ಅಂತಿಮ ಕ್ಷಣದಲ್ಲಿ ವಿಶ್ವಕಪ್’ನಿಂದ ಟೀಂ ಇಂಡಿಯಾದ 6 ಸ್ಟಾರ್ ಪ್ಲೇಯರ್ಸ್ ಔಟ್! ಬದಲಿಗೆ ಈ ಆಟಗಾರರಿಗೆ ಸ್ಥಾನ..

Players Dropped From World Cup India Team: ಟೀಂ ಇಂಡಿಯಾ ತಂಡ ಪ್ರಕಟವಾಗುವ ಸಮಯದಲ್ಲಿ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಆಟಗಾರರು ವರ್ಷಪೂರ್ತಿ ಭಾರತದ ಗೆಲುವಿಗೆ ಶ್ರಮ ವಹಿಸಿ, ಮಿಂಚಿನ ಪ್ರದರ್ಶನ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

Written by - Bhavishya Shetty | Last Updated : Oct 1, 2023, 07:27 AM IST
    • ವಿಶ್ವ ಟೂರ್ನಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಭಾರತ ಆತಿಥ್ಯ ವಹಿಸಿದೆ
    • ಟೀಂ ಇಂಡಿಯಾ ತಂಡ ಪ್ರಕಟವಾಗುವ ಸಮಯದಲ್ಲಿ 6 ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು
    • ಆರು ಆಟಗಾರರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಅಂತಿಮ ಕ್ಷಣದಲ್ಲಿ ವಿಶ್ವಕಪ್’ನಿಂದ ಟೀಂ ಇಂಡಿಯಾದ 6 ಸ್ಟಾರ್ ಪ್ಲೇಯರ್ಸ್ ಔಟ್! ಬದಲಿಗೆ ಈ ಆಟಗಾರರಿಗೆ ಸ್ಥಾನ.. title=
World Cup 2023

World Cup Team India Squad: ಅಕ್ಟೋಬರ್ 5 ರಿಂದ ಕ್ರಿಕೆಟ್ ಕುಂಭಮೇಳ ಪ್ರಾರಂಭವಾಗಲಿದೆ. ವಿಶ್ವ ಟೂರ್ನಿಗೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿದ್ದು, ಭಾರತ ಆತಿಥ್ಯ ವಹಿಸಿದೆ. ಈ ಬಾರಿ ಹೇಗಾದರೂ ಟ್ರೋಫಿ ಗೆದ್ದು, ಟೀಂ ಇಂಡಿಯಾದ ಬಹುವರುಷಗಳ ಕನಸನ್ನು ನನಸು ಮಾಡಲು ರೋಹಿತ್ ಪಡೆ ಕಾತುರದಿಂದ ಕಾಯುತ್ತಿದೆ.

ಮತ್ತೊಂದೆಡೆ ಟೀಂ ಇಂಡಿಯಾ ತಂಡ ಪ್ರಕಟವಾಗುವ ಸಮಯದಲ್ಲಿ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಆಟಗಾರರು ವರ್ಷಪೂರ್ತಿ ಭಾರತದ ಗೆಲುವಿಗೆ ಶ್ರಮ ವಹಿಸಿ, ಮಿಂಚಿನ ಪ್ರದರ್ಶನ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಅಂತಹ ಆರು ಆಟಗಾರರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ತಿಂಗಳ ಆರಂಭ ಈ ರಾಶಿಗೆ ತರಲಿದೆ ಸೌಭಾಗ್ಯ! ಇಂದಿನಿಂದ ವ್ಯಾಪಾರದಲ್ಲಿ ನಿರೀಕ್ಷೆ ಮೀರಿದ ಧನಲಾಭ

ಭುವನೇಶ್ವರ್‌ ಕುಮಾರ್‌: ಒಂದು ಕಾಲದಲ್ಲಿ ಟೀಂ ಇಂಡಿಯಾವನ್ನು ಸ್ವಂತ ಬಲದಿಂದ ಗೆಲ್ಲಿಸಿಕೊಡುವ ಸಾಮಾರ್ಥ್ಯ ಹೊಂದಿದ್ದ ಭುವನೇಶ್ವರ್‌ ಕುಮಾರ್‌ ಈ ಬಾರಿಯ ವಿಶ್ವಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಮೊಹಮ್ಮದ್‌ ಸಿರಾಜ್‌ ಟೀಂ ಇಂಡಿಯಾದಲ್ಲಿ ಭದ್ರ ಬುನಾದಿ ಹಾಕಿದ್ದೇ ತಡ, ಭುವಿಯ ಸ್ಥಾನಕ್ಕೆ ಕುತ್ತು ತಂದಿದೆ.

ಯುಜ್ವೇಂದ್ರ ಚಹಾಲ್‌: ಭಾರತದ ಪ್ರಭಾವಿ ಸ್ಪಿನ್ನರ್‌’ಗಳಲ್ಲಿ ಒಬ್ಬರಾದ ಯುಜ್ವೇಂದ್ರ ಚಹಾಲ್‌ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಬಗ್ಗೆ ಅನೇಕ ದಿಗ್ಗಜರು ಸೇರಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಸಂಜು ಸ್ಯಾಮ್ಸನ್: ಸಂಜು ಸ್ಯಾಮ್ಸನ್‌’ಗೆ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ಕೆ ಎಲ್ ರಾಹುಲ್ ಭರ್ಜರಿ ಕಂಬ್ಯಾಕ್ ಮಾಡಿದ ಕಾರಣ ಅವರಿಗೆ ಸ್ಥಾನ ಲಭಿಸಿತು.

ಶಿಖರ್ ಧವನ್: ಟೀಂ ಇಂಡಿಯಾದ ದಿಗ್ಗಜ ಆರಂಭಿಕ ಬ್ಯಾಟ್ಸ್’ಮನ್, ದಾಖಲೆಗಳ ವೀರ ಶಿಖರ್‌ ಧವನ್ ಕಳೆದ ಕೆಲ ಸಮಯದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಜೊತೆಗೆ ಈ ಬಾರಿಯ ವಿಶ್ವಕಪ್‌ ತಂಡದಿಂದ ಅವಕಾಶ ವಂಚಿತರಾಗಿದ್ದಾರೆ.

ರಿಷಬ್ ಪಂತ್‌: ಕಾರು ಅಪಘಾತದಿಂದ ಗಾಯಗೊಂಡು, ಇದೀಗ ಚೇತರಿಸಿಕೊಳ್ಳುತ್ತಿರುವ ರಿಷಬ್‌ ಪಂತ್‌ ಕೂಡ ವಿಶ್ವಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: 2024ರವರೆಗೆ ಈ ರಾಶಿಯವರದ್ದು ರಾಜರಂತಹ ಜೀವನ! ಸಂಪತ್ತಿನ ಸುರಿಮಳೆ, ದಾರಿದ್ರ್ಯ ದೂರವಾಗಿಸಿ ಅಕ್ಷಯ ಧನವನ್ನೇ ಸುರಿಸಲಿದ್ದಾನೆ ಶನಿ

ಅಕ್ಷರ್‌ ಪಟೇಲ್: ಏಷ್ಯಾ ಕಪ್‌ 2023ರ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದ ಅಕ್ಷರ್‌ ಪಟೇಲ್‌, ವಿಶ್ವಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನು ಮೊದಲ ಬಾರಿ ಬಿಡುಗಡೆಗೊಂಡಿದ್ದ ತಂಡದಲ್ಲಿ ಅಕ್ಷರ್‌ ಸ್ಥಾನ ಪಡೆದಿದ್ದರು. ಆದರೆ ಆ ಬಳಿಕ ಹೊರಡಿಸಿದ ಪರಿಷ್ಕೃತ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಆರ್‌ ಅಶ್ವಿನ್‌ ಸೇರಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News