MS Dhoni : ಓಟಿಟಿಯಲ್ಲಿ ದಾಖಲೆ ಬರೆದ ʼಧೋನಿ ಸಿಕ್ಸ್‌ʼ : ಕ್ಯಾಪ್ಟನ್‌ ಕೂಲ್‌ ಆರ್ಭಟ ವೀಕ್ಷಿಸಿದ ʼ2.2 ಕೋಟಿ ಜನʼ

Jio cinema IPL live : ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್‌ ವೇಳೆ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ದಾಟಿದೆ. ಪ್ರಸ್ತುತ 2023ರ ಐಪಿಎಲ್‌ ಸೀಸನ್ ನಲ್ಲಿ ಇದು ಅತಿ ಹೆಚ್ಚು ವೀಕ್ಷಕರ ದಾಖಲೆ ಆಗಿದೆ. ಕೊನೆಯ ಎಸೆತದವರೆಗೂ ವೀಕ್ಷಕರು ಉಸಿರು ಬಿಗಿಹಿಡಿದುಕೊಂಡು ಪಂದ್ಯದ ಏರಿಳಿತಗಳನ್ನು ವೀಕ್ಷಿಸಿದರು.

Written by - Krishna N K | Last Updated : Apr 13, 2023, 01:37 PM IST
  • ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾಚ್‌.
  • ಎಂಎಸ್ ಧೋನಿ ಆಟವನ್ನು ಕಣ್ತುಂಬಿಕೊಂಡ 2.2 ಕೋಟಿ ಪ್ರೇಕ್ಷಕರು.
  • ಮೈದಾನದ ಹೊರಗೂ ದಾಖಲೆ ಬರೆದ ಕ್ಯಾಪ್ಟನ್‌ ಕೂಲ್‌.
MS Dhoni : ಓಟಿಟಿಯಲ್ಲಿ ದಾಖಲೆ ಬರೆದ ʼಧೋನಿ ಸಿಕ್ಸ್‌ʼ : ಕ್ಯಾಪ್ಟನ್‌ ಕೂಲ್‌ ಆರ್ಭಟ ವೀಕ್ಷಿಸಿದ ʼ2.2 ಕೋಟಿ ಜನʼ title=

MS Dhoni six : ರಾಜಸ್ಥಾನ ರಾಯಲ್ಸ್ ವಿರುದ್ಧದ ಟಾಟಾ ಐಪಿಎಲ್ ಪಂದ್ಯದಲ್ಲಿ ರನ್ ಚೇಸಿಂಗ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಸಿಕ್ಸರ್ ಸಿಡಿಸಿದಾಗ ಜಿಯೋ ಸಿನೆಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ದಾಟಿದೆ. ಟೂರ್ನಿಯ ಆನ್ಲೈನ್ ಲೈವ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಜಿಯೋ ಸಿನೆಮಾದಲ್ಲಿ ಪ್ರಸ್ತುತ 2023ರ ಸೀಸನ್ ನಲ್ಲಿ ಇದು ಅತಿ ಹೆಚ್ಚು ವೀಕ್ಷಕರ ದಾಖಲೆ ಆಗಿದೆ.

ಕೊನೆಯ ಎಸೆತದವರೆಗೂ ವೀಕ್ಷಕರು ಉಸಿರು ಬಿಗಿಹಿಡಿದುಕೊಂಡು ಪಂದ್ಯದ ಏರಿಳಿತಗಳನ್ನು ವೀಕ್ಷಿಸಿದರು. ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಹಳೆಯ ದಿನಗಳ ಝಲಕ್ ತೋರಿಸಿದರು. ಅತ್ಯುತ್ತಮ ಫಿನಿಷರ್ ಎಂದು ಪರಿಗಣಿಸಲ್ಪಟ್ಟಿರುವ ಧೋನಿ ಕೊನೆಯ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ಆದರೆ, ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಬಿಟ್ಟುಕೊಟ್ಟರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮೂರು ರನ್ಗಳಿಂದ ಸೋತಿತು. 

No description available.

ಇದನ್ನೂ ಓದಿ:Sunil Gavaskar: ಈ ಅನುಭವಿ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ಶಾಕಿಂಗ್ ಹೇಳಿಕೆ! ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ

ಧೋನಿ 188ರ ಸ್ಟ್ರೈಕ್ ರೇಟ್ನೊಂದಿಗೆ 17 ಎಸೆತಗಳಲ್ಲಿ 32 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು. ಐಪಿಎಲ್ನ ಈ ಕುತೂಹಲಕಾರಿ ಪಂದ್ಯ ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಿತು. ವೀಕ್ಷಕರ ವಿಷಯದಲ್ಲಿ, ಟಾಟಾ ಐಪಿಎಲ್-2023ರ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಜಿಯೋಸಿನಿಮಾ ಕಳೆದ ವಾರಾಂತ್ಯದಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ.

ಮೊದಲ ವಾರಾಂತ್ಯದಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯು ಸಂಪೂರ್ಣ ಹಿಂದಿನ ಋತುವಿನಲ್ಲಿ ವೀಡಿಯೊ ವೀಕ್ಷಣೆಗಳ ಸಂಖ್ಯೆಯನ್ನು ಮೀರಿಸಿದೆ. ಜಿಯೋಸಿನೆಮಾದಲ್ಲಿ ವೀಡಿಯೊ ದಾಖಲೆಗಳು 147 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಕಂಡವು. ಜಿಯೋಸಿನೆಮಾದಲ್ಲಿ ಪ್ರತಿ ಪಂದ್ಯಕ್ಕೆ ಪ್ರತಿ ವೀಡಿಯೊಗೆ ಖರ್ಚು ಮಾಡುವ ಸಮಯವು ಶೇಕಡ 60ರಷ್ಟು ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News