ಧರ್ಮದ ಹೇಳಿದಂತೆ ಬದುಕಲು 18ರ ಹರೆಯದಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್!

Ayesha Naseem Cricket Retirement: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಅತ್ಯುತ್ತಮ ಹಿಟ್ಟರ್‌ಗಳಲ್ಲಿ ಆಯೇಷಾ ನಸೀಮ್ ಹೆಸರನ್ನು ಪರಿಗಣಿಸಲಾಗಿದೆ, ಆದರೆ ಇನ್ಮುಂದೆ ಈ ಆಟಗಾರ್ತಿ ಮೈದಾನದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Jul 21, 2023, 12:50 PM IST
    • “ನಾನು ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸುತ್ತೇನೆ”
    • ಆಯೇಶಾ ನಸೀಮ್ ಪಾಕಿಸ್ತಾನದ ಪರ 4 ODI ಮತ್ತು 30 T20 ಪಂದ್ಯಗಳನ್ನು ಆಡಿದ್ದಾರೆ.
    • ಇಸ್ಲಾಂ ಧರ್ಮದ ಕಾರಣಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ
ಧರ್ಮದ ಹೇಳಿದಂತೆ ಬದುಕಲು 18ರ ಹರೆಯದಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್!  title=
Mukesh Kumar

Ayesha Naseem Cricket Retirement: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಆಯೇಶಾ ನಸೀಮ್ ಕ್ರಿಕೆಟ್ ಲೋಕ್ಕೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಕೇವಲ 18 ವರ್ಷ ವಯಸ್ಸಿನ ಆಯೇಶಾ ನಸೀಮ್ ಇಸ್ಲಾಂ ಧರ್ಮದ ಕಾರಣಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ! ರಿಕಿ ಪಾಂಟಿಂಗ್ ನ ಈ ಬೃಹತ್ ದಾಖಲೆ ಮುರಿದ ರೋಹಿತ್ ಶರ್ಮಾ

“ನಾನು ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸುತ್ತೇನೆ. ಇದರಿಂದಾಗಿ ನಾನು ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದೆ” ಎಂದು ಆಯೇಶಾ ನಸೀಮ್ ಹೇಳಿದ್ದಾರೆ. ಆಯೇಶಾ ನಸೀಮ್ ಪಾಕಿಸ್ತಾನದ ಪರ 4 ODI ಮತ್ತು 30 T20 ಪಂದ್ಯಗಳನ್ನು ಆಡಿದ್ದಾರೆ.

 

ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಅತ್ಯುತ್ತಮ ಹಿಟ್ಟರ್‌ಗಳಲ್ಲಿ ಆಯೇಷಾ ನಸೀಮ್ ಹೆಸರನ್ನು ಪರಿಗಣಿಸಲಾಗಿದೆ, ಆದರೆ ಇನ್ಮುಂದೆ ಈ ಆಟಗಾರ್ತಿ ಮೈದಾನದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಡುತ್ತಿರುವ ಆಯೇಷಾ ನಸೀಮ್ 7 ಆಗಸ್ಟ್ 2004 ರಂದು ಅಬೋಟಾಬಾದ್‌’ನಲ್ಲಿ ಜನಿಸಿದರು. ಬ್ಯಾಟಿಂಗ್ ಹೊರತಾಗಿ, ಈ ಆಟಗಾರ್ತಿ ಪಾಕಿಸ್ತಾನದ ಪರ ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡುತ್ತಾರೆ. 4 ಏಕದಿನ ಪಂದ್ಯಗಳನ್ನು ಹೊರತುಪಡಿಸಿ, ಆಯೇಶಾ ನಸೀಮ್ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಕ್ಕಾಗಿ 30 ಟಿ20 ಪಂದ್ಯಗಳನ್ನು ಆಡಿದ್ದಾರೆ.

"ನಾನು ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ" ಎಂದು ಮಾಧ್ಯಮ ವರದಿಗಳ ಪ್ರಕಾರ ಅವರು ಹೇಳಿದ್ದಾರೆ.

ಆಯೇಷಾ ನಸೀಮ್ ಅವರ ವೃತ್ತಿಜೀವನವನ್ನು ಗಮನಿಸಿದರೆ, ಈ ಆಟಗಾರ್ತಿ ಪಾಕಿಸ್ತಾನದ ಪರ 4 ಏಕದಿನ ಪಂದ್ಯಗಳನ್ನು ಆಡಿದ್ದು, 33 ರನ್ ಗಳಿಸಿದರು. ಅವರ ಸರಾಸರಿ 8.25 ಆಗಿದ್ದರೆ, ಸ್ಟ್ರೈಕ್ ರೇಟ್ 89.18 ಆಗಿತ್ತು. ODI ಸ್ವರೂಪದಲ್ಲಿ ಗರಿಷ್ಠ ಸ್ಕೋರ್ 16 ರನ್ ಆಗಿದೆ.

ಇದನ್ನೂ ಓದಿ: ಬುಮ್ರಾ, ಶಮಿಗಿಂತಲೂ ಅಪಾಯಕಾರಿ ಬೌಲರ್ ಟೀಂ ಇಂಡಿಯಾಗೆ ಎಂಟ್ರಿ ! ಬಡತನದಲ್ಲೇ ಬೆಳೆದು ಬಂದ ಪ್ರತಿಭೆ

ಆಯೇಶಾ ನಸೀಮ್ ಅವರ T20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಈ ಆಟಗಾರ್ತಿ 30 T20 ಪಂದ್ಯಗಳಲ್ಲಿ 369 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಆಯೇಷಾ ನಸೀಮ್ ಅವರ ಸರಾಸರಿ 18.45 ಆಗಿದ್ದರೆ, ಸ್ಟ್ರೈಕ್ ರೇಟ್ 128.12 ಆಗಿತ್ತು. ಟಿ20 ಮಾದರಿಯಲ್ಲಿ ಆಯೇಷಾ ನಸೀಮ್ ಅವರ ಗರಿಷ್ಠ ಸ್ಕೋರ್ 45 (ಔಟಾಗದೆ. ಏಕದಿನದಲ್ಲಿ 2 ಮತ್ತು ಟಿ20 ಪಂದ್ಯಗಳಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News