೆ ಪ್ರಭಾವ?

ದೇವ-ದೇವತೆಗಳ ಆಗಮನ
ಶಾಸ್ತ್ರಗಳ ಪ್ರಕಾರ, ಪ್ರಾಚೀನ ಕಾಲದಿಂದಲೂ ಋಷಿಗಳು ಈ ಸಮಯದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿ, ದೇವರ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಸಮಯವನ್ನು ದೇವತೆಗಳ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ದೇವರು ಮತ್ತು ಪೂರ್ವಜರ ಆಗಮನವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಇದನ್ನೂ ಓದಿ-ಮಂಗಳನ ಮನೆಯಲ್ಲಿ ಗುರುವಿನ ವಕ್ರನಡೆ, ಕೇಂದ್ರ ತ್ರಿಕೋನ ರಾಜಯೋಗದಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News