Harbhajan Singh And S Sreesanth Viral Video: ಐಪಿಎಲ್ 2008 ರಲ್ಲಿ ಪ್ರಾರಂಭವಾಗಿತ್ತು. ಮೊದಲ ಸೀಸನ್‌ನಲ್ಲಿ ಹರ್ಭಜನ್ ಸಿಂಗ್ ಐಪಿಎಲ್’ನ ದೊಡ್ಡ ವಿವಾದಗಳಲ್ಲಿ ಸಿಲುಕಿಕೊಂಡರು. ಹರ್ಭಜನ್ ವೇಗದ ಬೌಲರ್ ಎಸ್ ಶ್ರೀಶಾಂತ್’ಗೆ ಮೈದಾನದಲ್ಲೇ ಕಪಾಳಮೋಕ್ಷ ಮಾಡಿದ್ದರು. ಪಂದ್ಯ ಸೋತ ನಂತರ ಹರ್ಭಜನ್ ಸಿಂಗ್ ಕೋಪದಲ್ಲಿ ಈ ರೀತಿ ಮಾಡಿದ್ದಾರೆ. ಈ ಕಪಾಳಮೋಕ್ಷ ಘಟನೆಯನ್ನು ಯಾರೂ ಮರೆತಿಲ್ಲ. ಅವರು ಇತ್ತೀಚೆಗೆ ಆ ಘಟನೆಯ ಬಗ್ಗೆ ವಿಷಾದ .
ಇದನ್ನೂ ಓದಿ: 10 Rupee Old Note: ನಿಮ್ಮ ಬಳಿ 10 ರೂ.ನ ಹಳೆ ನೋಟು ಇದ್ಯಾ? ಒಂದು ನಿಮಿಷದಲ್ಲಿ 25 ಸಾವಿರ ಗಳಿಸಬಹುದು
14 ವರ್ಷಗಳ ನಂತರ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದೆಲ್ಲದರ ನಡುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಈ ಇಬ್ಬರೂ ಆಟಗಾರರು ಜಗಳವಾಡುತ್ತಿರುವುದನ್ನು ಕಾಣಬಹುದು.
ಐಪಿಎಲ್ ಮಧ್ಯೆ ಹರ್ಭಜನ್-ಶ್ರೀಶಾಂತ್ ಮತ್ತೆ ಕಿತ್ತಾಟ!
ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಾರಿ ಇಬ್ಬರೂ ಆಟಗಾರರು ಲಿಫ್ಟ್ ನಲ್ಲಿ ಜಗಳವಾಡುತ್ತಿರುವುದು ಕಂಡುಬಂದಿದೆ. ಒಂದು ಪದದ ಉಚ್ಚಾರಣೆಯ ಬಗ್ಗೆ ಇಬ್ಬರಲ್ಲೂ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆ ಕಡೆಗೆ ತಾರಕಕ್ಕೇರುತ್ತದೆ. ಈ ವೇಳೆ ಲಿಫ್ಟ್‌ನಲ್ಲಿದ್ದ ಯುವತಿಯೊಬ್ಬಳು ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದಳು. ಈ ವಿಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ. ಆದರೆ ಈ ವೀಡಿಯೊ ಜಾಹೀರಾತು ಶೂಟ್ ಆಗಿದೆ, ಇದನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಹಂಚಿಕೊಂಡಿದ್ದಾರೆ.
IPL 2008 ರಲ್ಲಿ, ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಮತ್ತು S ಶ್ರೀಶಾಂತ್ ಕಿಂಗ್ಸ್ XI ಪಂಜಾಬ್’ನ ಭಾಗವಾಗಿ ಆಡುತ್ತಿದ್ದರು. ಐಪಿಎಲ್’ನಲ್ಲಿನ ಈ ಘಟನೆಯ ನಂತರ, ಹರ್ಭಜನ್’ರನ್ನು ಸೀಸನ್’ನಿಂದ ನಿಷೇಧಿಸಲಾಯಿತು, ಅಷ್ಟೇ ಅಲ್ಲ ಅವರನ್ನು ಐದು ODIಗಳಿಂದಲೂ ನಿಷೇಧಿಸಲಾಯಿತು.
ಕಳೆದ ವರ್ಷ ಗ್ಲಾನ್ಸ್ ಲೈವ್ ಫೆಸ್ಟ್’ನಲ್ಲಿ ಮಾತನಾಡುತ್ತಿದ್ದ ಹರ್ಭಜನ್ ಸಿಂಗ್, 'ನಡೆದದ್ದು ತಪ್ಪಾಗಿದೆ. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು ಮತ್ತು ನನಗೂ ಮುಜುಗರವಾಯಿತು. ಒಂದು ವೇಳೆ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಕ್ಕರೆ ಒಳ್ಳೆಯದು” ಎಂದು ಹೇಳಿದ್ದಾರೆ.
Can't believe Bhajji pa and Sree fought once again 😪@harbhajan_singh @sreesanth36 #zomatovszomato #Ad pic.twitter.com/sVvIoT9tvL
— Rishabh Pant (@RishabhPant17) April 12, 2023
ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ
ಶ್ರೀಶಾಂತ್ ಭಾರತದ ಸ್ಟಾರ್ ವೇಗದ ಬೌಲರ್’ಗಳಲ್ಲಿ ಒಬ್ಬರು. 2007 ಮತ್ತು 2011ರ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. 27 ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ, ಅವರು ಭಾರತಕ್ಕಾಗಿ 53 ODI ಮತ್ತು 10 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 169 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಶ್ರೀಶಾಂತ್ ಐಪಿಎಲ್’ನಲ್ಲಿ 44 ಪಂದ್ಯಗಳನ್ನು ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.