ಕರ್ಕ ರಾಶಿಗೆ ಸೂರ್ಯನ ಪ್ರವೇಶ, ಪಾಶ್ವಿಕ ಯೋಗ ನಿರ್ಮಾಣ, ಯಾರ ಮೇಲೆ ಹೇಗೆ ಪ್ರಭಾವ?

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯದೇವ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಅಲ್ಲಿ ಪಾಶ್ವಿಕ ಯೋಗ ಕೂಡ ನಿರ್ಮಾಣಗೊಂಡಿದೆ. ಇದರಿಂದ ಒಟ್ಟು ಮೂರು ಜಾತಕದವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಕಾಲ ಬಂದಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

ಎಲ್ಲಾ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಅವುಗಳ ಪ್ರಭಾವ ದ್ವಾದಶ ರಾಶಿಗಳ ಜಾತಕದವರು ಸೇರಿದಂತೆ ಇಡೀ ಭೂಮಿಯ ಮೇಲೆ ಗೋಚರಿಸುತ್ತದೆ. ಇತ್ತೀಚೆಗಷ್ಟೇ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ (Spiritual News In Kannada). ಹೀಗಾಗಿ ಮುಂದಿನ ಸುಮಾರು ಒಂದು ತಿಂಗಳುಗಳ ಕಾಲ ಆತ ಅಲ್ಲಿಯೇ ವಿರಾಜಮಾನನಾಗಲಿದ್ದಾನೆ. ಇನ್ನೊಂದೆಡೆ ಸೂರ್ಯನ ಈ ಗೋಚರದಿಂದ (Surya Gochar In Karka Rashi 2023) ಪಾಶ್ವಿಕ ಯೋಗ ಕೂಡ ನಿರ್ಮಾಣ ಗೊಂಡಿದೆ. ಯಾವುದೇ ಒಂದು ಶುಭ ಗ್ರಹ ಜಾತಕದಲ್ಲಿ ಕೇಂದ್ರ ಹಾಗೂ ತ್ರಿಕೋನ ಭಾವದಲ್ಲಿಲ್ಲದೆ ಸಂದರ್ಭದಲ್ಲಿ ಈ ಯೋಗ ನಿರ್ಮಾಣಗೊಳ್ಳುತ್ತದೆ. ವೈದಿಕ ಜೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಅಶುಭ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆದರೆ, ಕೆಲ ಜಾತಕದವರು ಈ ಯೋಗದ ಪ್ರಭಾವದ ಕಾರಣ ಸ್ವಲ್ಪ ಜಾಗರೂಕರಾಗಿರಬೇಕಾದ ಕಾಲ ಬಂದಿದೆ. ಏಕೆಂದರೆ ಈ ಯೋಗದಿಂದ ಅವರಿಗೆ ಧನಹಾನಿ ಹಾಗೂ ಆರೋಗ್ಯ ಹಾನಿ ಉಂಟಾಗುವ ಸಾಧ್ಯತೆ ಇದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ. 

 

ಇದನ್ನೂ ಓದಿ-ಮಂಗಳನ ಮನೆಯಲ್ಲಿ ಗುರುವಿನ ವಕ್ರನಡೆ, ಕೇಂದ್ರ ತ್ರಿಕೋನ ರಾಜಯೋಗದಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯದೇವ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಅಲ್ಲಿ ಪಾಶ್ವಿಕ ಯೋಗ ಕೂಡ ನಿರ್ಮಾಣಗೊಂಡಿದೆ. ಇದರಿಂದ ಒಟ್ಟು ಮೂರು ಜಾತಕದವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಕಾಲ ಬಂದಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಮಿಥುನ ರಾಶಿ- ನಿಮ್ಮ ಗೋಚರ ಜಾತಕದ ಕೇಂದ್ರ ಹಾಗೂ ತ್ರಿಕೋನ ಭಾವದಲ್ಲಿ ಯಾವುದೇ ಶುಭ ಗ್ರಹ ಇಲ್ಲದ ಕಾರಣ, ಪಾಶ್ವಿಕ ರಾಜಯೋಗ ನಿಮ್ಮ ಪಾಲಿಗೆ ಹಾನಿಕಾರಕ ಸಾಬೀತಾಗುವ ಸಾಧ್ಯತೆ ಇದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಆಸ್ತಿ-ಪಾಸ್ತಿ ಖರೀದಿ ಹಾಗೂ ಮಾರಾಟ ಮಾಡುವುದರಿಂದ ಆದಷ್ಟು ದೂರ ಉಳಿಯಿರಿ. ಬಾಳಸಂಗಾತಿಯ ಜೊತೆಗೆ ವಿರಸ ಉಂಟಾಗುವ ಸಾಧ್ಯತೆ ಇದೆ, ಹೀಗಾಗಿ ವಾಗ್ವಾದದಿಂದ ಆದಷ್ಟು ದೂರ ಉಳಿಯಿರಿ. ನೌಕರವರ್ಗದ ಜನರು ಕಾರ್ಯಸ್ಥಳದಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಹೀಗಾಗಿ ಮೊದಲೇ ಯೋಜನೆ ರೂಪಿಸಿಕೊಂಡು ಕೆಲಸಕ್ಕೆ ಆಣಿಯಾಗಿ. ಆದಷ್ಟು ನಿರ್ಲಕ್ಷ ಧೋರಣೆ ತಳೆಯದೆ ಇರುವುದು ಉತ್ತಮ.   

3 /5

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಕೇಂದ್ರ ಹಾಗೂ ತ್ರಿಕೋನ ಭಾವದಲ್ಲಿಯೂ ಕೂಡ ಯಾವುದೇ ಶುಭ ಗ್ರಹ ಇಲ್ಲದ ಕಾರಣ ಈ ಪಾಶ್ವಿಕ ಯೋಗ ನಿಮಗೆ ಹಾನಿಕಾರಕ ಸಾಬೀತಾಗಲಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ದಾಂಪತ್ಯ ಜೀವನದಲ್ಲಿಯೂ ಕೂಡ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ತಂದೆ-ತಾಯಿಯರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಇನ್ನೊಂದೆಡೆ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿಯೂ ಕೂಡ ನಿಮಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ನೀವು ವಿಶೇಷ ಕಾಳಜಿವಹಿಸುವ ಕಾಲ ಇದು ಎಂಬುದನ್ನು ಮರೆಯಬೇಡಿ.  

4 /5

ಧನು ರಾಶಿ: ನಿಮ್ಮ ಗೋಚರ ಜಾತಕದ ಮಾತೃ ಭಾವ ಹಾಗೂ ಸುಖ-ಸೌಕರ್ಯಗಳ ಭಾವಕ್ಕೆ ಅಧಿಪತಿಯಾಗಿದ್ದಾನೆ. ಆತ ರಾಹು ಪೀಡಿತನಾಗಿದ್ದಾನೆ. ಹೀಗಾಗಿ ಪಾಶ್ವಿಕ ಯೋಗ ನಿಮ್ಮ ಪಾಲಿಗೂ ಕೂಡ ಅಹಿತಕರ ಸಾಬೀತಾಗಲಿದೆ. ಇನ್ನೊಂದೆಡೆ ಶನಿದೇವನ ದೃಷ್ಟಿಯೂ ಕೂಡ ನಿಮ್ಮ ಜಾತಕದ ಮೇಲಿದೆ. ಇದರಿಂದ ನಿಮಗೆ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ವಹಿವಾಟುಗಳನ್ನು ಆದಷ್ಟು ತಪ್ಪಿಸಿ ಅಥವಾ ಎಚ್ಚರಿಕೆಯಿಂದ ಮಾಡಿ. ವೃತ್ತಿಜೀವನದಲ್ಲಿಯೂ ಕೂಡ ಸಂಕಷ್ಟಗಳು ಎದುರಗಳಿವೆ. ವಾದವಿವಾದಗಳಿಂದ ದೂರ ಉಳಿಯಿರಿ. ಒಂದು ಸಂತೋಷದ ವಿಷಯ ಎಂದರೆ, ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಯೋಗವಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)